Advertisement

ಪೌರ ಕಾರ್ಮಿಕರಿಗೆ ಕೋವಿಡ್ 19 ಜಾಗೃತಿ

02:41 PM Mar 21, 2020 | Suhan S |

ಮುಳಗುಂದ: ಪಟ್ಟಣದ ಪೌರ ಕಾರ್ಮಿಕರಿಗೆ ಕೋವಿಡ್ -19 ಮುಂಜಾಗೃತಾ ಕ್ರಮ ಹಾಗೂ ಸುರಕ್ಷತೆ ಅಳವಡಿಸಿಕೊಳ್ಳುವ ಕುರಿತು ಜಾಗೃತಿ ಕಾರ್ಯಕ್ರಮ ಪಪಂ ಕಾರ್ಯಾಲಯದಲ್ಲಿ ಜರುಗಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಡಾ| ಅಶ್ವಿ‌ನಿ ಕಬಾಡಿ, ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರು ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು. ಪ್ರಮುಖವಾಗಿ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಯಾವುದೇ ರೋಗ ಲಕ್ಷಣಗಳಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.

ಮುಖ್ಯಾಧಿಕಾರಿ ಎಂ.ಎಸ್‌. ಬೆಂತೂರ ಮಾತನಾಡಿ, ಪಟ್ಟಣದಲ್ಲಿ ಮುಂಜಾಗೃತಾ ಕ್ರಮವಾಗಿ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಖರೀದ ಪದಾರ್ಥ, ಎಗ್‌ರೈಸ್‌, ಪಾನಿಪುರಿ, ಹಣ್ಣು ಹೆಚ್ಚಿ ಮಾರುವುದು, ಬೀದಿ ವ್ಯಾಪಾರ ಹಾಗೂ ವಾರದ ಸಂತೆಯನ್ನು ರದ್ದುಗೊಳಿಸಲಾಗಿದ್ದು, ಕೊರೊನಾ ನಿರ್ನಾಮ ಮಾಡಲು ಎಲ್ಲರೂ ಜಾಗೃತಿಯಿಂದಿರಬೇಕು ಎಂದರು.

ಪಪಂ ಸದಸ್ಯ ಷಣ್ಮುಖಪ್ಪ ಬಡ್ನಿ, ಆರೋಗ್ಯ ಮೇಲ್ವಿಚಾರಕಿ ರೇಣುಕಾ, ಕ್ಷಯರೋಗ ನಿಯಂತ್ರಣಾಧಿಕಾರಿ ಬಾಗಡೆ, ಗುರು ಕೊಟ್ಯಾಳ, ರಾಘ ಬಾಗಲಿ, ವಾಣಿಶ್ರೀ ನಿರಂಜನ, ಎಂ. ನಾಯ್ಕರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next