Advertisement

ಪಾಕ್‌ ಪ್ರಧಾನಿ ಕಚೇರಿಯ ನಾಲ್ವರಿಗೆ ಸೋಂಕು

12:24 PM May 19, 2020 | sudhir |

ಇಸ್ಲಾಮಾಬಾದ್‌: ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಕಚೇರಿಯ ನಾಲ್ವರು ಅಧಿಕಾರಿಗಳಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗುವುದರೊಂದಿಗೆ ಸತತ ಎರಡನೇ ಬಾರಿಗೆ ಪಿಎಂ ಹೌಸ್‌ನಿಂದ ಸೋಂಕು ವರದಿಯಾಗಿದೆ.

Advertisement

ಕೋವಿಡ್‌ ಪೊಸಿಟಿವ್‌ ಪತ್ತೆಯಾಗುತ್ತಿದ್ದಂತೆಯೇ ಕಚೇರಿಯ ಸುತ್ತಮುತ್ತ ಸೀಲ್‌ಡೌನ್‌ ಮಾಡಲಾಗಿದೆ. ಪಿಎಂ ಹೌಸ್‌ನ ಪ್ರತಿಯೊರ್ವ ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸುವಂತೆ ಆದೇಶಿಸಿ ಅವರ ಪ್ರಾಥಮಿಕ ಸಂಪರ್ಕಗಳ ದಾಖಲೆಯನ್ನು ಸಂಗ್ರಹಿಸುವಂತೆ ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ. ಪ್ರಧಾನಮಂತ್ರಿ ವಿಶೇಷ ಸಹಾಯಕ ಡಾ| ಶೆಹಬಾಜ್‌ ಗಿಲ್‌ ಅವರಲ್ಲಿಯೂ ಸೋಂಕು ಪತ್ತೆಯಾಗಿ ಕ್ವಾರೆಂಟೈನ್‌ ಮಾಡಲಾಗಿದೆ.ಆದರೆ ಸೋಂಕು ಪತ್ತೆಯಾದ ಯಾವ ಸಿಬಂದಿಯೂ ಪ್ರಮುಖ ಅಧಿಕಾರಿಗಳ ನೇರ ಸಂಪರ್ಕಕ್ಕೆ ಬಂದಿಲ್ಲ. ಈ ಹಿಂದೆ ಪಾಕಿಸ್ಥಾನ ಸಂಸತ್‌ನ ನ್ಯಾಶನಲ್‌ ಅಸೆಂಬ್ಲಿ ಮತ್ತು ಸೆನೆಟ್‌ ಸದಸ್ಯರಲ್ಲಿ ಸೋಂಕು ದೃಢವಾಗಿದ್ದರ ಕುರಿತು ವರದಿಯಾಗಿತ್ತು. ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ 42,000 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು, 900 ಮಂದಿ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next