Advertisement

ಕೋವಿಡ್‌ 19: ಕೆಜಿಎಫ್ನಲ್ಲಿ ಮತ್ತೊಂದು ಬಲಿ

06:59 AM Jul 07, 2020 | Lakshmi GovindaRaj |

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ 19 ಆತಂಕ ಮುಂದುವರಿದಿದ್ದು, ಸೋಮವಾರ ಕೆಜಿಎಫ್ ನಲ್ಲಿ ಒಬ್ಬರು ಮೃತಪಟ್ಟಿದ್ದು, ಈವರೆಗೆ ಮೂವರು ಸಾವನಪ್ಪಿ, 10 ಮಂದಿಯಲ್ಲಿ ಪಾಸಿ ಟೀವ್‌ ಕಂಡು ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ  ಜಿಲ್ಲೆಯಲ್ಲಿ 184ಕ್ಕೇರಿದ್ದು, 10 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

ತಾಲೂಕಿನಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತೆಯರು, ಮುಳಬಾಗಿಲಿನ 5 ಜನರಲ್ಲಿ, ಕೆಜಿಎಫ್‌ನ ಇಬ್ಬರು ಹಾಗೂ ಬಂಗಾರಪೇಟೆಯ  ಒಬ್ಬರಲ್ಲಿ ಸೋಂಕು ದೃಢ ಪಟ್ಟಿದೆ. ಕೋಲಾರ ತಾಲೂಕಿನಲ್ಲಿ 27 ವರ್ಷದ ಆರೋಗ್ಯ ಕಾರ್ಯಕರ್ತೆ, 40 ವರ್ಷದ ಮಹಿಳೆ, ಕೆಜಿಎಫ್‌ನಲ್ಲಿ ಪಿ.18096 ಸಂಪರ್ಕ ದಿಂದ 45 ವರ್ಷದ ಮಹಿಳೆ ಮತ್ತು 33 ವರ್ಷದ ಪುರುಷ, ಬಂಗಾರಪೇಟೆ  ತಾಲೂಕಿನ ಪಿ.12007 ಸಂಪರ್ಕದಿಂದ 30 ವರ್ಷದ ಪುರುಷ,

ಮುಳಬಾಗಿಲು ತಾಲೂಕಿನಲ್ಲಿ ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿರುವ 46 ವರ್ಷದ ಇಬ್ಬರು ಪುರುಷರು, ಪಿ.18095 ಸಂಪರ್ಕದಿಂದ 22 ಮತ್ತು 26 ವರ್ಷದ  ಮಹಿಳೆಯರು, ಇದೇ ಸಂಪರ್ಕದಿಂದ 26 ವರ್ಷದ ಪುರುಷ ಸೋಂಕಿತರಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ. ಸೋಮವಾರ 10 ಮಂದಿ ಸೇರಿದಂತೆ ಈವರೆಗೂ ಒಟ್ಟು 82 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ  ಹೊಂದಿದ್ದಾರೆ.

ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 100 ಆಗಿದೆ. ತುರ್ತು ನಿಗಾ ಘಟಕದಲ್ಲಿ ಇಬ್ಬರು ಸೋಂಕಿತರು ಚಿಕಿತ್ಸೆ ಪಡೆ z ಯುತ್ತಿದ್ದಾರೆ. ಸೋಮವಾರ ಒಬ್ಬ ಸೇರಿ ಈವರೆಗೆ ಮೂವರು ಸಾವನ್ನಪ್ಪಿದ್ದಾರೆ. ಕೋಲಾರ ನಗರಸಭೆಯ  ಸಕ್ಕಿಂಗ್‌ ವಾಹನದ ಚಾಲಕನಿಗೂ ಕೋವಿಡ್‌ 19 ಸೋಂಕು ತಗುಲಿದ್ದು, ನಗರಸಭೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next