ಹಾಸನ: ಜಮೀನಿನ ಹದ್ದುಬಸ್ತು ಮಾಡಿಕೊಡದೆ ಸತಾಯಿಸಿದ ಹಾಗೂ ಕೋರ್ಟ್‌ಗೆ ಹಾಜರಾಗಿ ವಿವರಣೆ ನೀಡಬೇಕೆಂಬ ನೋಟಿಸ್‌ಗೂ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದ್ದ ಹಾಸನ ತಹಶೀಲ್ದಾರ್ ಬಂಧನಕ್ಕೆ ಹಾಸನ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶದ ಪ್ರತಿಯೊಂದಿಗೆ ಕೋರ್ಟ್ ಶಿರಸ್ತೇದಾರ್ ಜತೆ ಅರ್ಜಿದಾರರ ಪರ ವಕೀಲರು ಹಾಸನ ತಾಲೂಕು ಕಚೇರಿಗೆ ಗುರುವಾರ ಬೆಳಗ್ಗೆ ಬಂದಾಗ ತಹಶೀಲ್ದಾರರು ಕಚೇರಿಯಿಂದ ಹೊರ ಹೋಗಿದ್ದು, ಕೊಠಡಿಗೆ ಬಾಗಿಲು ಹಾಕಲಾಗಿತ್ತು.
ಪ್ರಕರಣದ ಹಿನ್ನೆಲೆ
ಹೇಮಾ ಎಂಬವರು ತಮ್ಮ ಜಮೀನಿನ ಹದ್ದುಬಸ್ತಿಗಾಗಿ ಹಾಸನ ತಾಲೂಕು ಕಚೇರಿಗೆ 2008ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಅರ್ಜಿಯನ್ನು ವಿಲೇವಾರಿ ಮಾಡದೆ ಮಹಿಳೆಯನ್ನು ಕಚೇರಿಗೆ ಅಲೆದಾಡಿಸುತ್ತಿದ್ದರು. ಇದರಿಂದ ಬೇಸತ್ತ ಹೇಮಾ 2014ರಲ್ಲಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ಆದರೂ ಅಧಿಕಾರಿಗಳು ಹೇಮಾ ಅವರ ಅರ್ಜಿ ಬಗ್ಗೆ ಕ್ರಮ ಕೈಗೊಳ್ಳಲೇ ಇಲ್ಲ.
ನಾನು ಉದ್ದೇಶಪೂರ್ವಕವಾಗಿ ಕಚೇರಿಗೆ ಚಕ್ಕರ್ ಹೊಡೆ ದಿಲ್ಲ. ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದೆ. ನ್ಯಾಯಾಲಯದಿಂದ ಬಂಧನದ ವಾರೆಂಟ್ ಜಾರಿಯಾದ ವಿಷಯ ತಿಳಿದ ಬಳಿಕ ವಾಪಸ್ ಬಂದು ನ್ಯಾಯಾಲಯಕ್ಕೆ ಕೊಡಬೇಕಾದ ಮಾಹಿತಿಯನ್ನೆಲ್ಲ ಕೊಟ್ಟಿದ್ದೇನೆ -
ಶ್ವೇತಾ, ತಹಶೀಲ್ದಾರ್