Advertisement

ಜನಿವಾರದಿಂದ ದೇಶ ನಾಶ: ಬೈಲೂರು ಶ್ರೀ

07:10 AM Dec 07, 2017 | |

ಬೆಳಗಾವಿ: ಹತ್ತು ಪೈಸೆ ಕಿಮ್ಮತ್ತಿನ ದಾರ(ಜನಿವಾರ) ದೇಶವನ್ನು ಒಡೆದಿದೆ. ಈ ದಾರ(ಜನಿವಾರ)ದಿಂದ ನೇಣು ಹಾಕಿಕೊಂಡ್ರೂ ಪ್ರಾಣ ಹೋಗದು. ಆದರೆ, ಅದು ಜನರ ಪ್ರಾಣ ತೆಗೆಯುತ್ತಿದೆ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದರು.

Advertisement

ಸದಾಶಿವ ನಗರದ ಸ್ಮಶಾನದಲ್ಲಿ ನಡೆದ ಮೌಡ್ಯ ವಿರೋಧಿ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶ ವಿಭಜನೆ ಮಾಡಿ, ಗಂಡು ಹೆಣ್ಣು, ಬಡವ ಬಲ್ಲಿದ, ಮೇಲು ಕೀಳು ಎಂಬ ವಿಭಜನೆ ಮಾಡಿರುವ ಈ ದಾರವೇ ದೇಶವನ್ನು ನಾಶ ಮಾಡಿದೆ ಎಂದು ಟೀಕಿಸಿದರು. ಉಡುಪಿಯಲ್ಲಿ ನಡೆದ ಧರ್ಮ ಸಂಸದ್‌, ಚಾತುರ್ವರ್ಣದ ಬ್ರಾಹ್ಮಣತ್ವ ಸಂರಕ್ಷಿಸುವ ಹಾಗೂ ವೈದಿಕ ಶಾಹಿ ಉಳಿಸುವ ಸಂಸದ್‌ ಆಗಿದೆಯೇ ಹೊರತು ಹಿಂದೂ ಧರ್ಮವನ್ನು ರಕ್ಷಿಸುವ ಸಂಸದ್‌ ಅಲ್ಲ ಎಂದು ಟೀಕಿಸಿದರು. ಶಿಕ್ಷಣ ಕ್ರಾಂತಿ ಮಾಡಿದ ಸಾವಿತ್ರಿ ಬಾಯಿ ಫುಲೆ ಅವರನ್ನು ಪೂಜಿಸಿ. ಲಕ್ಷ್ಮೀ,ಸರಸ್ವತಿ, ಪಾರ್ವತಿಯನ್ನು ಪೂಜೆ ಮಾಡುವುದನ್ನು ಬಿಡಿ. ಗಂಗೆ ಇಲ್ಲದಿದ್ದಾಗ ಪಾರ್ವತಿ,ಪಾರ್ವತಿ ಇಲ್ಲದಿದ್ದಾಗ ಗಂಗೆ ಅನ್ನೋದು ಡ್ಯುಯಟ್‌ ಏನು? ಎಂದು ವ್ಯಂಗ್ಯವಾಡಿದರು.ಪುರಾಣ ಎಂಬುದು ಪುಂಡರ ಗೋಷ್ಠಿ, ಪಂಚಾಂಗ ಹೇಳುವವರು ಮಾನಸಿಕ ಭಯೋತ್ಪಾದಕರು ಎಂದು ಆರೋಪಿಸಿದರು.

ಸ್ಮಶಾನದಲ್ಲಿ ಮಲಗಿದ್ದರಿಂದ ಶುಕ್ರದೆಸೆ ಬಂತು’
ಬೆಳಗಾವಿ:
“ಸ್ಮಶಾನದಲ್ಲಿ ಮಲಗುತ್ತಿರುವುದರಿಂದ ನನಗೆ ಶುಕ್ರದೆಸೆ ಬಂದಿದ್ದು, ಹುದಲಿಯಲ್ಲಿ ಶುಗರ್‌ ಫ್ಯಾಕ್ಟರಿ ಕಟ್ಟಿದ್ದೇನೆ. ಯರಗಟ್ಟಿಯಲ್ಲಿ ಮತ್ತೂಂದು ಕಾರ್ಖಾನೆ ಆರಂಭಿಸಲಾಗುವುದು’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಸ್ಮಶಾನದಲ್ಲಿ ಬುಧವಾರ ನಡೆದ ಮೌಡ್ಯ ವಿರೋಧಿ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜನವರಿಯಿಂದ ಮತ್ತೂಂದು ಸೆಕ್ಟರ್‌ಗೆ ಕಾಲಿಡಲಿದ್ದೇನೆ. ಇನ್ನು ಮುಂದೆ ಎರಡು ಹೆಲಿಕಾಪ್ಟರ್‌ ಖರೀದಿಸುತ್ತೇನೆ. ವಿಚಾರಧಾರೆ ಮಾತ್ರ ಇದೇ ರೀತಿ ಮುಂದುವರಿಯುತ್ತದೆ. ಗಳಿಸಿರುವ ಆದಾಯವನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತೇನೆ’ ಎಂದರು.

ತಾಯಿ ಅನಾಥೆ ನನ್ನ ಜಾತಿ ಗೊತ್ತಿಲ್ಲ: ನಟ ಪ್ರಕಾಶ ರೈ
ಬೆಳಗಾವಿ:
“ನಮ್ಮವ್ವ ಗದುಗಿನ ಬೆಟಗೇರಿಯಕ್ಕಿ. ಅನಾಥೆಯಾಗಿದ್ದ ನನ್ನ ತಾಯಿ ಬೆಳಗಾವಿಯ ಡಿವೈನ್‌ ಪ್ರೊವಿಡೆನ್ಸ್‌ ಅನಾಥ ಆಶ್ರಮದಲ್ಲಿ ಇದ್ದಳು. ಮಂಗಳೂರಿನ ನನ್ನ ಅಪ್ಪ ಅವ್ವನ ಮದುವೆಯಾದ. ನಮ್ಮವ್ವಗ ಆಕಿದ ನಂಬಿಕಿ ಅದ. ನಮ್ಮಪ್ಪಗ ಅವನದೇ ಆದ ನಂಬಿಕಿ ಅದ. ಆದರ ನನಗೆ ದೇವರ ಮ್ಯಾಲ ನಂಬಿಕಿ ಇಲ್ಲ. ನನ್ನ ಜಾತಿ ಇಲ್ಲ, ದೇವರು ಗೊತ್ತಿಲ್ಲ. ಜೀವನದಲ್ಲಿ ಕಷ್ಟ ಪಟ್ಟಿದ್ದೇನೆ. ಬೇರೆಯವರ ಕಷ್ಟ ಏನೆಂಬುದು ನನಗೆ ಗೊತ್ತಾಗುತ್ತದೆ’ ಎಂದು ಬೆಳಗಾವಿಯ ಜವಾರಿ ಭಾಷೆಯಲ್ಲಿಯೇ ನಟ ಪ್ರಕಾಶ ರೈ ಭಾಷಣ ಆರಂಭಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಭಾರತ ಮೂಢನಂಬಿಕೆಗಳ ತವರೂರಾಗಿದ್ದು, ಪಂಚಾಗ, ಜ್ಯೋತಿಷ್ಯ ಎಂಬುದು ಶುದಟಛಿ ಸುಳ್ಳು. ದೇಶದ ಸಂವಿಧಾನ ಕಂಟ್ರೋಲ್‌ ಮಾಡುವ ಸ್ಥಳ ನಾಗಪುರದಲ್ಲಿದೆ. ಹಿಂದೂ ರಾಷ್ಟ್ರ ಮಾಡಲು ಹುನ್ನಾರ ನಡೆದಿದ್ದು, ಬ್ರಾಹ್ಮಣ್ಯ ಪುರೋಹಿತರ ಹುನ್ನಾರ ಇದರಲ್ಲಿದೆ. 
– ಡಾ. ಪುರುಷೋತ್ತಮ ಬಿಳಿಮಲೆ, ದೆಹಲಿ ಜೆಎನ್‌ಯು ಕನ್ನಡ
ವಿಭಾಗದ ಮುಖ್ಯಸ್ಥ

Advertisement

ಕೇಂದ್ರ ಸಚಿವರೊಬ್ಬರು ಉಡುಪಿಯಲ್ಲಿ ರಾಷ್ಟ್ರೀಯತೆ ಹಾಗೂ ಹಿಂದುತ್ವ ಒಂದೇ ಎಂದು ಹೇಳಿಕೆ ನೀಡಿದ್ದಾರೆ. ಈ ತರಹದ ಶಕ್ತಿಗಳು ಆಳುವ ಹಾಗೂ ತುಳಿಯುವ ಧೋರಣೆ ಹೊಂದಿದ್ದು, ಇವುಗಳನ್ನು ಬೆಳೆಯಲು ಬಿಡಬಾರದು.
 -  ಪ್ರಕಾಶ ರೈ, ಬಹುಭಾಷಾ ನಟ

Advertisement

Udayavani is now on Telegram. Click here to join our channel and stay updated with the latest news.

Next