ನವದೆಹಲಿ: ಈಶಾನ್ಯ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಸರ್ವ ಪ್ರಯತ್ನ ಮಾಡುತ್ತಿದ್ದು ಮಣಿಪುರದ ಜನರೊಂದಿಗೆ ಇಡೀ ದೇಶವೇ ನಿಂತಿದೆ, ಕೇವಲ ಶಾಂತಿಯಿಂದ ಮಾತ್ರ ಇಲ್ಲಿನ ಪರಿಸ್ಥಿತಿ ನಿಭಾಯಿಸಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಐತಿಹಾಸಿಕ ಕೆಂಪುಕೋಟೆಯಲ್ಲಿ ಸತತ 10ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ 77ನೇ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಕೋರಿ ಮಾತನಾಡಿದ ಅವರು ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಸತ್ಯಾಗ್ರಹ ಚಳುವಳಿ. ಭಗತ್ಸಿಂಗ್, ಸುಖದೇವ ಅವರ ತ್ಯಾಗ, ತಪಸ್ಸು, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಅವರಿಗೆ ಮೊದಲು ನಮ್ಮ ನಮನ ಎಂದು ಹೇಳಿದರು.
ಕಳೆದ ಕೆಲವು ವಾರಗಳ ಹಿಂದೆ ಮಣಿಪುರ ಹಿಂಸಾಚಾರದ ಅಲೆಗೆ ಸಾಕ್ಷಿಯಾಯಿತು. ಹಲವಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು ಮತ್ತು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಅವಮಾನ ಕೂಡ ಆಯಿತು. ಆದರೆ, ನಿಧಾನವಾಗಿ ಈ ಪ್ರದೇಶದಲ್ಲಿ ಶಾಂತಿ ಮರಳುತ್ತಿದೆ. ಇಡೀ ಭಾರತ ಮಣಿಪುರದೊಂದಿಗೆ ನಿಂತಿದೆ ಎಂದು ಅವರು ಹೇಳಿದರು, ಇಲ್ಲಿ ಶಾಂತಿ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಒಟ್ಟಾಗಿ ಕೆಲಸ ಮಾಡುತ್ತಿದೆ ಎಂದರು.
ಮಣಿಪುರದ ಜನರು ಶಾಂತಿ ಕಾಪಾಡಬೇಕಾಗಿದೆ ಕೇವಲ ಶಾಂತಿಯಿಂದ ಮಾತ್ರ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು.
ಭಾರತದ ವೀರರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದರು. ದೇಶದ ನಾರಿ, ಯುವ, ರೈತ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹವಣಿಸುತ್ತಿದ್ದರು. ಅನೇಕ ಮಹಾಪುರಷರು ದೇಶದ ಸ್ವಾತಂತ್ರ್ಯಕ್ಕಾಗಿ, ಗುಲಾಮದಿಂದ ಹೊರಬಹರುಲು ಶ್ರಮಿಸಿದರು. ದೇಶದ ಮುಂದೆ ಮತ್ತೊಂದು ಅವಕಾಶ ಬಂದಿದೆ. ಅಮೃತಕಾಲದಲ್ಲಿ ನಾವು ಇದ್ದೇವೆ. ಅಮೃತಕಾಲದ ಮೊದಲ ವರ್ಷದಲ್ಲಿದ್ದೇವೆ. ಈ ಸಮಯದಲ್ಲಿ ಸರ್ವಜನ ಹಿತಾಯ ಸರ್ವಜನ ಸುಖಾಯಗಾಗಿ ನಾವು ಮುಂದೆ ಬಂದರೇ ಮುಂದಿನ ಪೀಳಿಗೆಗೆ ಬಲಿಷ್ಠ ಭಾರತ ನಿರ್ಮಾಣ ಮಾಡಬಹುದು ಎಂದು ಹೇಳಿದರು.
ಯುವ ಶಕ್ತಿ ಮೇಲೆ ನನಗೆ ಬರವಸೆ ಇದೆ. ಯುವ ಶಕ್ತಿಯಲ್ಲಿ ಸಾಮರ್ಥ್ಯವಿದೆ. ಜಗತ್ತಿನ ಮೂರು ಸ್ಟಾರ್ಟಪ್ನಲ್ಲಿ ನಮ್ಮ ಯುವಕರು ಇದ್ದಾರೆ. ಭವಿಷ್ಯದ ದಿನಗಳಲ್ಲಿ ಭಾರತದ ಟೆಕ್ನಾಲಜಿಯಲ್ಲಿ ನಂಬರ್ 1 ಆಗಲಿದೆ ಎಂದು ಹೇಳಿದರು.