ಮಂಗಳೂರು: ಮದುವೆಯಾಗಿ ನಂಬಿಸಿ, ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಆರೋಪಿ ಕೊಣಾಜೆ ನಿವಾಸಿ ತಾರಾನಾಥನನ್ನು ದೋಷಮುಕ್ತಗೊಳಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿ ತಾರಾನಾಥ ಅದೇ ಗ್ರಾಮದ ಯುವತಿಯೊಬ್ಬಳ ಮೊಬೈಲ್ ನಂಬರ್ ಪಡೆದು, ಪ್ರೀತಿಸುವುದಾಗಿ ಹೇಳಿ ಪದೇ ಪದೆ ಕರೆ ಮಾಡುತ್ತಿದ್ದ. ಅದರಂತೆ 2018ರ ಮೇ 3ರಂದು ಬೆಳ್ಮ ಬಂಡಿ ಜಾತ್ರಾ ಮಹೋತ್ಸವದಲ್ಲಿ ಭೇಟಿಯಾದ ಆತ, ಮಾತನಾಡಲು ಇದೆ ಎಂದು ಹೇಳಿ ತನ್ನ ಸ್ಕೂಟರ್‌ನಲ್ಲಿ ಸಮೀಪದ ಗುಡ್ಡಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ.
ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾ ರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ದ.ಕ. ಜಿಲ್ಲಾ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧಿಶ ಶ್ರೀಕಾಂತ ರಾಜ್ ಅವರು ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪಿ ಮೇಲೆ ಹೊರಿಸಲಾದ ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ತೀರ್ಮಾನಿಸಿ ಆರೋಪಿ ತಾರಾನಾಥನನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರವಾಗಿ ಎಸ್.ಪಿ. ಚೆಂಗಪ್ಪ, ರಹಿಯಾನ, ಕಿಶೋರ್ ಡಿಸಿಲ್ವ ವಾದಿಸಿದ್ದರು.