Advertisement

ವಿದ್ಯುತ್‌ ಮರುಸ್ಥಾಪಿಸುವಂತೆ ಕೋರ್ಟ್‌ ಸೂಚನೆ

11:18 PM Dec 15, 2022 | Team Udayavani |

ಮಂಗಳೂರು: ನಗರದ ಬಹುಮಹಡಿ ಅಪಾರ್ಟ್‌ ಮೆಂಟ್‌ವೊಂದರ ಮನೆಗೆ ಅಲ್ಲಿನ ಮಾಲಕರ ಸಂಘದವರು ವಿದ್ಯುತ್‌ ಕಡಿತಗೊಳಿಸಿದ ಪ್ರಕರಣದಲ್ಲಿ ವಿದ್ಯುತ್‌ ಪೂರೈಕೆ ಮರುಸ್ಥಾಪಿಸುವಂತೆ ಇಲ್ಲಿನ ನ್ಯಾಯಾಲಯವು ಆದೇಶವಿತ್ತಿದೆ.

Advertisement

ಅಪಾರ್ಟ್‌ಮೆಂಟ್‌ನಲ್ಲಿ ವೃದ್ಧ ದಂಪತಿಗಳು ವಾಸಿಸುತ್ತಿದ್ದರು. ಅಪಾರ್ಟ್‌ಮೆಂಟ್‌ನ ನಿರ್ವಹಣ ಶುಲ್ಕ 26,650 ರೂ. ಮುಂಗಡ ಪಾವತಿಸುವಂತೆ ಅಸೋಸಿಯೇಶನ್‌ ಸೂಚನೆಯನ್ನು ದಂಪತಿ ವೀಣಾ ಮತ್ತು ಶಾಂತಾರಾಮ ಪ್ರಭು ಅವರು ಪಾಲಿಸದ ಹಿನ್ನೆಲೆಯಲ್ಲಿ 2018ರ ಅಕ್ಟೋಬರ್‌ 6ರಂದು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿತ್ತು. ವಿದ್ಯುತ್‌ ಸಂಪರ್ಕ ಇಲ್ಲದೆ ದಂಪತಿ ಸಂಕಷ್ಟ ಅನುಭವಿಸಿದ್ದರು. ಮೆಸ್ಕಾಂ ಮತ್ತು ಇತರ ಇಲಾಖೆಗಳನ್ನೂ ಸಂಪರ್ಕಿಸಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದರು.

3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಕೋರ್ಟ್‌ ಅಲ್ಲಿನ ಅಸೋಸಿಯೇಶನ್‌ಗೆ ನಿರ್ದೇಶನ ನೀಡಿದೆ. ನ್ಯಾಯಾಲಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದು ಮೂಲ ಹಕ್ಕಿನ ಉಲ್ಲಂಘನೆಯಾಗಿದೆ. ದಂಪತಿ ನ್ಯಾಯಾಲಯದ ಮುಂದೆ ನಿರ್ವಹಣ ವೆಚ್ಚ ನೀಡಲು ಸಿದ್ಧವಿರುವುದರಿಂದ ವಿದ್ಯುತ್‌ ಸಂಪರ್ಕ ಪಡೆಯಲು ಅರ್ಹತೆ ಪಡೆದಿದ್ದಾರೆ ಎಂದಿದೆ. ದಂಪತಿ ನ್ಯಾಯಾಲಯದ ತೀರ್ಪಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next