ರಾಮನಗರ: ಕೇಂದ್ರ ಸರ್ಕಾರದ ಬಡತನ ನಿರ್ಮೂಲನಾ ಯೋಜನೆ 2015ರ ಅಡಿಯಲ್ಲಿ ಜಾರಿಯಲ್ಲಿರುವ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದರ ಬಗ್ಗೆ ನ್ಯಾಯಾಲಯ ಮೇಲ್ವಿಚಾರಣೆ ನಡೆಸಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ತಿಳಿಸಿದರು.
ವಾರ್ತಾ ಇಲಾಖೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಬಡ ಜನರ ಶ್ರೇಯೋಭಿವೃದ್ಧಿಗಾಗಿ ಜಾರಿಯಾಗಿರುವ ಯೋಜನೆಗಳ ಸವಲತ್ತುಗಳು ಇನ್ನು ಅರ್ಹ ಫಲಾನುಭವಿಗಳನ್ನು ತಲುಪಿಲ್ಲ ಎಂಬುದು ಮೇಲ್ನೋ ಟಕ್ಕೆ ಕಂಡು ಬಂದಿದೆ. ಹೀಗಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಈ ವಿಚಾರದಲ್ಲಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.
ಸಮಿತಿ ರಚನೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನವನ್ನು ರಾಜ್ಯ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ, ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿಯನ್ನು ರಚಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರನಿ ವೃತ್ತ ಹೈಕೋರ್ಟ್‌ನ್ಯಾಯಮೂರ್ತಿ ವೇಣುಗೋಪಾಲಗೌಡರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ ಎಂದರು.
ಗ್ರಾಮ ಭೇಟಿ: ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ವತಿಯಿಂದ ಆಯ್ಕೆಗೊಂಡ ಪ್ಯಾನಲ್ ವಕೀಲರುಗಳನ್ನು “ಕಾನೂನು ಸೇವೆಗಳ ಅಧಿಕಾರಿ’ ಎಂದು ನೇಮಿ ಸಿದೆ. ಪ್ರತಿ ಅಧಿಕಾರಿ ಸೇರಿದಂತೆ ಮೂರು ಮಂದಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಸಮಿತಿ ರಚಿಸಿ, ಸಮಿತಿಯ ಸದಸ್ಯರು ಮನೆ ಮನೆಗೆ ಭೇಟಿ ಕೊಟ್ಟು ಯೋಜನೆಯ ಲಾಭ ಸಿಕ್ಕಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಲಿದ್ದಾರೆ ಎಂದರು. ಈ ಸಮಿತಿಗಳ ಉಸ್ತುವಾರಿಗೆ ಪ್ರತಿ ತಾಲೂಕಿಗೆ ಒಬ್ಬ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ಇತರ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಹೊಣೆ ನೀಡಲಾಗುವುದು ಎಂದರು.
ನ್ಯಾಯಾಲಯ ಗಮನಿಸುವಯೋಜನೆಗಳು : ಪ್ರಧಾನ ಮಂತ್ರಿ ರೋಜಗಾರ್ ಯೋಜನೆ (ಪಿಎಂಆರ್‌ವೈ), ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಆರ್‌ಇಜಿಪಿ), ಸ್ವರ್ಣಜಯಂತಿ ಷಹರಿ ರೋಜಗಾರ್ ಯೋಜನೆ (ಎಸ್‌ಜೆಎಸ್‌ಆರ್‌ವೈ), ಸ್ವರ್ಣಜಯಂತಿ ಗ್ರಾಮ ರೋಜಗಾರ್ ಯೋಜನೆ (ಎಸ್‌ಜಿಎಸ್‌ವೈ), ಇಂದಿರಾ ಆವಾಸ್ ಯೋಜನೆ (ಐಎವೈ), ರಾಷ್ಟ್ರೀಯ ಸಾಮಾಜಿಕ ನೆರವುಕಾರ್ಯಕ್ರಮಗಳು(ಎನ್ ಎಸ್‌ಎಪಿ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಾಣಿಕೆ ತಡೆಗಟ್ಟಲು ರೂಪಿಸಲಾದ ಯೋಜನೆಗಳು, ಭಾಗ್ಯಲಕ್ಷ್ಮೀ, ಸ್ತ್ರೀಶಕ್ತಿ ಸಂಘಗಳ ಅಭಿವೃದ್ಧಿ ಯೋಜನೆ, ಮಾತೃಶ್ರೀ, ಉದ್ಯೋಗಸ್ಥ ಮಹಿಳೆಯರ ಪುನರ್ವವಸತಿ ಯೋಜನೆ ಇತ್ಯಾದಿ.