Advertisement

CM ಸ್ಥಾನದಿಂದ ಕೇಜ್ರಿವಾಲ್‌ ವಜಾಗೊಳಿಸಿ-ಪಿಐಎಲ್‌ ತಿರಸ್ಕರಿಸಿದ ದೆಹಲಿ ಹೈಕೋರ್ಟ್

01:17 PM Apr 04, 2024 | Team Udayavani |

ನವದೆಹಲಿ: ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ತಿಹಾರ್‌ ಜೈಲು ಸೇರಿರುವ ಅರವಿಂದ್‌ ಕೇಜ್ರಿವಾಲ್‌ ಅವರನ್ನು ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಪಿಐಎಲ್‌ ಅನ್ನು ದೆಹಲಿ ಹೈಕೋರ್ಟ್‌ ಗುರುವಾರ (ಏಪ್ರಿಲ್‌ 04) ವಜಾಗೊಳಿಸಿದೆ. ‌

Advertisement

ಇದನ್ನೂ ಓದಿ:IPL 2024: ಮೊದಲ ಪಂದ್ಯದಲ್ಲೇ ಸದ್ದು ಮಾಡಿದ 18ರ ಹುಡುಗ; ಯಾರು ಈ ಆಂಗ್ಕ್ರಿಶ್ ರಘುವಂಶಿ?

ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುದು ಇದು ಅರವಿಂದ್‌ ಕೇಜ್ರಿವಾಲ್‌ ಅವರ ವೈಯಕ್ತಿಕ ವಿಷಯವಾಗಿದೆ ಎಂದು ದೆಹಲಿ ಹೈಕೋರ್ಟ್‌ ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.

ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಕೇಜ್ರಿವಾಲ್‌ ಅವರನ್ನು ವಜಾಗೊಳಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಎರಡನೇ ಪಿಐಎಲ್‌ ಇದಾಗಿದ್ದು, ಮೊದಲನೇ ಪಿಐಎಲ್‌ ಅನ್ನು ಕೂಡಾ ಹೈಕೋರ್ಟ್‌ ವಜಾಗೊಳಿಸಿತ್ತು.

ಈ ವಿಷಯದ ಬಗ್ಗೆ ಸಂವಿಧಾನ ತಜ್ಞರನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್‌ ಸಲಹೆ ನೀಡಿದೆ. ಸಿಎಂ ಹುದ್ದೆಯಿಂದ ಕೆಳಗಿಳಿಯುವುದು ಕೇಜ್ರಿವಾಲ್‌ ಅವರ ವೈಯಕ್ತಿಕ ವಿಚಾರವಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

Advertisement

ಕೋರ್ಟ್‌ ಕಾನೂನು ಪಾಲನೆ ಮಾಡುತ್ತದೆ, ಎಂದಾದರು ಕೋರ್ಟ್‌ ರಾಷ್ಟ್ರಪತಿ ಆಡಳಿತ ಅಥವಾ ರಾಜ್ಯಪಾಲರ ಆಡಳಿತ ಹೇರಿದ ನಿದರ್ಶನವಿದೆಯೇ ಎಂದು ಪೀಠ ಪ್ರಶ್ನಿಸಿದೆ. ಸಾಮಾಜಿಕ ಕಾರ್ಯಕರ್ತ, ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಪಿಐಎಲ್‌ ಸಲ್ಲಿಸಿದ್ದರು.

ಮಾರ್ಚ್‌ 21ರಂದು ಅರವಿಂದ್‌ ಕೇಜ್ರಿವಾಲ್‌ ಬಂಧನವಾದ ನಂತರ ರಾಜಧಾನಿಯಲ್ಲಿ ಸರ್ಕಾರದ ಆಡಳಿತ ಕುಂಠಿತಗೊಂಡಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ಈ ವಿಚಾರದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಆಗಲಿ, ರಾಷ್ಟ್ರಪತಿಯಾಗಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ರಾಜಧಾನಿಯಲ್ಲಿ ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನಾವು ಹೇಗೆ ನಿರ್ಧರಿಸಲು ಸಾಧ್ಯ? ಕಾನೂನಿನ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದು ಲೆಫ್ಟಿನೆಂಟ್‌ ಗವರ್ನರ್‌ ಗೆ ತಿಳಿದಿದೆ ಎಂದು ಹೈಕೋರ್ಟ್‌ ಪೀಠ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next