Advertisement

ವಿಚ್ಛೇದನಕ್ಕೆ ನಿರ್ಧರಿಸಿದ್ದ ಜೋಡಿಗಳು ಲಾಕ್‌!

08:28 AM May 08, 2020 | Sriram |

ಬೆಂಗಳೂರು: ಸುದೀರ್ಘ‌ ಲಾಕ್‌ಡೌನ್‌ ಪ್ರತ್ಯೇಕವಾಗಲು ನಿರ್ಧರಿಸಿದ್ದ ನೂರಾರು ದಂಪತಿಗಳನ್ನು ಪರೋಕ್ಷವಾಗಿ ಹತ್ತಿರ ತಂದು “ಲಾಕ್‌’ ಮಾಡಿದೆ!

Advertisement

ಸುದೀರ್ಘ‌ ಲಾಕ್‌ಡೌನ್‌ ದಂಪತಿ ಕಲಹಕ್ಕೆ ವಿರಾಮ ನೀಡಿದೆ. ಮನಸ್ಸಿಧ್ದೋ ಇಲ್ಲ ದೆಯೋ ನೂರಾರು ಜೋಡಿ ಒಟ್ಟಿಗೆ ಇರು ವಂತಾಗಿದೆ. ತಿಂಗಳುಗಟ್ಟಲೆ ಹೀಗೆ ನಿಕಟ ವಾಗಿ ಇರುವುದರಿಂದ ಪರಸ್ಪರ ಅರ್ಥ ಮಾಡಿ ಕೊಳ್ಳಲು ಸಾಧ್ಯವಾಗಿದ್ದು, ಕೆಲವರ ಮನಃಪರಿವರ್ತನೆಗೂ ಕಾರಣವಾಗಿರುವುದು ನಿಜ.

ಹಲವು ಸಂದರ್ಭಗಳಲ್ಲಿ ವಿಚ್ಛೇದನಗಳು ತರಾತುರಿಯ ತೀರ್ಮಾನಗಳೂ ಆಗಿರುತ್ತವೆ. ಪತಿ-ಪತ್ನಿ ದುಡಿಯುವವರಾಗಿದ್ದರೆ ಅರ್ಥ ಮಾಡಿಕೊಳ್ಳಲು ಸಮಯವೂ ಸಿಕ್ಕಿರುವುದಿಲ್ಲ. ಇಂಥ ದಂಪತಿಗೆ ಪರಸ್ಪರ ಅರಿತು ನಡೆಯಲು ಲಾಕ್‌ಡೌನ್‌ ಒಂದು ವೇದಿಕೆಯಂತಾಗಿದೆ.

ಪ್ರಕರಣಗಳೆಷ್ಟು?
ರಾಜ್ಯದಲ್ಲಿ ಕೌಟುಂಬಿಕ ವ್ಯಾಜ್ಯಗಳಿಗೆ ಸಂಬಂಧಿಸಿ ನಿತ್ಯ ಕನಿಷ್ಠ 40ರಿಂದ 50 ಪ್ರಕರಣ ಗಳು ನ್ಯಾಯಾಲಯದ ಮುಂದೆ ಬರುತ್ತವೆ. ಇವುಗಳಲ್ಲಿ ವಿಚ್ಛೇದನ ಬಯಸಿದವೇ ಅಧಿಕ.

ಮಾರ್ಚ್‌ 24ರಿಂದ ಮೇ 3ರ ವರೆಗೆ 40 ದಿನಗಳ ಕಾಲ ಲಾಕ್‌ಡೌನ್‌ ಇತ್ತು. ಇದರಲ್ಲಿ ರಜೆಯ 9 ದಿನ ಕಳೆದರೆ ನ್ಯಾಯಾಲಯ ಕಲಾಪಕ್ಕೆ 31 ದಿನ ಸಿಗುತ್ತವೆ. 40ರ ಸರಾಸರಿ ಯಲ್ಲಿ ಲೆಕ್ಕ ಹಾಕಿದರೆ 1,240 ಕೌಟುಂಬಿಕ ಕಲಹ ಪ್ರಕರಣಗಳು ಆಗುತ್ತವೆ. ಆದರೆ ಲಾಕ್‌ಡೌನ್‌ ಅವಧಿಯಲ್ಲಿ ಇಷ್ಟು ಪ್ರಕರಣಗಳು ಕೋರ್ಟ್‌ಗೆ ಬಂದಿಲ್ಲ ಅಥವಾ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿವೆ. ಇಷ್ಟು ವಿಚ್ಛೇದನ ಪ್ರಕರಣಗಳಿಗೆ ತಾತ್ಕಾಲಿಕ ವಿರಾಮ ಸಿಕ್ಕಿದೆ ಎಂದು ಅರ್ಥೈಸಬಹುದು ಎಂದು ಕೌಟುಂಬಿಕ ವ್ಯಾಜ್ಯಗಳನ್ನು ನಿರ್ವಹಿಸುವ ಹೈಕೋರ್ಟ್‌ ವಕೀಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Advertisement

ಕ್ಷುಲ್ಲಕ ವಿಚಾರಗಳಲ್ಲಿ ಹಠ, ಪ್ರತಿಷ್ಠೆ ಬಿಟ್ಟು ಸಹನೆ, ಸಮಾಧಾನ ತಂದು ಕೊಂಡರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಲು ಲಾಕ್‌ಡೌನ್‌ ಪ್ರಕೃತಿದತ್ತ ಅವಕಾಶ. ವಿಚ್ಛೇದನ ಹಂತಕ್ಕೆ ಬಂದಿರುವ ದಂಪತಿಗೆ ಮನಃಪರಿವರ್ತನೆ ಮಾಡಿಕೊಳ್ಳಲು ಸುವರ್ಣಾವಕಾಶ.
– ಕೆ.ಆರ್‌. ರೂಪಾ,
ಕೌಟುಂಬಿಕ ಆಪ್ತ ಸಮಾಲೋಚಕರು.

- ರಫೀಕ್‌ ಅಹ್ಮದ್

Advertisement

Udayavani is now on Telegram. Click here to join our channel and stay updated with the latest news.

Next