Advertisement

ಕಲಬುರಗಿಯಲ್ಲಿ ದ್ವಿಶತಕ ಬಾರಿಸಿದ ಕೋವಿಡ್: ಮಾರಕವಾಗುತ್ತಿದೆ ಮಹಾರಾಷ್ಟ್ರ ನಂಟು

04:07 PM May 29, 2020 | keerthan |

ಕಲಬುರಗಿ: ಕೋವಿಡ್-19 ‌ಸೋಂಕಿನ ಹಾಟ್ ಸ್ಪಾಟ್ ಆಗಿರುವ ಸೂರ್ಯನಗರಿ ಕಲಬುರಗಿಯಲ್ಲಿ ಶುಕ್ರವಾರ ಮತ್ತೆ 15 ಜನರಿಗೆ ಮಹಾಮಾರಿ‌ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕೋವಿಡ್ ಸೋಂಕಿತರ ಸಂಖ್ಯೆ ದ್ವಿಶತಕ (205) ದ ಗಡಿ ದಾಟಿದೆ.

Advertisement

ಈಗಾಗಲೇ ಕೋವಿಡ್ ಸೋಂಕಿನ ಹಾವಳಿಯಿಂದ ತತ್ತರಿಸಿರುವ ಬಿಸಿಲೂರಲ್ಲಿ ಮಹಾರಾಷ್ಟ್ರ ಸೋಂಕಿನ ನಂಟು ವ್ಯಾಪಕವಾಗಿ ಹರಡುತ್ತಿದೆ.‌ ಶುಕ್ರವಾರ ಆರು ವರ್ಷದ ಬಾಲಕ, ಮೂವರು ಬಾಲಕಿಯರು, ಐವರು ಮಹಿಳೆಯರು, ಆರು ಜನ ಪುರುಷರಿಗೆ ಸೋಂಕು ಹರಡಿದೆ.

12 ದಿನದಲ್ಲೇ ‘ಮಹಾ’ ಶತಕ: ಮಾ.12ರಂದು ದೇಶದಲ್ಲೇ ಮೊದಲು ಬಿಸಿಲೂರು ವೃದ್ಧನನ್ನು ಬಲಿ ಪಡಿಯುವ ಮೂಲಕ ಕೋವಿಡ್-19 ಸೋಂಕು ಸಂಚಲನ ಮೂಡಿಸಿತ್ತು. ಈ ಮೂಲಕ ಜಿಲ್ಲೆಯಲ್ಲಿ ತನ್ನ ಹಾವಳಿ ‌ಶುರು ಮಾಡಿದ್ದ ಕೋವಿಡ್, ನಂತರದಲ್ಲಿ ದೆಹಲಿಗೆ ಹೋಗಿ ಬಂದವರ ಸಂಪರ್ಕ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ವಕ್ಕರಿಸಿ ಆತಂಕ ಸೃಷ್ಟಿಸಿತ್ತು.

ಈ ನಡುವೆ ಮೇ 10ರಿಂದ ‘ಮಹಾ’ ಸೋಂಕಿನ ನಂಟು ಅಟ್ಟಹಾಸ ಮೆರೆಯುತ್ತಿದ್ದು, 65 ದಿನಗಳಲ್ಲಿ (ಮೇ 17) ಕೋವಿಡ್ ಸೋಂಕು ಮೊದಲು ಶತಕದ ಗಡಿದಾಡುವಂತೆ ಮಾಡಿತ್ತು. ಇದೀಗ 12 ದಿನದಲ್ಲೇ ‘ಮಹಾ’ ಸೋಂಕಿತರ ಸಂಖ್ಯೆ ನೂರರ ಗಡಿ ಮೀರಿದೆ. ಇಲ್ಲಿಯವರೆಗೆ ಮಹಾರಾಷ್ಟ್ರದಿಂದ ಮರಳಿದ ಒಟ್ಟು 113 ಜನರಿಗೆ ಸೋಂಕು ಕಾಣಿಸಿಕೊಂಡಂತೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next