Advertisement

ಹೂ ವ್ಯಾಪಾರದ ಮೇಲೆ ಕೋವಿಡ್ 19 ಕರಿ ನೆರಳು

08:44 PM Apr 13, 2020 | Sriram |

ಉಡುಪಿ: ಸಾಲು ಸಾಲು ಜಾತ್ರೆಗಳು, ಸಂಕ್ರಮಣ, ಸೌರಮಾನ ಯುಗಾದಿ ಮೊದಲಾದ ಹಬ್ಬಹರಿದಿನಗಳು. ಇಷ್ಟೆಲ್ಲ ಇದ್ದರೂ ಹೂವುಗಳಿಗೆ ಮಾತ್ರ ಬೇಡಿಕೆ ಇಲ್ಲ. ಕಾರಣ ಲಾಕ್‌ಡೌನ್‌. ಸದ್ಯ ದಿನಸಿ ತರಕಾರಿ ವಸ್ತುಗಳ ಮಾರಾಟಕ್ಕೆ ಮಾತ್ರ ನಿಗದಿತ ಅವಧಿಯಲ್ಲಿ ಸೂಚಿಸಲಾಗಿದೆ. ನಗರ ಭಾಗದಲ್ಲಿ ಹೂವಿನ ಮಾರುಕಟ್ಟೆ ಎಲ್ಲಿಯೂ ತೆರೆಯದೆ ಇರುವುದರಿಂದ ಮನೆಗೆ ಬೇಕಾಗುವ ಹೂಗಳ ಲಭ್ಯತೆಯೂ ಜನರಿಗೆ ಇಲ್ಲವಾಗಿದೆ.

Advertisement

ನಷ್ಟದಲ್ಲಿ ಹೂ ವ್ಯಾಪಾರ
ನಗರದ ಹೂ ಮಾರುಕಟ್ಟೆಗೆ ಮೈಸೂರು, ಬೆಂಗಳೂರು, ಚಿತ್ರದುರ್ಗ, ತುಮಕೂರು ಭಾಗದಿಂದ ಹೂಗಳು ಪೂರೈಕೆ ಆಗುತ್ತಿದ್ದವು.
ಮಾರ್ಚ್‌ – ಎಪ್ರಿಲ್‌ನಲ್ಲಿ ಸಾಲು-ಸಾಲು ಹಬ್ಬಗಳ ಸೀಝನ್‌ ಆದ್ದರಿಂದ ಲಕ್ಷಗಟ್ಟಲೆ ಹೂವಿನ ವ್ಯಾಪಾರಗಳು ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ನಡೆಯುತ್ತಿತ್ತು. ವ್ಯಾಪಾರಿಗಳು 4 ಸಾವಿರದ ವರೆಗೆ ಲಾಭವನ್ನು ಗಳಿಸುತ್ತಿದ್ದರು. ಡೆಕೋರೇಷನ್‌ಗಾಗಿಯೆ 60 ರಿಂದ 80 ಸಾವಿರ ಮೊತ್ತದ ಹೂವುಗಳು ಬಳಕೆಯಾಗುತ್ತಿದ್ದವು. ಸದ್ಯ ವ್ಯಾಪಾರ ಸಂಪೂರ್ಣ ನಿಂತಿರುವುದರಿಂದ ಅತೀವ ನಷ್ಟವಾಗಿದೆ.

ಅವಕಾಶದ ನಿರೀಕ್ಷೆ
ತೋಟಗಾರಿಗೆ ಬೆಳೆಗಳಿಗೆ ಇರುವ ಅವಕಾಶ ಹೂ ಮಾರಾಟಗಾರರಿಗೂ ನೀಡಿದರೆ ಕಷ್ಟದಲ್ಲಿರುವ ವ್ಯಾಪಾರಿಗಳು -ಬೆಳೆಗಾರರಿಗೆ ಸ್ವಲ್ಪ ಅನುಕೂಲವಾಗಲಿದೆ.
– ವಿಷ್ಣು ಸಾಲ್ಯಾನ್‌, ಹೂ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next