Advertisement

ಬೆಂಗಳೂರಲ್ಲಿ ದೇಶದ ಮೊದಲ 3D ಅಂಚೆ ಕಚೇರಿ: ವಿಶೇಷಗಳಿವು… 

08:36 PM Aug 18, 2023 | Team Udayavani |

ಭಾರತದ ಹೊಸ ಪರಿಚಯಕ್ಕೆ ಒಂದಿಲ್ಲೊಂದು ಕೊಡುಗೆ ನೀಡುತ್ತಲೇ ಇರುವ ಬೆಂಗಳೂರು ಇದೀಗ ದೇಶದ ಮೊದಲ 3ಡಿ ಅಂಚೆ ಕಚೇರಿಯನ್ನು ಹೊಂದುವುದರ ಮೂಲಕ ದೇಶ ಮಾತ್ರವಲ್ಲದೇ ವಿಶ್ವದ ಗಮನವನ್ನೂ ತನ್ನತ್ತ ಸೆಳೆಯುತ್ತಿದೆ. ಅತ್ಯಾಧುನಿಕ ವ್ಯವಸ್ಥೆಯ ಮೂಲಕ ನಿರ್ಮಿಸಲಾಗಿರುವ ಅಂಚೆ ಕಚೇರಿಯ ವೈಶಿ ಷ್ಟ್ಯ ಹೀಗಿದೆ..

Advertisement

ಕೇವಲ 43 ದಿನಗಳಲ್ಲಿ ನಿರ್ಮಾಣ
ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಶೈಲಿಯಲ್ಲಿ ಕಚೇರಿಯೊಂದನ್ನು ಕಟ್ಟುವುದಾದರೆ ಅದಕ್ಕೆ ಕನಿಷ್ಠ 6 ರಿಂದ 8 ತಿಂಗಳ ಸಮಯವಾದರೂ ಬೇಕು. ಆದರೀಗ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ ಅಂಚೆ ಕಚೇರಿಯನ್ನು 3ಡಿ ತಂತ್ರಜ್ಞಾನ ಬಳಸಿ ಕೇವಲ 43 ದಿನಗಳಲ್ಲೇ ನಿರ್ಮಿಸಲಾಗಿದೆ. ಇದು ಕಟ್ಟಡ ನಿರ್ಮಾಣ ತಂತ್ರಜ್ಞಾನದಲ್ಲಿ ಮಹತ್ತರ ಬದಲಾವಣೆಗೆ ಸಾಕ್ಷಿ.

ಏನಿದು 3ಡಿ ತಂತ್ರಜ್ಞಾನ?
* 3ಡಿ ಕಾಂಕ್ರೀಟ್‌ ಪ್ರಿಂಟಿಂಗ್‌ ತಂತ್ರಜ್ಞಾನವೆಂಬುದು ಸಂಪೂರ್ಣ ಸ್ವಯಂಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನ
* ಕಚೇರಿ ವಿನ್ಯಾಸ ನಕ್ಷೆ ಒದಗಿಸಿದರೆ ಸಾಕು, ಅನುಮೋದಿತ ವಿನ್ಯಾಸದ ಪ್ರಕಾರ ಕಟ್ಟಡ ನಿರ್ಮಾಣ ಸಾಧ್ಯ
* ಸಾಮಾನ್ಯ ಕಾಂಕ್ರೀಟ್‌ಗಿಂತಲೂ ಹೆಚ್ಚಿನ ಸಿಮೆಂಟ್‌ ಮೌಲ್ಯ ಹೊಂದಿರುವ ಕಾಂಕ್ರೀಟ್‌ ಬಳಕೆ ಮಾಡಲಾಗುತ್ತೆ
* ರೊಬೋಟಿಕ್‌ ಪ್ರಿಂಟರ್‌ ಮಿಷನ್‌ ಸ್ವತಃ ಕಾಂಕ್ರೀಟ್‌ ಸುರಿದು ಕಟ್ಟಡವನ್ನು ಕಟ್ಟುತ್ತದೆ
* ಪದರಗಳ ಮೇಲೆ ಪದರದಂತೆ ಕಾಂಕ್ರೀಟ್‌ ಸುರಿದು ಕಟ್ಟುವುದರಿಂದ ಕಟ್ಟಡದ ಸದೃಢತೆ ಹೆಚ್ಚು

1,021 ಚದರ ಅಡಿ
ಅಂಚೆ ಕಚೇರಿ ನಿರ್ಮಾಣಗೊಂಡಿರುವ ಜಾಗ

23 ಲಕ್ಷ ರೂ.
ಕಚೇರಿ ನಿರ್ಮಾಣದ ವೆಚ್ಚ

Advertisement

30-40 %
ಮಾಮೂಲಿ ವೆಚ್ಚಕ್ಕೆ ಹೋಲಿಸಿದರೆ, ವೆಚ್ಚ ಕಡಿಮೆಯಾಗಿರುವ ಪ್ರಮಾಣ

Advertisement

Udayavani is now on Telegram. Click here to join our channel and stay updated with the latest news.

Next