Advertisement

ಸಿಂಹದ ಮರಿ ಬಳಸಿ ಜೋಡಿಗಳ  ಫೋಟೋ ಶೂಟ್ : ಭುಗಿಲೆದ್ದ ಆಕ್ರೋಶ

07:48 PM Mar 13, 2021 | Team Udayavani |

ಲಾಹೋರ್: ಇತ್ತೀಚಿನ ದಿನಗಳಲ್ಲಿ ನವಜೋಡಿಗಳು ಪ್ರಾಣಿಗಳನ್ನು ತಮ್ಮ ಫೋಟೋ ಶೂಟ್ ಗಳಲ್ಲಿ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಲಾಹೋರ್ ನ ಜೋಡಿಯೊಂದು ಸಿಂಹದ ಮರಿಯೊಂದನ್ನು ಬಳಸಿಕೊಂಡು ಫೋಟೋ ಶೂಟ್ ಮಾಡಿಸಿದ್ದು, ಇದೀಗ ಈ ಪೋಟೋ ಶೂಟ್ ಪ್ರಾಣಿ ದಯಾ ಸಂ‍ಘವನ್ನು ಒಳಗೊಂಡಂತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಪಾಕಿಸ್ತಾನದ ಲಾಹೋರ್ ಪ್ರದೇಶದ ಜೋಡಿಯೊಂದು ಈ ರೀತಿಯ ವಿಚಿತ್ರ ಹುಚ್ಚು ಸಾಹಸವನ್ನು ಮಾಡಿದ್ದು, ಇದೀಗ ಈ ಪೋಟೋ ಮತ್ತು ವಿಡಿಯೋಗಳು  ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ.

ಈ ಪೋಟೋದಲ್ಲಿ ಸಿಂಹದ ಮರಿಯೊಂದು ಮಲಗಿರುವ ದೃಶ್ಯವಿದ್ದು, ಹಿಂಭಾಗದಲ್ಲಿ ಜೋಡಿಗಳು ಕುಳಿತಿರುವ ದೃಷ್ಯವನ್ನು ಸೆರೆಹಿಡಿಯಲಾಗಿದೆ. ಈ ಪೋಟೋ ಪೋಸ್ಟ್ ಆದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪ್ರಾಣಿಗಳ ಕುರಿತು ಒಲವವನ್ನು ಹೊಂದಿರುವ ಹಲವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಈ ಘಟನೆಯ ಕುರಿತಾಗಿ ಪಾಕಿಸ್ತಾನ ಮೂಲದ ಸೇವ್ ದಿ ವರ್ಲ್ಡ್ ಸಂಸ್ಥೆ ಈ ಕುರಿತಾದ  ವಿಡಿಯೋ   ಒಂದನ್ನು ಶೇರ್ ಮಾಡಿದ್ದು, ಈ ಪೋಟೋಗಳನ್ನು ಲಾಹೋರ್ ನ ಸ್ಟುಡಿಯೋ ಒಂದರಲ್ಲಿ ತೆಗೆಯಲಾಗಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ:ಟ್ರ್ಯಾಕ್ಟರ್ ಪಲ್ಟಿಯಾಗಿ 10 ಮಂದಿ ನರೇಗಾ ಕೂಲಿ ಕಾರ್ಮಿಕರಿಗೆ ಗಾಯ

Advertisement

ಈ ಫೋಟೋಗಳನ್ನು ತೆಗೆದ ಸ್ಟುಡಿಯೋ ಹೆಸರು ಅಫ್ಜಲ್ ಎಂದು ವರದಿಯಾಗಿದ್ದು, ಇದು ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ  ಬರೊಬ್ಬರಿ 1,20,000 ಫಾಲೋವರ್ಸ್ ಗಳನ್ನು ಹೊಂದಿದೆ ಎನ್ನಲಾಗಿದೆ.

ಈ ನಡುವೆ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಹಲವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಬಳಿಕ ಫೋಟೋಗಳನ್ನು ಜಾಲತಾಣಗಳಿಂದ ತೆಗೆಯಲಾಗಿದೆ. ಆದರೆ ನೆಟ್ಟಿಗರು ಮಾತ್ರ ಈ ಪೋಟೋದ ಸ್ಕ್ರೀನ್ ಶಾಟ್ ಅನ್ನು ತೆಗೆದುಕೊಂಡು ಇನ್ನಷ್ಟು ವೈರಲ್ ಮಾಡಿದ್ದಾರೆ.

@PunjabWildlife does your permit allow for a lion cub to be rented out for ceremonies?Look at this poor cub sedated and being used as a prop.This studio is in Lahore where this cub is being kept.Rescue him please pic.twitter.com/fMcqZnoRMd

— save the wild (@wildpakistan)

ಸದ್ಯ ಈ ರೀತಿಯಲ್ಲಿ ಫೋಟೋ ತೆಗೆದ ಕಾರಣದಿಂದಾಗಿ ಪ್ರಾಣಿದಯಾ ಸಂಘಗಳು ಸ್ಟುಡಿಯೋದ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿವೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next