Advertisement

ಈ ಬಾರಿಯೇ ಭಿನ್ನ ವಿಭಾಗದ ಕೋರ್ಸ್‌ ಅಧ್ಯಯನ ಅವಕಾಶ

10:52 PM Jul 29, 2021 | Team Udayavani |

ಬೆಂಗಳೂರು: ಇನ್ನು ಕಲಾ ವಿಭಾಗದವರು ವಾಣಿಜ್ಯ ಅಥವಾ ವಿಜ್ಞಾನ ವಿಷಯವನ್ನು ಐಚ್ಛಿಕ (ಆಪ್ಷನಲ್‌) ಆಗಿ  ಅಧ್ಯಯನ ಮಾಡಬಹುದು. ವಿಜ್ಞಾನದ ವಿದ್ಯಾರ್ಥಿಗಳು ಕಲಾ ಅಥವಾ ವಾಣಿಜ್ಯ; ವಾಣಿಜ್ಯ ವಿದ್ಯಾರ್ಥಿಗಳು ಕಲಾ ಅಥವಾ ವಿಜ್ಞಾನ ವಿಷಯವನ್ನು ಪರಿಗಣಿಸಬಹುದು.

Advertisement

ಈ ರೀತಿಯ ಅವಕಾಶವು ಯ ಪಿಯುಸಿ ಮುಗಿಸಿ ಪದವಿ ಸೇರುವ ವಿದ್ಯಾರ್ಥಿಗಳಿಗೆ ಲಭ್ಯ ವಾಗಲಿದೆ. ಅವರಿಗಿ ರುವ ಮೂರು ಐಚ್ಛಿಕ ವಿಷಯಗಳಲ್ಲಿ ಒಂದನ್ನು ಮಾತ್ರ  ಅನ್ಯ  ವಿಭಾಗದಿಂದ ಪಡೆಯಬಹುದಾಗಿದೆ.  ಇದು ರಾಜ್ಯ ಸರಕಾರದಿಂದ  ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಮೊದಲ ಹೆಜ್ಜೆ!

ಎಲ್ಲರಿಗೂ ಅನುಕೂಲ:

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವುದರಿಂದ ಪದವಿಯಲ್ಲಿ ಕನ್ನಡ ಭಾಷಾ ಕಲಿಕೆಗೆ ಯಾವುದೇ ರೀತಿಯಲ್ಲೂ ಹಿನ್ನಡೆಯಾಗುವುದಿಲ್ಲ. ಭಾಷಾ ಅಧ್ಯಯನ ಎಂದಿನಂತೆಯೇ ಮುಂದುವರಿಯಲಿದೆ. ವಿವಿಧ ವಿಭಾಗದ ವಿದ್ಯಾರ್ಥಿಗಳು ತಮ್ಮ ಇಚ್ಛೆಗೆ ಅನುಸಾರವಾಗಿ ಬೇರೆ ವಿಭಾಗದ ಒಂದು ಅಥವಾ ಎರಡು ವಿಷಯಗಳನ್ನು ಅಧ್ಯಯನ  ಮಾಡ ಬಹುದು.

ಇದು ಪದವಿ ಬಳಿಕ ಉದ್ಯೋಗ ಅವಕಾಶ ಹಾಗೂ ಸ್ನಾತಕೋತ್ತರ ಪದವಿ ಪಡೆಯಲು ಅನುಕೂಲ ಆಗಲಿದೆ. ವಿದ್ಯಾರ್ಥಿಗಳು ತಮ್ಮ ಕಲಿಕಾ ಆಸಕ್ತಿ ಹಾಗೂ ಇಚ್ಛೆಗೆ ಅನುಗುಣವಾಗಿ ಬೇರೆ ವಿಭಾಗದ ವಿಷಯವೊಂದನ್ನು ಆಯ್ಕೆ ಮಾಡಬಹುದು. ಇದರಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಒತ್ತಡ ಇರುವುದಿಲ್ಲ. ಈ ಹಿಂದಿನ ಪದ್ಧತಿಯೂ ಇರಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Advertisement

ತಜ್ಞರ ಸಮಿತಿ ವರದಿ ಸಲ್ಲಿಕೆ :

ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2021-22ನೇ ಸಾಲಿನಿಂದ ಅನುಷ್ಠಾನ ಸಂಬಂಧ ಸಾಮಾಜಿಕ ವಿಜ್ಞಾನ, ಭಾಷೆ ಮತ್ತು ಭಾಷಾಶಾಸ್ತ್ರ, ಲಲಿತ ಕಲೆ ಮತ್ತು ದೃಶ್ಯ ಮಾಧ್ಯಮ, ವಿಜ್ಞಾನ ಮತ್ತು ಗಣಿತ ಶಾಸ್ತ್ರ, ರಾಸಾಯನಿಕ ಮತ್ತು ಜೀವವಿಜ್ಞಾನ ಶಾಸ್ತ್ರ, ಭೂ ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆ, ಎಂಜಿನಿಯರಿಂಗ್‌ ವಿಷಯ ತಜ್ಞರ ಪ್ರತ್ಯೇಕ ಸಮಿತಿ ಈಗಾಗಲೇ ಇಲಾಖೆಗೆ ವರದಿ ಸಲ್ಲಿಸಿದ್ದು, ಇಲಾಖೆಯ ಅಧಿಕಾರಿಗಳು ಅದನ್ನು ಕ್ರೋಡೀಕರಿಸಿ, ಶೀಘ್ರವೇ ಸರಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರವೇಶಾತಿಗೆ ಹೊಸ ವ್ಯವಸ್ಥೆ :

ದ್ವಿತೀಯ ಪಿಯುಸಿ ಫ‌ಲಿತಾಂಶ ಹೊರಬಿದ್ದರೂ ರಾಜ್ಯದಲ್ಲಿ ಪದವಿ ಪ್ರವೇಶ ಪ್ರಕ್ರಿಯೆ ಆರಂಭವಾ ಗಿಲ್ಲ. ಕಾರಣ, ಇದಕ್ಕಾಗಿ ಹೊಸ ವ್ಯವಸ್ಥೆ ಯೊಂದನ್ನು ಸಿದ್ಧಪಡಿಸಲಾಗುತ್ತಿದೆ. ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ ತಯಾರಿಸಲಾಗಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳಿಗೆ ಅನ್ವಯವಾಗು ವಂತೆ ಇದನ್ನು ರಚಿಸಲಾಗಿದೆ. ವಿದ್ಯಾರ್ಥಿ ಗಳು 2021-22ನೇ ಸಾಲಿಗೆ ಪದವಿ ಪ್ರವೇಶಾತಿಯನ್ನು ಈ ವ್ಯವಸ್ಥೆಯ ಮೂಲಕವೇ ಆನ್‌ಲೈನ್‌ ನಲ್ಲಿ ಮಾಡ ಬೇಕಾಗುತ್ತದೆ. ಇದನ್ನು ಶೀಘ್ರದಲ್ಲೇ ಆರಂಭಿಸಿ ಆಗಸ್ಟ್‌ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರವೇಶ ಪ್ರಕ್ರಿಯೆ ಶುರು ಮಾಡಲಿದ್ದೇವೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ತಿಳಿಸಿದ್ದಾರೆ.

2021-22ನೇ ಸಾಲಿನಿಂದಲೇ ವಿದ್ಯಾರ್ಥಿ ಗಳು ಬೇರೆ ವಿಭಾಗದ ಒಂದು ಅಥವಾ ಎರಡು ವಿಷಯವನ್ನು ಐಚ್ಛಿಕವಾಗಿ ಅಭ್ಯಾಸ ಮಾಡಲು ಅನುವು ಮಾಡಿಕೊಡಲಿದ್ದೇವೆ. ಈ ಸಂಬಂಧ ವಿಷಯ ತಜ್ಞರು ಈಗಾಗಲೇ ವರದಿ ಸಲ್ಲಿಸಿದ್ದಾರೆ. ಅದನ್ನು ಕ್ರೋಡೀಕರಿಸಿ, ಸರಕಾರಕ್ಕೆ ಸಲ್ಲಿಸಲಿದ್ದೇವೆ. ಕಾಲೇಜಿಗೆ ದಾಖಲಾಗುವ ಸಂದರ್ಭದಲ್ಲೇ ವಿದ್ಯಾರ್ಥಿಗಳಿಗೆ ಈ ಆಯ್ಕೆ ದೊರೆಯಲಿದೆ.-ಪಿ.ಪ್ರದೀಪ್‌,  ಆಯುಕ್ತ, ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ

 

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next