ಬೀದರ್ : ಗಡಿ ಜಿಲ್ಲೆ ಬೀದರ್‌ಗೆ ಕೋವಿಡ್ ಮರ್ಮಾಘಾತ ನೀಡುತ್ತಿದ್ದು, ರವಿವಾರ ಮತ್ತೆ 9 ಮಂದಿ ಸೋಂಕಿತರನ್ನು ಬಲಿ ಪಡೆದು ಸಾವಿನ ರಣಕೇಕೆ ಮುಂದುವರೆಸಿದೆ.
ಹೆಮ್ಮಾರಿಯ ಅಟ್ಟಹಾಸಕ್ಕೆ ಜಿಲ್ಲೆಯಲ್ಲಿ ಈವರೆಗೆ 37 ಜನರು ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಶನಿವಾರಷ್ಟೇ 6 ಮಂದಿ ಸೋಂಕಿತರ ಬೇಟೆಯಾಡಿರುವ ರಕ್ಕಸ ಕೋವಿಡ್‌ಮರು ದಿನ ರವಿವಾರ 9 ಜನರನ್ನು ಸಾವಿನ ಕೂಪಕ್ಕೆ ತಳ್ಳಿದೆ. ಎರಡು ದಿನದಲ್ಲಿ 15 ಜನ ಮೃತಪಟ್ಟಿದ್ದಾರೆ.
70 ವರ್ಷದ ಪುರುಷ ಪಿ ಬಿಡಿಆರ್ 727, 25 ವರ್ಷದ ಯುವತಿ ಪಿ ಬಿಡಿಆರ್ 728, 45 ವರ್ಷದ ಪುರುಷ ಪಿ ಬಿಡಿಆರ್ 729, 54ವರ್ಷದ ಪುರುಷ ಪಿ ಬಿಡಿಆರ್ 730, 63ವರ್ಷದ ಪುರುಷ ಪಿ ಬಿಡಿಆರ್ 731, 45ವರ್ಷದ ಪುರುಷ ಪಿ ಬಿಡಿಆರ್ 732, 60 ವರ್ಷದ ಮಹಿಳೆ ಪಿ ಬಿಡಿಆರ್ 733, 65 ವರ್ಷದ ಪುರುಷ ಪಿ ಬಿಡಿಆರ್ 734 ಮತ್ತು 32 ವರ್ಷದ ಹೆಣ್ಣು ಪಿ ಬಿಡಿಆರ್ 735 ರೋಗಿಗಳಿಗೆ ಸೋಂಕು ಕಾಣಿಸಿಕೊಂಡಿದೆ.
ಈ ಪೈಕಿ ನಾಲ್ವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿರುವುದು ಆತಂಕವನ್ನುಂಟು ಮಾಡಿದೆ. ಇನ್ನುಳಿದ ನಾಲ್ವರು ಉಸಿರಾಟ, ಒಬ್ಬರು ಬೆನ್ನು ನೋವು ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದು, ಇವರೆಲ್ಲರಲ್ಲೂ ಸೋಂಕು ದೃಢಪಟ್ಟಿದೆ.
ಇನ್ನೊಂದೆಡೆ ಜಿಲ್ಲೆಯಲ್ಲಿ ರವಿವಾರ 29 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 755ಕ್ಕೆ ಏರಿಕೆ ಆಗಿದೆ. ಅದರಲ್ಲಿ 532 ಮಂದಿ ಗುಣಮುಖರಾಗಿದ್ದರೆ 187 ಕೇಸ್‌ಗಳು ಸಕ್ರೀಯವಾಗಿವೆ.