ಸ್ಯಾಂಟಿಗುವಾ: ಲ್ಯಾಟಿನ್ ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗಿದ್ದು ಒಟ್ಟು 60 ಲಕ್ಷಕ್ಕೆ ತಲುಪಿದೆ.
ವಿವಿಧ ದೇಶಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾದ ಸೋಂಕು ಏಕಾಏಕಿ ಏರತೊಡಗಿದೆ. ನಿತ್ಯವೂ 86 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಈ ಭಾಗದಲ್ಲಿ ಕಂಡು ಬರುತ್ತಿವೆ. ಇದರೊಂದಿಗೆ ಕಳೆದ ಏಳು ದಿನಗಳಲ್ಲಿ ಸಾವಿನ ಪ್ರಮಾಣ 2600 ಆಗಿದ್ದು ಒಟ್ಟು 2.37 ಲಕ್ಷ ಆಗಿದೆ.
ಅಂದರೆ ಜಗತ್ತಿನ ಮೂರನೇ ಒಂದರಷ್ಟು ಸಾವು ಲ್ಯಾಟಿನ್ ಅಮೆರಿಕದಲ್ಲೇ ಆಗಿದೆ ಎಂದು ರಾಯrರ್ಸ್ ಸುದ್ದಿ ಸಂಸ್ಥೆಯ ಅಂಕಿ ಅಂಶ ವಿಭಾಗ ಹೇಳಿದೆ.
ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಈಗ ವೈದ್ಯಕೀಯ ವ್ಯವಸ್ಥೆ ಗ್ರಹಣ ಹಿಡಿದಂತೆ ಇದ್ದು ಇದರ ಪರಿಣಾಮ ಇನ್ನಷ್ಟು ಭೀಕರವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಹ ಸಂಸ್ಥೆ ಪಾನ್ ಅಮೆರಿಕ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಸೂಕ್ತ ವೈದ್ಯಕೀಯ ಚಿಕಿತ್ಸೆ ಲಭ್ಯವಿಲ್ಲದಿರುವುದರಿಂದ ಕಾಯಿಲೆಗಳೂ ಹೆಚ್ಚಾಗಲಿವೆ ಎಂಬ ಆತಂಕ ವ್ಯಕ್ತಪಡಿಸಿದೆ. ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಬ್ರಜಿಲ್ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದೆ. ಎರಡನೇ ಮತ್ತು ಮೂರನೇ ಸ್ಥಾನಿಯಾಗಿ ಚಿಲಿ ಮತ್ತು ಪೆರು ದೇಶಗಳಿವೆ.
ಕೇವಲ 11 ದಿನಗಳಲ್ಲಿ 50 ಲಕ್ಷದಿಂದ 60 ಲಕ್ಷಕ್ಕೆ ಪ್ರಕರಣಗಳು ಏರಿಕೆ ಕಂಡಿವೆ.