Advertisement
ಪೀಣ್ಯ ಅಗ್ನಿಶಾಮಕ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಗುರುವಾರ ಕೋವಿಡ್ ಸೋಂಕು ಧೃಡಪಟ್ಟಿದೆ. ಇದರೊಂದಿಗೆ ಬೆಂಗಳೂರಿನಲ್ಲೇ ಕೋವಿಡ್ ಸೋಂಕಿಗೆ ತುತ್ತಾದ ಸಿಬ್ಬಂದಿಯ ಸಂಖ್ಯೆ 42ಕ್ಕೆ ಏರಿದೆ.
Related Articles
ಮತ್ತೂಂದೆಡೆ ಖನಿಜ ಭವನದಲ್ಲಿರುವ ಎಸಿಬಿಯ ಡಿವೈಎಸ್ಪಿಯೊಬ್ಬರಿಗೂ ಕೋವಿಡ್ ಸೋಂಕು ಧೃಡಪಟ್ಟಿದೆ. ಎಸಿಬಿಯಲ್ಲಿ ಇದು ಎರಡನೇ ಕೋವಿಡ್ ಸೋಂಕು ಪ್ರಕರಣವಾಗಿದೆ.
Advertisement
ಸೋಂಕು ಧೃಡಪಟ್ಟ ಡಿವೈಎಸ್ಪಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಅವರ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕಲಾಸಿಪಾಳ್ಯ ಠಾಣೆಗೆ ಕಮಿಷನರ್ ಭೇಟಿ!ನಗರದ ಠಾಣೆಗಳ ಪೈಕಿ ಅತಿ ಹೆಚ್ಚು ಸಿಬ್ಬಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಸೀಲ್ ಡೌನ್ ಆಗಿದ್ದ ಕಲಾಸಿ ಪಾಳ್ಯ ಠಾಣೆ ಪುನ: ಕಾರ್ಯಾರಂಭ ಮಾಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಠಾಣೆಗೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ , ಸಿಬ್ಬಂದಿಯ ಯೋಗ ಕ್ಷೇಮ ವಿಚಾರಿಸಿದರು. ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ.ಪೊಲೀಸ್ ಇಲಾಖೆ ಹಾಗೂ ಸರ್ಕಾರ ನಿಮ್ಮ ಬೆನ್ನಿಗಿದೆ ಎಂದು ಧೈರ್ಯ ತುಂಬಿ ಚಿಕಿತ್ಸೆ ಪಡೆದು ಗುಣಮುಖರಾದ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದರು.