Advertisement

ಪರಿಸರ ರಕ್ಷಣೆಗೆ ದೇಶ ಪರ್ಯಟನೆ

05:47 AM Jan 11, 2019 | Team Udayavani |

ಕಲಬುರಗಿ: ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆಯಲ್ಲಿ ಮಹಾರಾಷ್ಟ್ರ ಸತಾರಾ ಜಿಲ್ಲೆಯ ವಿಕಾಸ ಜಗನ್ನಾಥ ಶಿಂಧೆ ವಿದ್ಯಾರ್ಥಿಗಳೊಂದಿಗೆ ಪರಿಸರ ಮಹತ್ವ ಕುರಿತು ಸಂವಾದ ನಡೆಸಿದರು.

Advertisement

ದ್ವಿಚಕ್ರ ವಾಹನದ ಮೇಲೆ ದೇಶ ಪರ್ಯಟನೆ ಮಾಡುತ್ತ ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಹರಿಯಾಣ, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ ಸಹಿತ ಎಲ್ಲ ರಾಜ್ಯಗಳಲ್ಲೂ ಪ್ರವಾಸ ಕೈಗೊಂಡು ನಗರಕ್ಕೆ ಆಗಮಿಸಿ, ಪರಿಸರದ ಮಹತ್ವ ಹಾಗೂ ರಕ್ಷಣೆ ಅರಿವು ಸಾರುತ್ತ ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮ, ನೀರು ಉಳಿಸಿ, ಹೆಣ್ಣು ಮಗಳನ್ನು ಉಳಿಸಿ-ಓದಿಸಿ, ಗಿಡಮರಗಳನ್ನು ಬೆಳೆಸಿರಿ ಮತ್ತು ಪ್ರಕೃತಿ ಅರಿತು ನಡೆಯಿರಿ ಎನ್ನುವ ಧ್ಯೇಯದೊಂದಿಗೆ ವಿಕಾಸ ಜಗನ್ನಾಥ ಶಿಂಧೆ ಅವರು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಸಂವಾದ ಏರ್ಪಡಿಸಲಾಗಿತ್ತು. ಅಪ್ಪಾ ಪಬ್ಲಿಕ್‌ ಶಾಲೆ ಹಾಗೂ ಎಸ್‌ಬಿಆರ್‌ ಶಾಲೆಯ ವಿದ್ಯಾರ್ಥಿಗಳು, ಪ್ರಾಚಾರ್ಯರಾದ ಎನ್‌. ಎಸ್‌. ದೇವರಕಲ್‌ ಮತ್ತು ಶಿಕ್ಷಕರ ವರ್ಗದವರು ಹಾಜರಿದ್ದರು. ಹಿರಿಯ ಉಪನ್ಯಾಸಕ ಡಾ| ಚಂದ್ರಕಾಂತ ಪಾಟೀಲ ನಿರೂಪಿಸಿದರು. ಶಂಕರ‌ಗೌಡ ಹೊಸಮನಿ ವಿಕಾಸ ಜಗನ್ನಾಥ ಶಿಂಧೆ ಅವರಿಗೆ ಹೂಗುಚ್ಚ ನೀಡಿ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next