Advertisement

ನಾನು ಇಟಲಿಯಲ್ಲೇ ಇರುವೆ!ಕುಟುಂಬಸ್ಥರಿಗೆ ಉತ್ತರ ಕನ್ನಡದ ವಿದ್ಯಾರ್ಥಿನಿಯ ಸಂದೇಶ

11:31 AM Mar 29, 2020 | sudhir |

ಮಣಿಪಾಲ: ಎಲ್ಲರೂ ಇಟಲಿಯನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹೊರಡಲು ಸಾಲಿನಲ್ಲಿ ನಿಂತಿರುವಾಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಈ ವಿದ್ಯಾರ್ಥಿನಿ, ನಾನು ಇಟಲಿಯಲ್ಲೇ ಇರುವೆ ಎನ್ನುತ್ತಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆಯ ಪಿಎಚ್‌.ಡಿ. ವಿದ್ಯಾರ್ಥಿನಿಯೊಬ್ಬರು ತಮ್ಮ ಕುಟುಂಬದವರಿಗೆ ಕಳುಹಿಸಿರುವ ಸಂದೇಶವೆಂದರೆ, “ಇಲ್ಲಿನ ಪರಿಸ್ಥಿತಿ ಹೇಗೆ ಇದ್ದರೂ ನಾನಿಲ್ಲೇ ಇರುವೆ. ನನಗಿನ್ನೂ ಕೋವಿಡ್ 19 ಸೋಂಕು ತಗುಲಿಲ್ಲ.

ಆದರೆ ಊರಿಗೆ ಹೋದರೆ ಅಲ್ಲಿನವರ ಆತಂಕಕ್ಕೆ ಕಾರಣವಾಗುತ್ತೇನೆ. ಹಾಗಾಗಿ ನಾನು ಈ ಊರಿನಲ್ಲೇ ಇರುವುದು ಸೂಕ್ತ’ ಎಂದು ಉದಯವಾಣಿ ಜತೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ನನ್ನ ನಗರದಲ್ಲಿ ಎಷ್ಟೇ ಜನರಿಗೆ ಕೊವಿಡ್‌-19 ಬಂದಿರಲಿ, ನಾನು ಮನೆಯಲ್ಲೇ ಇದ್ದರೆ ಏನೂ ಸಹ ಆಗುವುದಿಲ್ಲ. ಬದಲಾಗಿ ಭಾರತಕ್ಕೆ ಬರಲು 15 ಗಂಟೆಗಳ ಪ್ರಯಾಣ ಮಾಡಬೇಕು. ಮಾರ್ಗ ಮಧ್ಯೆ ಹಲವರಿಗೆ ಸೋಂಕು ತಗುಲಲೂ ಬಹುದು. ಹಾಗಾಗಿ ನನ್ನ ದೇಶಕ್ಕೆ ಕೋವಿಡ್‌ 19ನ್ನು ಹೊತ್ತೂಯ್ಯುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ ಅವರು.

“ಮನೆಯಿಂದ, ಸಂಬಂಧಿಕರಿಂದ ಹಾಗೂ ಸ್ನೇಹಿತರಿಂದ ಮನೆಗೆ ಮರುಳುವಂತೆ ಸಲಹೆಗಳು ದಿನವೂ ಬರುತ್ತಿವೆ. ಆದರೆ ಯಾಕೋ ಸರಿ ಎನಿಸುತ್ತಿಲ್ಲ’ ಎನ್ನುತ್ತಾರೆ ಅವರು.

Advertisement

ಕಲಬುರ್ಗಿ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ ಅವರು ಪಿಎಚ್‌.ಡಿ ಶಿಕ್ಷಣಕ್ಕಾಗಿ ಇಟಲಿಗೆ ತೆರಳಿದ್ದರು. ನೇಪಲ್ಸ್‌ ವಿ.ವಿ.ಯಲ್ಲಿ ಕಲಿಯುತ್ತಿದ್ದಾರೆ.

ಮನವಿ
ಭಾರತದ ನಗರಗಳಲ್ಲಿ ಕೆಲಸ ಮಾಡುತ್ತಿರುವ ಜನರೂ ನನ್ನ ಪರಿಸ್ಥಿತಿಯಲ್ಲಿಯೇ ಇದ್ದೀರಿ. ಯಾವುದೇ ಕಾರಣಕ್ಕೆ ನಿಮ್ಮ ಮನೆ ಬಿಟ್ಟು ಹೊರಗೆ ಬರಬೇಡಿ. ಬಸ್‌, ರೈಲು ಹತ್ತಿ ಮನೆಗೆ ಹೋಗುವುದರಿಂದ ಕೋವಿಡ್ 19 ಸೋಂಕು ಹರಡಬಹುದು. ನಿಮಗೆ ಸೋಂಕು ಇದ್ದರೆ ಸಹಪ್ರಯಾಣಿಕರಿಗೂ ಹರಡುವ ಸಾಧ್ಯತೆ ಹೆಚ್ಚು. ಸರಕಾರ ಮುಂಜಾಗ್ರತಾ ಕ್ರಮವಾಗಿ ಬಸ್‌ಗಳನ್ನ ಬಂದ್‌ ಮಾಡಿದರೂ ಕಷ್ಟ ಪಟ್ಟು ಇನ್ಯಾವುದೋ ರೀತಿಯಲ್ಲಿ ಮನೆ ಸೇರುವ ಅವಿವೇಕ ತೋರಬೇಡಿ. ದಯವಿಟ್ಟು ಇದ್ದಲ್ಲಿಯೇ ಇದ್ದು ಬಿಡಿ’ ಎಂದು ಮನವಿ ಮಾಡಿದ್ದಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next