Advertisement

ಕೋವಿಡ್-19: ಕರ್ನಾಟಕದಲ್ಲಿ ಇಂದು 286 ಹೊಸ ಪ್ರಕರಣಗಳು, 7 ಸಾವು

07:38 PM Nov 11, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ 286 ಹೊಸ ಕೋವಿಡ್-19 ಪ್ರಕರಣಗಳು ಮತ್ತು 7 ಸಾವುಗಳು ಗುರುವಾರ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,91,142 ಕ್ಕೆ ಮತ್ತು ಮೃತರ ಸಂಖ್ಯೆ 38,138 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಇಂದು 289 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ಗಳನ್ನು ಆಗಿದ್ದು, ಇದುವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಕೆ ಕಂಡವರ ಸಂಖ್ಯೆ 29,44,958 ಕ್ಕೆ ತಲುಪಿದೆ.

ಗುರುವಾರ ವರದಿಯಾದ 286 ಪ್ರಕರಣಗಳಲ್ಲಿ 169 ಬೆಂಗಳೂರು ನಗರದಲ್ಲೆ ಕಂಡು ಬಂದಿವೆ. ನಗರದಲ್ಲಿ 171 ಮಂದಿ ಡಿಸ್ಚಾರ್ಜ್ ಮತ್ತು 3 ಸಾವುಗಳು ಸಂಭವಿಸಿವೆ. ಕೊಡಗು, ಕೊಪ್ಪಳ, ಮೈಸೂರು ಮತ್ತು ತುಮಕೂರಿನಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಹಾಸನ 23, ದಕ್ಷಿಣ ಕನ್ನಡ 17, ಉತ್ತರ ಕನ್ನಡ 16, ತುಮಕೂರು 12, ಮೈಸೂರು 11 ಹೊಸ ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 8,017 ಆಗಿದೆ.

ದಿನದ ಪಾಸಿಟಿವಿಟಿ ದರ 0.25 ಪ್ರತಿಶತದಷ್ಟಿದ್ದರೆ, ಪ್ರಕರಣಗಳ ಸಾವಿನ ಪ್ರಮಾಣವು (CFR) 2.44 ಪ್ರತಿಶತದಷ್ಟಿದೆ.

Advertisement

ರಾಜ್ಯದಲ್ಲಿ ಇದುವರೆಗೆ ಒಟ್ಟು 5.18 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಗುರುವಾರ ಒಂದೇ ದಿನ 1,11,190 ಮಾದರಿಗಳನ್ನು ಪರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next