Advertisement
ಎರಡನೆಯ ನೃತ್ಯವಾಗಿ ಪ್ರಸ್ತುತಪಡಿಸಿದ್ದು ಕೂಚಿಪುಡಿ ಪರಂಪರೆಯ ಜನಪ್ರಿಯ ನೃತ್ಯ ಬಂಧ ಮಂಡೋದರಿ ಶಪಥಂ. ಈ ನೃತ್ಯವು ಕೃಷ್ಣದೇವರಾಯನ ಆಸ್ಥಾನದ ಸನ್ನಿವೇಶದಲ್ಲಿ ನಡೆಯುವಂತದ್ದು. ಆಸ್ಥಾನ ನರ್ತಕಿಯಾದ ಲಕುಮ ದೇವಿ ತನ್ನೊಡೆಯ ಕೃಷ್ಣದೇವರಾಯನನ್ನು ಹಾಡಿ ಹೊಗಳುವ ವೀರ ರಸ ಪ್ರಧಾನ ಪರಾಕ್‌ನೊಂದಿಗೆ ಮೋಹನರಾಗದಲ್ಲಿ ಪ್ರಾರಂಭಗೊಳ್ಳುತ್ತದೆ. ನಂತರ ಲಕುಮಿದೇವಿಯು ಮಂಡೋದರಿಯ ಕಥಾವೃತ್ತಾಂತವನ್ನು ವಿವರಿಸುತ್ತಾ ರಾವಣನ ಆರ್ಭಟವುಳ್ಳ ರಾಜಸಿಕ ಪಾತ್ರವನ್ನು ವರ್ಣಿಸಿದರೆ ಮಂಡೋದರಿಯ ಸುಕುಮಾರವಾದ, ನವಿರಾದ ಲಾಸ್ಯಭರಿತ ಪಾತ್ರವನ್ನು ಏಕಕಾಲದಲ್ಲಿ ರೂಪಿಸಲಾಯಿತು. ಕೊನೆಯ 2 ನೃತ್ಯ ಬಂಧಗಳಾದ ಸಿಂಹನಂದಿನಿ ಮತ್ತು ಮಯೂರ ಕೌತುವಂ ಪ್ರೇಕ್ಷರಿಗೆ ಕೂಚಿಪುಡಿ ನೃತ್ಯ ಪ್ರಕಾರದ ಅದ್ಭುತ ಪ್ರಪಂಚವನ್ನು ಅನಾವರಣಗೊಳಿಸಿತು. ಸಿಂಹನಂದನ ಎಂಬ ಪುರಾತನ ಸಂಗೀತಪ್ರಕಾರದ ಕ್ಲಿಷ್ಟ ತಾಳದಲ್ಲಿ ಸಿಂಹವಾಹಿನಿಯಾದ ದೇವಿಯನ್ನು ಸ್ತುತಿಸುತ್ತಾ ಪಾದವಿನ್ಯಾಸಗಳಿಂದಲೇ ರಂಗದಲ್ಲಿ ಹರಡಿದ ರಂಗವಲ್ಲಿ ಹುಡಿ ಅಥವಾ ಅಕ್ಕಿ ಹುಡಿಯಲ್ಲಿ ಸಿಂಹದ ಚಿತ್ರ ಬಿಡಿಸುವುದು ಇದರ ಸಂಪ್ರದಾಯ. ಇತಿಹಾಸದಲ್ಲಿ ದಕ್ಷಿಣ ಭಾರತದ, ಅದರಲ್ಲೂ ಮುಖ್ಯವಾಗಿ ಆಂಧ್ರಪ್ರದೇಶದ ಕೆಲವು ದೇವಾಲಯಗಳಲ್ಲಿ ದೇವಿಯ ಆರಾಧನೆಯ ರೂಪದಲ್ಲಿ ಈ ನೃತ್ಯ ಮಾಡಲಾಗುತ್ತಿತ್ತು. ಅದೇ ರೀತಿಯಲ್ಲಿ ಇನ್ನೊಂದು ನೃತ್ಯ ಮಯೂರ ಕೌತುವಂ ಇದನ್ನು ಪ್ರಸ್ತುತಿಗೊಳಿಸಿದವರು ವಿದುಷಿ ಚಂದ್ರಪ್ರಭಾ ಚೇತನ್. ಈ ನೃತ್ಯದಲ್ಲಿ ಮಯೂರ ವಾಹನನಾದ ಸುಬ್ರಹ್ಮಣ್ಯನ್ನು ಸ್ತುತಿಸುತ್ತಾ ಹೆಜ್ಜೆ ವಿನ್ಯಾಸದೊಂದಿಗೆ ರಂಗದ ನೆಲದಲ್ಲಿ ನವಿಲಿನ ಚಿತ್ರವನ್ನು ಬಿಡಿಸುವುದು ಇದರ ಕ್ರಮ. ಈ ಎರಡೂ ನೃತ್ಯ ಪ್ರಕಾರಗಳಿಗೆ ಬಿಗಿಯಾದ ತಾಳಜ್ಞಾನ, ಶಾರೀರಿಕ ಕ್ಷಮತೆ, ಏಕಾಗ್ರತೆ, ಚಿತ್ರ ಬಿಡಿಸುವುದರಲ್ಲಿ ಪರಿಣತಿ ಮುಂತಾದ ಅವಶ್ಯಕತೆಗಳು ಇವೆ.
Advertisement
ನೃತ್ಯಾಂತರಂಗದಲ್ಲಿ ರಂಜಿಸಿದ ಯುವ ದಂಪತಿಯ ಕೂಚಿಪುಡಿ
06:00 AM Jun 01, 2018 | |
Advertisement
Udayavani is now on Telegram. Click here to join our channel and stay updated with the latest news.