Advertisement

ಭಾರತದ ಬಾಕ್ಸರ್‌ಗಳಿಗೆ ಕೋವಿಡ್ : ಫೈನಲ್‌ ಸ್ಪರ್ಧೆಯಿಂದ ಹಿಂದಕ್ಕೆ

10:32 PM Mar 07, 2021 | Team Udayavani |

ಹೊಸದಿಲ್ಲಿ: ಸ್ಪೇನ್‌ನಲ್ಲಿ ನಡೆಯುತ್ತಿರುವ 35ನೇ ಬಾಕ್ಸಮ್‌ ಬಾಕ್ಸಿಂಗ್‌ ಟೂರ್ನಿಯ ಫೈನಲ್‌ ತಲುಪಿರುವ ಭಾರತದ ಮೂವರು ಬಾಕ್ಸರ್‌ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಇವರೆಲ್ಲ ಪ್ರಶಸ್ತಿ ಸುತ್ತಿನಿಂದ ಹಿಂದೆ ಸರಿದಿದ್ದಾರೆ.

Advertisement

ಒಲಿಂಪಿಕ್‌ ಅರ್ಹತೆ ಸಂಪಾದಿಸಿದ ಆಶಿಷ್‌ ಕುಮಾರ್‌ (75 ಕೆ.ಜಿ.), ಮೊಹಮ್ಮದ್‌ ಹುಸ್ಸಮುದ್ದೀನ್‌ (57 ಕೆ.ಜಿ.) ಮತ್ತು ಸುಮಿತ್‌ ಸಂಗ್ವಾನ್‌ (81 ಕೆ.ಜಿ.) ಅವರ ಕೊರೊನಾ ಟೆಸ್ಟ್‌ ಫ‌ಲಿತಾಂಶ ಪಾಸಿಟಿವ್‌ ಬಂದಿದೆ. ಇವರೆಲ್ಲ ಶನಿವಾರ ರಾತ್ರಿಯ ಫೈನಲ್‌ನಲ್ಲಿ ಸೆಣಸಬೇಕಿತ್ತು. ಈಗ ಮೂವರೂ ಬೆಳ್ಳಿ ಪದಕಕ್ಕೆ ತೃಪ್ತರಾಗಬೇಕಾಯಿತು. ಹಾಗೆಯೇ ಸತೀಶ್‌ ಕುಮಾರ್‌ (+91 ಕೆ.ಜಿ.) ಅನಾರೋಗ್ಯದಿಂದಾಗಿ ಫೈನಲ್‌ನಿಂದ ಹಿಂದೆ ಸರಿದಿದ್ದರು.

ಈ ಪಂದ್ಯಾವಳಿಯಲ್ಲಿ ಭಾರತಕ್ಕೆ ಏಕೈಕ ಚಿನ್ನ ತಂದಿತ್ತವರೆಂದರೆ ಮನೀಷ್‌ ಕೌಶಿಕ್‌ (63 ಕೆ.ಜಿ.).

ಇದನ್ನೂ ಓದಿ :ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್‌

Advertisement

Udayavani is now on Telegram. Click here to join our channel and stay updated with the latest news.

Next