ನವದೆಹಲಿ: ಕೋವಿಡ್ 19 ಸೋಂಕಿತರಿಗೆ ಆಮ್ಲಜನಕದ ಕೊರತೆ ನೀಗಿಸಲು ಮೆಡಿಕಲ್ ಸಿಲಿಂಡರ್ ಗಳ ಸಮಸ್ಯೆಯಲ್ಲಿ ನಲುಗಿದ್ದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಈಗ ಕೇವಲ ಒಂದು ದಿನಕ್ಕಾಗುವಷ್ಟು ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ನಾಲ್ಕು ದಿನಗಳಷ್ಟು ಸಂಗ್ರಹ ಇದ್ದಿರುವುದಾಗಿ ರಾಜ್ಯಸರ್ಕಾರ ಕೇಂದ್ರಕ್ಕೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವಿದೇಶಿ ಐಪಿಎಲ್ ಇಲೆವೆನ್ ರಚಿಸಿದ ಆಕಾಶ್ ಚೋಪ್ರಾ: ಆರ್ ಸಿಬಿಯ ಇಬ್ಬರಿಗೆ ಸ್ಥಾನ
ದೆಹಲಿಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಒಂದು ದಿನಕ್ಕಾಗುವಷ್ಟು ಮತ್ತು ಕೋವಿಶೀಲ್ಡ್ ಮೂರರಿಂದ ನಾಲ್ಕು ದಿನಗಳಿಗಾಗುವಷ್ಟು ಮಾತ್ರ ಉಳಿದಿದ್ದು, ನಮಗೆ ಆದಷ್ಟು ಶೀಘ್ರವಾಗಿ ಲಸಿಕೆಯ ಅಗತ್ಯವಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂತ್ರ ಜೈನ್ ಸೋಮವಾರ(ಮೇ 10) ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್ 19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಸಂದರ್ಭದಲ್ಲಿಯೇ ದೆಹಲಿಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಎದುರಿಸಿತ್ತು. ಅಲ್ಲದೇ ಸುಪ್ರೀಂಕೋರ್ಟ್ ಕೂಡಾ ತಕ್ಷಣವೇ ಮೆಡಿಕಲ್ ಆಕ್ಸಿಜನ್ ಸರಬರಾಜು ಮಾಡುವಂತೆ ನಿರ್ದೇಶನ ನೀಡಿತ್ತು.
ಒಂದು ದಿನದ ಕೋವ್ಯಾಕ್ಸಿನ್ ಹಾಗೂ 4 ದಿನಗಳ ಕೋವಿಶೀಲ್ಡ್ ಲಸಿಕೆ ಸಂಗ್ರಹ ಇದೆ: ದೆಹಲಿ ಸಚಿವ
ನೆರೆಯ ನೋಯ್ಡಾ, ಗಾಜಿಯಾಬಾದ್ ಮತ್ತು ಗುರ್ಗಾಂವ್ ನಿಂದಲೂ ಜನರು ಕೋವಿಡ್ 19 ಲಸಿಕೆ ಪಡೆಯಲು ದೆಹಲಿಗೆ ಆಗಮಿಸುತ್ತಿದ್ದು, ಇದರಿಂದ ಕೋವಿಡ್ ಲಸಿಕೆ ಕೊರತೆಯಾಗಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೆಲ ದಿನಗಳ ಹಿಂದಷ್ಟೇ ತಿಳಿಸಿದ್ದರು.