Advertisement
ಕೆಂಪು ಕೋಟೆಯ ಸಮಾರಂಭಕ್ಕೆ 4,000ಕ್ಕೂ ಅಧಿಕ ವಿಶೇಷ ಆಹ್ವಾನಿತರು ಹಾಜರಾಗಲಿದ್ದು, ಈ ಪೈಕಿ ದೇಶದ ನಾಲ್ಕು ಆಧಾರ ಸ್ತಂಭಗಳೆಂದು ಪರಿಗಣಿಸಲ್ಪಟ್ಟ ರೈತರು, ಯುವಜನತೆ, ಮಹಿಳೆಯರು ಮತ್ತು ಬಡವರ್ಗದ ಜನ ಇರಲಿದ್ದಾರೆ.ಈ ವಿಶೇಷ ಆಹ್ವಾನಿತರ ಪಟ್ಟಿಯನ್ನು 11 ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೃಷಿ ಮತ್ತು ರೈತರ ಅಭಿವೃದ್ಧಿ ವಿಭಾಗದಲ್ಲಿ 1,000 ಯುವಜನರ ವಿಭಾಗದಲ್ಲಿ 600, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದಿಂದ 300 ಮಹಿಳೆಯರಿಗೆ ಆಹ್ವಾನ ನೀಡಲಾಗಿದ್ದು ಈ ಪೈಕಿ 45 ಲಖ್‌ಪತಿ ದೀದಿಯರು, 30 ಡ್ರೋನ್ ದೀದಿಯರೂ ಇರಲಿದ್ದಾರೆ.
Related Articles
ಆ.15ರಂದು ಕೆಂಪುಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಲಿದ್ದಾರೆ. ಇದು ಪ್ರಧಾನಿಯಾಗಿ ಅವರು ಮಾಡಲಿರುವ ಸ್ವಾತಂತ್ರ್ಯೋತ್ಸವದ 11ನೇ ಭಾಷಣ. ಈ ಮೂಲಕ ಹೊಸ ದಾಖಲೆಯೂ ನಿರ್ಮಾಣವಾಗಲಿದೆ. ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ 17 ಬಾರಿ, ಬಳಿಕ ಮಾಜಿ ಪ್ರಧಾನಿ ಇಂದಿರಾ ಗಾಂಧಿ 16 ಬಾರಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದರು. ಈಗ 11ನೇ ಬಾರಿಗೆ ಭಾಷಣ ಮಾಡುವ ಮೂಲಕ ಮೋದಿ ಹೊಸ ದಾಖಲೆ ನಿರ್ಮಿಸುತ್ತಿದ್ದಾರೆ.
Advertisement
ಇಂದು ರಾಷ್ಟ್ರಪತಿ ಭಾಷಣ:78ನೇ ಸ್ವಾತಂತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ರಾಷ್ಟಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂಜೆ 7ರಿಂದ ಭಾಷಣದ ನೇರ ಪ್ರಸಾರ ಪ್ರಸಾರವಾಗಲಿದೆ. ಇಂದು ಅಮೃತ ಉದ್ಯಾನ ಉದ್ಘಾಟನೆ: ತುಳಸಿ ವಿತರಣೆ
ಹೊಸದಿಲ್ಲಿ: ನವೀಕರಣಗೊಂಡ ಅಮೃತ ಉದ್ಯಾನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಉದ್ಘಾಟಿಸ ಲಿದ್ದು, ಶುಕ್ರವಾರದಿಂದ ಸೆ.15ರ ವ ರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವ ಕಾ ಶ ವಿ ರ ಲಿ ದೆ. ಅಲ್ಲದೇ ಕಲ್ಲಿನ ಅಬ್ಯಾಕಸ್, ಧ್ವನಿ ಕೊಳವೆ, ಸಂಗೀತ ಗೋಡೆಗಳನ್ನು ಮಕ್ಕಳನ್ನು ಆಕರ್ಷಿ ಸಲೆಂದು ನಿರ್ಮಿಸಲಾಗಿದೆ. ಪರಿಸರ ಸಂರಕ್ಷಣೆಯ ಮಹತ್ವ ಮತ್ತು ಹೊಸ ಜೀವನದ ದ್ಯೋತಕವಾಗಿ ಉದ್ಯಾನಕ್ಕೆ ಭೇಟಿ ನೀಡುವವರಿಗೆ ತುಳಸಿ ಸಸ್ಯದ ಬೀಜಗಳುಳ್ಳ ಸೀಡ್ ಪೇಪರ್ ನೀಡಲಾಗು ವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.