ಜೋಹಾನ್ಸ್‌ಬರ್ಗ್: ಎರಡೂವರೆ ತಿಂಗಳ ಹಿಂದಿನಿಂದ ವಿಶ್ವದೆಲ್ಲೆಡೆ ಬರೀ ಕೋವಿಡ್-19 ರಣ ಕಹಳೆಯದೇ ಸದ್ದು. ಈ ಮಹಾಯುದ್ಧದಲ್ಲಿ ಕೆಲ ದೇಶಗಳು ಸೆಣಸಾಡಿ ನಿಟ್ಟುಸಿರು ಬಿಡುವ ಹಂತ ತಲುಪಿ ಮತ್ತೇ ಎಡವಿದ್ದರೆ, ಹಲವು ದೇಶಗಳು ಇಂದಿಗೂ ಶಸ್ತ್ರ ಸನ್ನದ್ಧವಾಗಿ ಸೋಂಕಿನ ವಿರುದ್ಧ ಹೋರಾಡುತ್ತಲೇ ಇವೆ. ಆದರೆ ವಾಸ್ತವವನ್ನು ಅರಿಯದೇ ಮತ್ತೂ ಕೆಲವು ದೇಶಗಳು ಜನರನ್ನು ಸಂಕಷ್ಟಕ್ಕೆ ಒಳಗಾಗಿಸುತ್ತಿವೆ.ಇದೀಗ ಅಂಥದೊಂದು ಟೀಕೆಗೆ ಆಫ್ರಿಕಾ ಖಂಡ ಗುರಿಯಾಗಿದ್ದು, ಕೋವಿಡ್-19 ನಿಯಂತ್ರಣ ಹೋರಾಟದಲ್ಲಿ ಜಾಗತಿಕವಾಗಿ ಬಹಳಷ್ಟು ಹಿಂದುಳಿದಿದೆ ಎಂಬ ಅಪಖ್ಯಾತಿಗೆ ಒಳಗಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮ ವಾಷಿಂಗ್‌ಟನ್ ಪೋಸ್ಟ್ ವರದಿ ಮಾಡಿದೆ.
ಸಾವಿನ ಕೂಪದ ಸಾಮೀಪ್ಯ
ಅತ್ಯಂತ ದುರ್ಬಲ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ಈ ಖಂಡದ ಬಹಳಷ್ಟು ದೇಶಗಳು ಉಲ್ಬಣಗೊಳ್ಳುತ್ತಿರುವ ಸೋಂಕಿಗೆ ಬೆಚ್ಚಿ ಬಿದ್ದಿವೆ. ಸದ್ಯದ ಮಾಹಿತಿಯಂತೆ 10 ದೇಶಗಳನ್ನು ವೈದ್ಯಕೀಯ ಉಪಕರಣಗಳ ಕೊರತೆಯಿಂದಾಗಿ ಜನರನ್ನು ಸಾವಿನ ಕೂಪಕ್ಕೆ ತಳ್ಳುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಈ ದೇಶ ಮೊದಲೇ ವೆಂಟಿಲೇಟರ್ ಸೇರಿದಂತೆ ಇತರೆ ವೈದ್ಯಕೀಯ ಸಂರಕ್ಷಣಾ ಸಾಮಗ್ರಿಗಳ ಅಭಾವ ಎದುರಿಸುತ್ತಿತ್ತು. ಈ ವೇಳೆ ಸಹಾಯ ಹಸ್ತ ನೀಡಲು ಬಂದ ಯುನೈಟೆಡ್ ಸ್ಟೇಟ್ಸ…ನಿಂದ ವೈದ್ಯಕೀಯ ಸಾಧನಗಳನ್ನು ಪಡೆಯಲು ನಿರಾಕರಿಸಿದ್ದು, ಆದರೆ ಇದೀಗ ಪ್ರಕರಣಗಳ ಸಂಖ್ಯೆ 25 ಸಾವಿರ ಗಡಿ ದಾಟಿದೆ. ಪ್ರಸ್ತುತ ಕನಿಷ್ಠ ಪ್ರಮಾಣದ ವೈದ್ಯಕೀಯ ಉಪಕರಣಕ್ಕಾಗಿ ಪರದಾಡುತ್ತಿವೆ. ಸದ್ಯ ಈ ಖಂಡದ 1.3 ಬಿಲಿಯನ್ ಜನರಿಗೆ 74 ಮಿಲಿಯನ್ ಟೆಸ್ಟ್ ಕಿಟ್‌ಗಳು ಮತ್ತು 30,000 ವೆಂಟಿಲೇಟರ್‌ಗಳು ಬೇಕಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.