Advertisement

ಜಿಎಸ್‌ಟಿಯಿಂದ ದೇಶ ಸುಧಾರಣೆ

03:26 PM Jun 20, 2017 | Team Udayavani |

ಶಹಾಬಾದ: ಭಾರತದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ತೆರಿಗೆ ಪದ್ಧತಿ ಪ್ರಸ್ತುತವಾಗಿದೆ ಎಂದು ಕಲಬುರಗಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಪದ್ಮಾಕರ್‌ ಆರ್‌. ಕುಲಕರ್ಣಿ ಹೇಳಿದರು. 

Advertisement

ನಗರದ ಬಾಲಾಜಿ ಸಭಾಂಗಣದಲ್ಲಿ ಹೈದ್ರಬಾದ ಕರ್ನಾಟಕ ಚೇಂಬರ್ ಆಫ್‌ ಕಾಮರ್ಸ ಕಲಬುರಗಿ, ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ಕಲಬುರಗಿ ಹಾಗೂ ವ್ಯಾಪಾರಿ ವರ್ತಕರ ಸಂಘ ಶಹಾಬಾದ ವತಿಯಿಂದ ಆಯೋಜಿಸಲಾಗಿದ್ದ ಜಿಎಸ್‌ಟಿ ಕುರಿತ ವಿಚಾರ ಸಂಕಿರಣ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು. 

ಉತ್ಪಾದಕ ವಸ್ತುಗಳ ಎಲ್ಲ ತೆರಿಗೆಯನ್ನು ಒಂದೇ ವ್ಯವಸ್ಥೆಯಡಿ ತರುವ ಪದ್ಧತಿಯನ್ನು ಜಿಎಸ್‌ಟಿ ಅಥವಾ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಲಾಗುತ್ತದೆ ದೇಶಾದ್ಯಂತ ಏಕರೂಪದ ತೆರಿಗೆ ಪದ್ಧತಿ ಅನ್ವಯವಾಗುವಂತೆ ಮಾಡಲಾಗುತ್ತಿದೆ. ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು.

ವಹಿವಾಟು ವೆತ್ಛ ಕೂಡ ಕಡಿಮೆಯಾಗುತ್ತದೆ. ಈಗಿನ ಎಲ್ಲ ಪರೋಕ್ಷ ತೆರಿಗೆ ತೆಗೆದು ಹಾಕಿ ನೇರ ತೆರಿಗೆ ಮಾತ್ರ ಉಳಿದುಕೊಳ್ಳುತ್ತದೆ. ಅಂದರೆ ರಾಜ್ಯದಿಂದ ರಾಜ್ಯಕ್ಕೆ ಇಂದೇ ವಸ್ತುವಿನ ಬೆಲೆಯಲ್ಲಿ ಭಾರೀ ದರ ವ್ಯತ್ಯಾಸ ಕಾಣಸಿಗುವುದಿಲ್ಲ. ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತೆ ಮೀರಾ ಪಂಡಿತ ಮಾತನಾಡಿದರು. 

ವಿಶ್ವದ ಸುಮಾರು 150 ದೇಶಗಳಲ್ಲಿ ಜಾರಿಯಲ್ಲಿರುವ ಈ ತೆರಿಗೆ ವಿಧಾನ ಇಡೀ ದೇಶವನ್ನು ಸಮಾನ ಮಾರುಕಟ್ಟೆಯಡಿ ತರಲಿದೆ. ಎಲ್ಲ ಪರೋಕ್ಷ ತೆರಿಗೆಗಳನ್ನು ಬದಲಾಯಿಸಿ ಒಂದೇ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಉದ್ಯಮಿಗಳಿಗೂ, ಸರಕಾರಕ್ಕೂ ಒಳ್ಳೆಯದು.

Advertisement

ಜಿಎಸ್‌ಟಿ ಪರಿಣಾಮಕಾರಿ ಜಾರಿಯಿಂದ ಉದ್ಯಮಿಗಳು ದೇಶೀಯ ಸರಕುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಸ್ಪರ್ಧೆ ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಿ.ಎ. ಮಾಣಿಕ ಮಂದಕನಳ್ಳಿ ಮಾತನಾಡಿದರು. ಹೈದ್ರಬಾದ ಕರ್ನಾಟಕ ಚೇಂಬರ್ ಆಫ್‌ ಕಾಮರ್ಸ್‌ ಅಧ್ಯಕ್ಷ ಸೋಮಶೇಖರ ಜಿ. ಟೆಂಗಳಿ ಕಾರ್ಯಕ್ರಮ ಉದ್ಘಾಟಿಸಿದರು.

ಶಿವಕುಮಾರ ಇಂಗಿನಶೆಟ್ಟಿ, ಅಣವೀರ ಇಂಗಿನಶೆಟ್ಟಿ, ಬಾಬುರಾವ ಪಂಚಾಳ, ಅಶೋಕ ಇಂಗಿನಶೆಟ್ಟಿ, ಶರಣಬಸಪ್ಪ ಕೋಬಾಳ, ಭೀಮರಾಯ ಮೇಟಿ, ಭೀಮಣ್ಣ ಖಂಡ್ರೆ, ಮೃತ್ಯುಂಜಯ ಹಿರೇಮಠ, ಚಂದ್ರಕಾಂತ ದಸ್ತಾಪುರ, ವಿಶ್ವರಾಧ್ಯ ಬೀರಾಳ, ವಿಜಯಕುಮಾರ ವರ್ಮಾ,

-ರಾಜಗೋಪಾಲ ಸಾರಡಾ, ಪ್ರಶಾಂತ ಮರಗೋಳ, ಅಣ್ಣಾರಾವ ಮಾಲಿಪಾಟೀಲ, ಮಲ್ಲಿಕಾರ್ಜುನ ಗೊಳೇದ, ಶರಣು ಮಲಕೂಡ, ಸಿದ್ದು ಬೇಲೂರ, ರಾಜೇಶ ಮಂತ್ರಿ, ಡಿ.ಸಿ. ಹೊಮನಿ, ಪುರುಷೋತ್ತಮ ಮಂತ್ರಿ, ಪಿಂಟು ಕುಂಬಾರ ಸೇರಿದಂತೆ ಎಚ್‌ಕೆಸಿಸಿ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next