Advertisement
ಹೊಸ ಸಂವಹನ ನಿಯಮ ಜಾರಿಯಾಗಿಲ್ಲಭಾರತದಲ್ಲಿ ಹೊಸ ಸಂವಹನ ನಿಯಮಗಳು ಜಾರಿಗೆ ಬಂದಿವೆ. ಎಲ್ಲಾ ಕರೆಗಳನ್ನು ದಾಖಲಿಸಲಾಗಿದೆ, ಎಲ್ಲಾ ಫೋನ್ ಕರೆ ರೆಕಾರ್ಡಿಂಗ್ ಗಳನ್ನೂ ಉಳಿಸಲಾಗಿದೆ, ವಾಟ್ಸ್ ಆ್ಯಪ್, ಟ್ವಿಟರ್, ಫೇಸ್ ಬುಕ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ… ಎಂಬಂಥ ಇಷ್ಟುದ್ದದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ.
Related Articles
ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲ ವಾಟ್ಸ್‌ಆ್ಯಪ್ ಅಡ್ಮಿನ್‌ಗಳೂ 2 ದಿನಗಳ ಕಾಲ ಗ್ರೂಪ್‌ಗಳನ್ನು ನಿಷ್ಕ್ರಿಯಗೊಳಿಸಬೇಕು. ಕೋವಿಡ್ ಕುರಿತಾದ ಜೋಕುಗಳು ಹರಿದಾಡುತ್ತಿರುವ ಕಾರಣ ಅಡ್ಮಿನ್ ಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೊಂದು ನಿಮ್ಮ ಮೊಬೈಲ್ ಗೂ ಬಂದಿರಬಹುದು.
Advertisement
ಅಲ್ಲದೆ, ಇಂದು ರಾತ್ರಿಯಿಂದಲೇ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಯಾಗಲಿದ್ದು, ಯಾರು ಕೂಡ ಕೋವಿಡ್ ಗೆ ಸಂಬಂಧಿಸಿದ ಸಂದೇಶಗಳನ್ನು ಫಾರ್ವರ್ಡ್ ಮಾಡುವಂತಿಲ್ಲ ಎಂಬ ಮಾಹಿತಿಯೂ ಇದ್ದು, ಈ ಸಂದೇಶ ನಂಬಿ ನೀವೂ ಅನೇಕ ಗ್ರೂಪ್ ಗಳಿಗೆ ಇದನ್ನು ಫಾರ್ವರ್ಡ್ ಮಾಡಿರಬಹುದು. ಆದರೆ ಇದೊಂದು ಸುಳ್ಳು ಸುದ್ದಿ.
ಅಡ್ಮಿನ್ ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರಕಾರ ಎಲ್ಲೂ ಹೇಳಿಲ್ಲ. ಮಾ.24ರಂದು ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕೋವಿಡ್ ವಿರುದ್ಧದ ಹೋರಾಟಕ್ಕೆ ಹಣಕಾಸು ನೆರವು ಕುರಿತು ಸರಕಾರ ಪ್ರಸ್ತಾಪಿಸಿತ್ತೇ ವಿನಾ, ಅದಕ್ಕೂ ವಾಟ್ಸ್ ಆ್ಯಪ್ ಸಂದೇಶಗಳಿಗೂ ಸಂಬಂಧವಿಲ್ಲ.