ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ 38 ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ.
ಒಂದೇ ದಿನ 57 ಮಂದಿ ಈ ಸೋಂಕಿನಿಂದ ಗುಣಮುಖರಾಗಿದ್ದಾರೆ ಹಾಗೂ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.
ಚಾಮರಾಜನಗರ ತಾಲೂಕಿನಿಂದ 12, ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕಿನಿಂದ ತಲಾ 8, ಗುಂಡ್ಲುಪೇಟೆ ತಾಲೂಕಿನಿಂದ 6 ಹಾಗೂ ಹನೂರು ತಾಲೂಕಿನಿಂದ 4 ಪ್ರಕರಣಗಳು ವರದಿಯಾಗಿವೆ. ಒಟ್ಟು 682 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. 644 ಮಾದರಿಗಳ ಫಲಿತಾಂಶ ನೆಗೆಟಿವ್ ಆಗಿದೆ.
ಚಾಮರಾಜನಗರ ಪಟ್ಟಣದ 49 ವರ್ಷದ ವ್ಯಕ್ತಿ ಭಾನುವಾರ ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೇ ಕೆಲ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ. ನಂಜನಗೂಡು ತಾಲೂಕು ಕೋಣನೂರು ಗ್ರಾಮದ 45 ವರ್ಷದ ವ್ಯಕ್ತಿ ಸೆ.4ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2687 ಪ್ರಕರಣಗಳು ದೃಢಪಟ್ಟಿವೆ. 2117 ಮಂದಿ ಗುಣಮುಖರಾಗಿದ್ದಾರೆ. 516 ಸಕ್ರಿಯ ಪ್ರಕರಣಗಳಿವೆ. ಒಟ್ಟು 55 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
18 ಮಂದಿಗೆ ಕೋವಿಡ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 166 ಮಂದಿ ಸೋಂಕಿತರು ಹೋಂ ಐಸೋಲೇಷನ್‌ಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು 516 ಸಕ್ರಿಯ ಪ್ರಕರಣಗಳ ಪೈಕಿ, ಚಾಮರಾಜನಗರ ತಾಲೂಕಿನಲ್ಲಿ 148 ಪ್ರಕರಣಗಳಿವೆ. ಗುಂಡ್ಲುಪೇಟೆ 119, ಕೊಳ್ಳೇಗಾಲ 149, ಯಳಂದೂರು 50, ಹನೂರು ತಾಲೂಕಿನಲ್ಲಿ 47 ಹಾಗೂ ಹೊರ ಜಿಲ್ಲೆಯ 04 ಪ್ರಕರಣಗಳಿವೆ.
ಇಂದಿನ ಪ್ರಕರಣಗಳು-38
ಇಂದು ಗುಣಮುಖ-57
ಒಟ್ಟು ಗುಣಮುಖ-2117
ಇಂದಿನ ಸಾವು-02
ಒಟ್ಟು ಸಾವು-55
ಸಕ್ರಿಯ ಪ್ರಕರಣಗಳು-516
ಒಟ್ಟು ಸೋಂಕಿತರು-2687