ನವದೆಹಲಿ: ಕೋವಿಡ್ ನ ಡೆಲ್ಟಾ ಪ್ಲಸ್ ರೂಪಾಂತರ ತಳಿ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ರೋಗ ನಿರೋಧಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಒದಗಿಸಬಲ್ಲದು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನ ನೂತನ ಅಧ್ಯಯನದಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!
ಈವರೆಗೆ ಭಾರತದಲ್ಲಿ ಹಲವಾರು ಡೆಲ್ಟಾ ಪ್ಲಸ್ ರೂಪಾಂತರ ತಳಿ ಪ್ರಕರಣಗಳು ವರದಿಯಾಗಿದೆ. ಆದರೆ ಲಸಿಕೆಯು ರೂಪಾಂತರಿ ತಳಿ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದೇ ಎಂಬುದು ಸ್ಪಷ್ಟವಾಗಿಲ್ಲವಾಗಿತ್ತು.
ಕೋವಿಡ್ ನ ನೂತನ ಡೆಲ್ಟಾ ಪ್ಲಸ್ ರೂಪಾಂತರಿ ತಳಿ ಸೋಂಕು ಅತೀ ಕ್ಷಿಪ್ರವಾಗಿ ಹರಡಬಲ್ಲದೇ ಎಂಬ ಬಗ್ಗೆ ಯಾವುದೇ ವೈಜ್ಞಾನಿಕ ಅಂಕಿಅಂಶ ಲಭ್ಯವಾಗಿಲ್ಲ ಎಂದು ಕಳೆದ ತಿಂಗಳು ನೀತಿ ಆಯೋಗದ ಡಾ.ವಿ.ಕೆ.ಪೌಲ್ ಅಭಿಪ್ರಾಯವ್ಯಕ್ತಪಡಿಸಿದ್ದರು.
ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಕ್ಷಿಪ್ರವಾಗಿ ಹರಡುವುದು ಹೆಚ್ಚಳವಾಗಲಿದೆಯೇ ಅಥವಾ ಈ ಸೋಂಕು ಪ್ರಮಾಣದ ತೀವ್ರತೆ ಅಧಿಕವಾಗಲಿದೆಯೇ ಅಥವಾ ಲಸಿಕೆಯು ಅಡ್ಡಪರಿಣಾಮ ಬೀರಲಿದೆಯೇ ಎಂಬ ಬಗ್ಗೆ ನಾವು ಅಧ್ಯಯನ ವರದಿ ಬರುವವರೆಗೂ ಕಾಯಬೇಕಾಗುತ್ತದೆ ಎಂದು ಪೌಲ್ ತಿಳಿಸಿದ್ದರು.
ಇದೀಗ ಐಸಿಎಂಆರ್ ಅಧ್ಯಯನದಿಂದ ಕೋವಿಡ್ ರೂಪಾಂತರಿ ತಳಿಗೆ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂಬ ವಿಶ್ವಾಸವನ್ನು ಗಟ್ಟಿಗೊಳಿಸಿದೆ. ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ್ದು, ಶೇ.77.8ರಷ್ಟು ಪರಿಣಾಮಕಾರಿಯಾಗಿದೆ ಎಂದು ಮೂರನೇ ಹಂತದ ಪ್ರಯೋಗದಲ್ಲಿ ಪತ್ತೆಯಾಗಿತ್ತು.