ಅಹ್ಮದಾಬಾದ್ : 2002ರ ನರೋದಾ ಗಾಮ್ ದೊಂಬಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಎಸ್‌ಐಟಿ ಕೋರ್ಟ್ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗೆ, ಗುಜರಾತ್ ಮಾಜಿ ಸಚಿವೆ ಮಾಯಾ ಕೊದ್ನಾನಿ ಅವರಿಗಾಗಿ ಓರ್ವ ಡಿಫೆನ್ಸಿ ಸಾಕ್ಷಿದಾರನಾಗಿ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಕೊದ್ನಾನಿ ಅವರು ಈ ನರೋದಾ ಗಾಮ ದೊಂಬಿ ಪ್ರಕರಣದ ಓರ್ವ ಪ್ರಮುಖ ಆರೋಪಿಯಾಗಿದ್ದಾರೆ.
ಕೊದ್ನಾನಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿರುವ ಎಸ್‌ಐಟಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪಿ ಬಿ ದೇಸಾಯಿ ಅವರು ಅಮಿತ್ ಶಾ ಅವರಿಗೆ ಇದೇ ಸೆ.18ರಂದು ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರು.
ನಿಗದಿನ ದಿನದಂದು (ಸೆ.18) ಶಾ ಅವರು ಕೋರ್ಟ್ ಮುಂದೆ ಹಾಜರಾಗಲು ವಿಫಲರಾದರೆ ತಾನು ಪುನಃ ಅವರಿಗೆ ಸಮನ್ಸ್ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
ಕೊದ್ನಾನಿ ಅವರ ವಕೀಲ ಅಮಿತ್ ಪಟೇಲ್ ಅವರು ಅಮಿತಾ ಶಾ ಅವರ ಅಹ್ಮದಾಬಾದ್ ನಗರದ ಥಾಲತೇಜ್ ಪ್ರದೇಶದಲ್ಲಿನ ನಿವಾಸದ ವಿಳಾಸವನ್ನು ಕೋರ್ಟಿಗೆ ಸಲ್ಲಿಸಿದುದನ್ನು ಅನುಸರಿಸಿ ನ್ಯಾಯಾಲಯವು ಶಾ ಅವರ ಈ ವಿಳಾಸಕ್ಕೆ ಸಮನ್ಸ್ ಜಾರಿ ಮಾಡಿತು.
ಕೊದ್ನಾನಿ ಅವರು ಈ ಮೊದಲ ಶಾ ಅವರಿಗೆ ಸಮನ್ಸ್ ಜಾರಿ ಮಾಡುವುದಕ್ಕೆ ಅವಶ್ಯವಿದ್ದ ವಿಳಾಸವನ್ನು ಕೊಡಲು ವಿಫಲರಾಗಿದ್ದರು.