Advertisement

ಪ್ಲೇಗ್‌ಗೂ ಟಾಟಾ ಹೇಳಿದ ನಮಗೆ ಕೋವಿಡ್ 19 ಕಷ್ಟವೇ?

09:18 AM Mar 30, 2020 | sudhir |

ಮಣಿಪಾಲ: ಕೋವಿಡ್ 19 ಭೀಕರತೆ ನಮ್ಮ ಊಹೆಯನ್ನೂ ಮೀರುತ್ತಿದೆ. ಹಾಗೆಂದು ಸಾಂಕ್ರಾಮಿಕ ರೋಗಗಳೇನೂ ಜಗತ್ತಿಗೆ ಹೊಸದಲ್ಲ. ಹಲವಾರು ಕಾಯಿಲೆಗಳು ಹೀಗೆ ಮಾನವಕುಲವನ್ನು ಕಾಡುತ್ತಲೇ ಇವೆ. ಎರಡು ದಶಕದಲ್ಲೇ ವಿಚಿತ್ರ ವಿಚಿತ್ರ ಸಾಂಕ್ರಾಮಿಕ ರೋಗಗಳು ಜಗತ್ತನ್ನು ಕಾಡಿದ್ದನ್ನು ಸ್ಮರಿಸಬಹುದು.

Advertisement

ಪ್ಲೇಗ್‌ (ಬ್ಯಾಕ್‌ ಡೆತ್‌) ಜಗತ್ತನ್ನು ಕಾಡಿದ ಅತಿ ದೊಡ್ಡ ಸಾಂಕ್ರಾಮಿಕ ರೋಗ. ಅದನ್ನೇ ಹೊಡೆದೋಡಿಸಿದ ನಮಗೆ ಈಗ ಸವಾಲಾಗಿರುವುದು ಈ ಕೋವಿಡ್ 19.

ಏಕೆಂದರೆ ಪ್ಲೇಗ್‌ ಯಾವ ತೆರನಾದ ಭಯ ಹುಟ್ಟಿಸಿತ್ತೆಂದರೆ, ಐದು ವರ್ಷಗಳ ಅವಧಿಯಲ್ಲಿ ಯುರೋಪ್‌ ಖಂಡದಲ್ಲಿ ಕನಿಷ್ಠ 50 ಮಿಲಿಯ (5 ಕೋಟಿ) ಜನರು ಸತ್ತಿದ್ದರು. ಹಾಗಾಗಿ ಈಗಲೂ ಇತಿಹಾಸದಲ್ಲೇ ಅತಿ ಹೆಚ್ಚು ಬಲಿ ಪಡೆದ ಕಾಯಿಲೆ ಎಂಬ ಅಪಖ್ಯಾತಿಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲೇ ವಿಶ್ವವನ್ನು ಕಾಡಿದ ಸಾಂಕ್ರಾಮಿಕ ರೋಗಗಳತ್ತ ಒಂದು ಹಿನ್ನೋಟ.

ಕಾಲರಾ (1852)
1852ರಲ್ಲಿ ಮೊದಲಿಗೆ ದೇಶದಲ್ಲಿ ಕಾಣಿಸಿಕೊಂಡ ಕಾಲರಾ ಇಲ್ಲಿಂದ ವಿವಿಧ ಖಂಡಗಳಿಗೆ ಹರಡಿತ್ತು. ಇದಕ್ಕೂ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟರು. 19ನೇ ಶತಮಾನದ ಅತ್ಯಂತ ಭೀಕರ ಕಾಯಿಲೆ ಎಂದು ಕರೆಯಲಾಗುತ್ತಿದೆ. ಆದರೆ ಇದರ ಕಥೆ ಇಲ್ಲಿಗೆ ಮುಗಿಯಲಿಲ್ಲ. 1910-11ರಲ್ಲಿ ಮತ್ತೆ ಈ ರೋಗ ವಿಶ್ವದೆಲ್ಲೆಡೆ ಹರಡಿತ್ತು. ಈ ಹಿಂದೆ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಪೂರ್ವ ಯುರೋಪ್‌, ರಷ್ಯಾವನ್ನು ಕಾಡಿದರೂ, 1910-11ರಲ್ಲಿ ಇದರ ಭೀಕರತೆ ಹೆಚ್ಚಿತ್ತು. ಭಾರತವೊಂದರಲ್ಲೇ 8 ಲಕ್ಷ ಮಂದಿ ಬಲಿಯಾಗಿದ್ದರು. ಆಗಲೂ ದೇಶ ಲಾಕ್‌ಡೌನ್‌ ಅಂತಹ ಕ್ರಮದಿಂದಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತ್ತು. ಕಾಲ ಕ್ರಮೇಣ ವೈದ್ಯಕೀಯ ಸಂಶೋಧನೆಯಿಂದ ಚಿಕಿತ್ಸೆಯ ಮಾದರಿ ಸಿದ್ಧವಾಯಿತು.

ಫ್ಲೂ (1889-90)
ಇನ್‌ ಫುÉಯೆಂಜಾ ವೈರಸ್‌, ಹೆಚ್‌1ಎನ್‌1ನ ಉಪ ಬಗೆ. ರಷ್ಯನ್‌ ಸಾಮ್ರಾಜ್ಯದಲ್ಲಿ ಉದ್ಭವಿಸಿದ ಇದು, ಉತ್ತರ ಧ್ರುವದಾದ್ಯಂತ ಹಬ್ಬಿತು. ಆಧುನಿಕ ಸಾರಿಗೆ ವ್ಯವಸ್ಥೆಯೇ ಈ ಕಾಯಿಲೆ ಹರಡಲು ಮುಖ್ಯ ಕಾರಣ ಎನ್ನಲಾಗಿತ್ತು. ಈ ಕಾಯಿಲೆಗೆ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಈ ಕಾಯಿಲೆ ನಿಯಂತ್ರಣಕ್ಕೆ ಬರುವವರೆಗೂ ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣ ಸ್ಥಗಿತಗೊಳಿಲಾಗಿತ್ತು. ಅದಕ್ಕೆ ಜನರ ಸಹಕಾರವೂ ಸಿಕ್ಕಿತ್ತು.

Advertisement

ಏಶ್ಯನ್‌ ಫ್ಲೂ (1957)
ಇದು ಏವಿಯನ್‌ ಇನ್‌ ಫುÉಯೆಂಜಾ ವೈರಸ್‌ನಿಂದ ಉದ್ಭವ ಆಯಿತು. ಪ್ರಾಥಮಿಕ ಹಂತದಲ್ಲೇ ಇದಕ್ಕೆ ಔಷಧ ಕಂಡು ಹಿಡಿಯಲಾಯಿತದರೂ, ಜನರ ನಿರ್ಲಕ್ಷéದಿಂದ ಈ ವೈರಾಣು ವಿಪರೀತ ಹೆಚ್ಚಾಗಿ ಇಪ್ಪತ್ತು ಲಕ್ಷ ಜನರನ್ನು ಬಲಿ ತೆಗೆದುಕೊಂಡಿತ್ತು ಎಂದು ವರದಿಯಾಗಿದೆ.

ಹಾಂಕಾಂಗ್‌ ಫ್ಲೂ (1968)
1968ರಲ್ಲಿ ಕಾಣಿಸಿಕೊಂಡ ಇನ್‌ ಫುÉಯೆಂಜಾ ವೈರಸ್‌ ಮೂಲತಃ ಏಷ್ಯಾ ಖಂಡದಿಂದಲೇ ಉಗಮವಾಗಿದ್ದು, ಈ ವೈರಾಣುವಿಗೆ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಇದನ್ನು ಪ್ಯಾಂಡೆಮಿಕ್‌ ಎಂದು ಗುರುತಿಸಲಾಯಿತು. H3N2 ಉಪ ಬಗೆಯ ವೈರಾಣು ಇದರ ಮೂಲ ಎಂದು ಶಂಕಿಸಲಾಯಿತು.

ಸ್ಪಾನಿಷ್‌ ಫ್ಲೂ (1918)
ಅತ್ಯಂತ ಮಾರಣಾಂತಿಕ ಕಾಯಿಲೆ ಎಂದೇ ಗುರುತಿಸಿ ಕೊಂಡ ಈ ಸೋಂಕಿಗೆ ಮೃತಪಟ್ಟವರ ಸಂಖ್ಯೆ 5 ಕೋಟಿ. ಹೆಚ್‌1ಎನ್‌1 ವೈರಾಣು ಸೃಷ್ಟಿಸಿದ ಅನಾಹುತ ಇದು. ತುಂಬಿ ತುಳುಕುತ್ತಿದ್ದ ಆಸ್ಪತ್ರೆಗಳು, ಸ್ವತ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದದ್ದು ಈ ಕಾಯಿಲೆಗೆ ಬಲಿಯಾದವರ ಸಂಖ್ಯೆಯನ್ನು ಹೆಚ್ಚುವಂತೆ ಮಾಡಿತು.

ಇವುಗಳನ್ನು ಹೊರತುಪಡಿಸಿ, ಸಾರ್ಸ್‌, ನಿಫಾ, ಎಚ್‌1ಎನ್‌1-ಹೀಗೆ ಹಲವು ವೈರಸ್‌ಗಳು ಆಧುನಿಕ ಸಮಾಜವನ್ನು ಕಾಡುತ್ತಿವೆ. ಈಗ ಕೋವಿಡ್ನ 19 ಸರದಿ.

ಪ್ಲೇಗ್‌ (ದ ಬ್ಲಾಕ್‌ ಡೆತ್‌)
ಪ್ಲೇಗ್‌ ಕಾಯಿಲೆಯನ್ನೇ “ದ ಬ್ಲಾಕ್‌ ಡೆತ್‌’ ಯುರೋಪ್‌ ಖಂಡವನ್ನು ಕಾಡಿದ್ದು 1347 ರಿಂದ 1352ರ ವರೆಗೆ. ಬ್ರಿಟನ್‌ ಸೇರಿದಂತೆ ವಿವಿಧ ದೇಶಗಳನ್ನು ಅದು ಕಾಡಿತ್ತು. ನಾಲ್ಕು ವರ್ಷಗಳಲ್ಲಿ ಈ ಕಾಯಿಲೆಯಿಂದ 8 ಕೋಟಿಯ ಜನಸಂಖ್ಯೆ 3 ಕೋಟಿಗೆ ಕುಸಿತವಾಗಿತ್ತಂತೆ. ಸುಮಾರು ಶೇ. 60 ರಷ್ಟು ಗ್ರಾಮೀಣ ಹಾಗೂ ಅರೆನಗರ ಪ್ರದೇಶದಲ್ಲಿದ್ದ ನಾಗರಿಕರು ಈ ಕಾಯಿಲೆಗೆ ತುತ್ತಾಗಿದ್ದರು. ಲಭ್ಯಮಾಹಿತಿ ಪ್ರಕಾರ ಈ ಕಾಯಿಲೆಯ ಮೂಲ ಏಷ್ಯಾ ಖಂಡ.

ಹಡಗುಗಳಲ್ಲಿದ್ದ ಕಪ್ಪು ಇಲಿಗಳ ಮೂಲಕ ವಿಶ್ವಾದ್ಯಂತ ಹಬ್ಬಿತು ಎಂಬ ಅಭಿಪ್ರಾಯ ಇದೆ. ಭಾರತವನ್ನೂ ಈ ರೋಗ ಕಾಡದೇ ಬಿಟ್ಟಿಲ್ಲ. 1994ರಲ್ಲಿ (25 ವರ್ಷಗಳ ಹಿಂದೆ) ಗುಜರಾತ್‌ನ ಸೂರತ್‌ ನಗರವನ್ನು ಪ್ಲೇಗ್‌ ಹಿಂಡಿ ಹಿಪ್ಪೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next