ಕುದೂರು: ಕೋರ್ಟ್ ತೀರ್ಪಿನಂತೆ ಬಾಕಿ ಬಾಡಿಗೆಹಣ ಪಡೆದು ಮಳಿಗೆ 27 ಅನ್ನು ವಶಕ್ಕೆಪಡೆಯಬೇಕು ಎಂದು ಇಲ್ಲಿನ ಗ್ರಾಪಂನ 2ನೇಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.ಗ್ರಾಪಂಗೆ ಸೇರಿದ ಮಳಿಗೆ ಸಂಖ್ಯೆ 27 ಸದಸ್ಯೆಯೊಬ್ಬರ ಪತಿಯೇ ಆಗಿದ್ದಾರೆ ಎಂದು ಹೇಳಲಾಗುತ್ತಿದ್ದು, 2013ರಿಂದ 2.5 ಲಕ್ಷ ರೂ.ಗೂ ಹೆಚ್ಚುಬಾಡಿಗೆ ಕಟ್ಟದೇ, ಕೋರ್ಟ್‌ನಲ್ಲಿ ಕೇಸ್ ಹಾಕಿದ್ದರು.ಇದೀಗ ಕೋರ್ಟ್‌ನಲ್ಲಿ ಪಂಚಾಯ್ತಿ ಪರ ತೀರ್ಪುಬಂದಿದ್ದು, ಅಂಗಡಿ ಮಳಿಗೆ ಪಂಚಾಯ್ತಿ ಸುಪರ್ದಿಗೆಒಪ್ಪಿಸಬೇಕೆಂದು ಆದೇಶಿಸಿದೆ.
ಆದರೆ, ಇದುವರೆಗೂ ಗ್ರಾಪಂ ತನ್ನ ವಶಕ್ಕೆ ಪಡೆದಿಲ್ಲ.ಈ ಕುರಿತು ಸಭೆಯಲ್ಲಿ ಮಾತನಾಡಿದ ಗ್ರಾಪಂಸದಸ್ಯ ಉಮಾಶಂಕರ್, ಅಂಗಡಿ ಮಾಲಿಕರಿಂದಬಾಡಿಗೆ ವಸೂಲಿ ಮಾಡಿಕೊಂಡು ನ್ಯಾಯಲಯದತೀರ್ಪನ್ನು ಗೌರವಿಸಿ ಪಂಚಾಯ್ತಿಯ ಸುಪರ್ದಿಗೆತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಅಂಗಡಿ ಮಳಿಗೆಯ ಬಾಕಿ ಬಾಡಿಗೆ ನೀಡಲಾಗುತ್ತದೆ. ಅಂಗಡಿ ಬಿಟ್ಟುಕೊಡುವುದಿಲ್ಲ. ಪಂಚಾಯ್ತಿಯವರು ಮಾನಸಿಕವಾಗಿ ತೊಂದರೆ ನೀಡಬಾರದುಎಂದು ಮಳಿಗೆ 27ರ ಬಾಡಿಗೆದಾರರ ಪರ ಗ್ರಾಪಂಸದಸ್ಯೆ ನಿರ್ಮಲಾ ಹೇಳಿದರು.ಲಕ್ಷಾಂತರ ರೂ. ಬಾಕಿ: ಕುದೂರು ಗ್ರಾಪಂ ತಮಗೆಸೇರಿದ ಬಾಡಿಗೆ ಮಳಿಗೆ ಹಾಗೂ ಬಾಡಿಗೆದಾರರಮೇಲೆ ಹಿಡಿತವಿಲ್ಲದಂತಾಗಿದೆ.
ಒಂದು ತಿಂಗಳಿಗಿಂತಹೆಚ್ಚು ಬಾಡಿಗೆ ಉಳಿಸಿಕೊಂಡವರ ಒಂದು ಎಚ್ಚರಿಕೆನೋಟಿಸ್ ನೀಡಿ, ವಾರದೊಳಗೆ ಬಾಕಿ ಬಾಡಿಗೆಹಣ ಕಟ್ಟದಿದ್ದರೆ ಅಂತಹ ಮಳಿಗೆ ಮರುಹರಾಜುಹಾಕಿ ಎಂದು ಗ್ರಾಪಂ ಉಪಾಧ್ಯಕ್ಷ ಬಾಲರಾಜುಪಿಡಿಒಗೆ ಸಲಹೆ ನೀಡಿದರು.
ಚರ್ಚೆ ಆದ ವಿಷಯ: ಸಣ್ಣ ಹೋಟೆಲ್‌ಗಳಿಗೆಮಾಸಿಕ 250 ರೂ., ದೊಡ್ಡ ಹೋಟೆಲ್‌ಗಳಿಗೆ 500ರೂ. ನೀರಿನ ಬಿಲ್ ನಿಗದಿ, ಫುಟ್‌ಪಾತ್ ಅಂಗಡಿಗಳಿಗೆ ಬೇರೆ ಜಾಗ ಕಲ್ಪಿಸಿ ಸ್ಥಳಾಂತರಿಸುವುದು,ಗ್ರಾಪಂ ವ್ಯಾಪ್ತಿಯ ಚಿಕನ್, ಮಟನ್ ಸ್ಟಾಲ್‌ಗಳಿಗೆಸೂಕ್ತ ಜಾಗದಲ್ಲಿ ಮಳಿಗೆ ನಿರ್ಮಿಸಿ, ಚೀಟಿ ಎತ್ತುವಮೂಲಕ ಮಾಲಿಕರಿಗೆ ಬಾಡಿಗೆ ನೀಡಬೇಕು ಎಂದುಸಭೆಯಲ್ಲಿ ಚರ್ಚೆಯಾಯಿತು.
ಪಿಡಿಒ ಲೋಕೇಶ್ ಮಾತನಾಡಿ, ಕುದೂರಿನಲ್ಲಿಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು,ಅರಿವು ಮೂಡಿಸಲಾಗುತ್ತಿದೆ. ಗಣೇಶನ ಗುಡಿಮುಂಭಾಗ ನಡೆಯುತ್ತಿದ್ದ ಮುಂಜಾನೆ ಸಂತೆಯನ್ನು ರಾಮಲೀಲಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಬಾಸ್ಕೆಟ್ ಬಾಲ್ ಕೋರ್ಟ್ ಬೇಡ: ಗ್ರಾಪಂಸದಸ್ಯೆ ಲತಾಗಂಗಯ್ಯ ಮಾತನಾಡಿ, ಗ್ರಾಮದಲ್ಲಿಲಕ್ಷಾಂತರ ರೂ. ಖರ್ಚು ಮಾಡಿ ಬಾಸ್ಕೆಟ್‌ಬಾಲ್‌ಕೋರ್ಟ್ ನಿರ್ಮಾಣ ಮಾಡುತ್ತಿದ್ದು, ಇದರಿಂದಸ್ಥಳೀಯರಿಗೆ ಉಪಯೋಗವಿಲ್ಲ ಎಂದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಕಾರ್ಯದರ್ಶಿವೆಂಕಟೇಶ್, ಸದಸ್ಯ ಟಿ.ಹನುಮಂತರಾಯಪ್ಪ ಇತರರಿದ್ದರು.