Advertisement

ಪತ್ರಾ ಚವ್ಲಾ ಹಗರಣ : ಸಂಜಯ್ ರಾವತ್ ನ್ಯಾಯಾಂಗ ಬಂಧನ ಸೆ. 5 ರವರೆಗೆ ವಿಸ್ತರಣೆ

12:32 PM Aug 22, 2022 | Team Udayavani |

ಮುಂಬೈ: ಪತ್ರಾ ಚಾವ್ಲ್ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ಕೋರ್ಟ್ ಸೋಮವಾರ (ಆಗಸ್ಟ್ 22) ಶಿವಸೇನಾ ಮುಖಂಡ ಸಂಜಯ್ ರಾವತ್ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಿ ಆದೇಶ ನೀಡಿದೆ.

Advertisement

ಮುಂಬೈನ ಉತ್ತರದ ಉಪನಗರಗಳಲ್ಲಿ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಆಗಸ್ಟ್ 1 ರಂದು ರಾವುತ್ ಅವರನ್ನು ಬಂಧಿಸಿತ್ತು.

ಆರಂಭಿಕವಾಗಿ ಸಂಜಯ್ ರಾವತ್ ಗೆ ಆಗಸ್ಟ್ 4ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತ್ತು. ನಂತರ ವಿಶೇಷ ಕೋರ್ಟ್ ಆಗಸ್ಟ್ 8ರವರೆಗೆ ಬಂಧನದ ಅವಧಿ ವಿಸ್ತರಿಸಿತ್ತು. ಬಳಿಕ ಆಗಸ್ಟ್ 22ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿತ್ತು, ಇಂದು ಮತ್ತೆ ಸೆಪ್ಟೆಂಬರ್ 5 ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಮಹಾರಾಷ್ಟ್ರ : ಪೊಲೀಸ್ ವಾಹನದಲ್ಲೇ ಕುಳಿತು ಕೇಕ್ ಕತ್ತರಿಸಿದ ಕೊಲೆ ಆರೋಪಿ : ವಿಡಿಯೋ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next