ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್- 19 ಮಹಾಮಾರಿಗೆ ಬುಧವಾರ ಮತ್ತೊಂದು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ ಮೂರಕ್ಕೇರಿದೆ. ಮಹಾಮಾರಿಯ ಸಾವಿನ ಅಟ್ಟಹಾಸ ಬೆಳಗಾವಿ ನಗರಕ್ಕೆ ಕಾಲಿಟ್ಟಿದ್ದರಿಂದ ಆತಂಕ ಹೆಚ್ಚಾಗಿದೆ.
10 ದಿನಗಳ ಹಿಂದೆಯೇ ಬೆಂಗಳೂರಿನಿಂದ ಆಗಮಿಸಿದ್ದ ಬೆಳಗಾವಿಯ ಶಾಸ್ತ್ರಿ ನಗರದ ವೃದ್ಧ ತೀವ್ರ ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದಾರೆ.
ತೀವ್ರ ಉಸಿರಾಟ ತೊಂದರೆಯಿಂದಾಗಿ ವೃದ್ಧನನ್ನುಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಿಸದೇ ವೃದ್ಧ ಮೃತಪಟ್ಟಿದ್ದಾನೆ.
ಸೋಮವಾರ ಬೆಳಗಿನ ಜಾವ 32 ವರ್ಷದ ಅಥಣಿ ತಾಲೂಕಿನ ಸಂಕೋನಟ್ಟಿಯ ವ್ಯಕ್ತಿ ಕೋವಿಡ್- 19ನಿಂದ ಮೃತಪಟ್ಟಿರುವುದು ದೃಢಪಟ್ಟಿತ್ತು. ಮೂರು ತಿಂಗಳ ಹಿಂದೆ ಹಿರೇಬಾಗೇವಾಡಿಯ ವೃದ್ಧೆ ಕೋವಿಡ್- 19ಗೆ ಬಲಿಯಾಗಿದ್ದಳು. ಸದ್ಯ ಜಿಲ್ಲೆಯಲ್ಲಿ ಮೂವರು ಬಲಿಯಾದಂತಾಗಿದೆ.