Advertisement
ವಿನೋಬ ನಗರದ ತೋಟಗಾರಿಕೆ ಇಲಾಖೆ ಪಕ್ಕದ 2ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಕೃಷ್ಣಮೂರ್ತಿ ಗಾಯಕವಾಡ್ (78) ಅನುರಾಧ ಕೃಷ್ಣಮೂರ್ತಿ ಗಾಯಕವಾಡ್ (62) ಮೃತ ಪತಿ. ಕೃಷ್ಣಮೂರ್ತಿ ಅವರು ಇತ್ತೀಚೆಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಪತ್ನಿ ಅನುರಾಧ ಎಂದಿನಂತೆ ಗುರುವಾರ ರಾತ್ರಿ ಪತಿಗೆ ಗಂಜಿ ಮಾಡಿ, ಊಟ ಮಾಡಿಸಿ ಮಲಗಿದ್ದಾರೆ. ನಂತರ ಕೆಲಹೊತ್ತಿನಲ್ಲಿ ಉಸಿರಾಟದ ತೊಂದರೆಯಿಂದ ಪತಿ ನಿಧನರಾಗಿದ್ದಾರೆ. ಪತಿ ಮೃತಪಟ್ಟಿರೋದು ಅನುರಾಧಾ ಅವರ ಗಮನಕ್ಕೂಬಂದಿಲ್ಲ. ಆದರೆ ಇದಾದ ಕೆಲ ಸಮಯದಲ್ಲಿ ನಿದ್ರೆಯಲ್ಲಿದ್ದ ಅನುರಾಧ ಕೂಡ ಮೃತಪಟ್ಟಿದ್ದಾರೆ.