Advertisement

ಸ್ತ್ರೀ ಬೆಂಬಲವಿಲ್ಲದೆ ದೇಶದ ಪ್ರಗತಿ ಅಸಾಧ್ಯ

06:00 AM Sep 30, 2018 | Team Udayavani |

ಜೈಪುರ: ಮಹಿಳೆಯರ ಬೆಂಬಲವಿಲ್ಲದೇ ದೇಶ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.
ಶನಿವಾರ ರಾಜಸ್ಥಾನದ ಜೈಪುರದಲ್ಲಿನ ಇಂದಿರಾಗಾಂಧಿ ಪಂಚಾಯತಿ ರಾಜ್‌ ಸಂಸ್ಥಾ ನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಮ್ಮಿಯಿಲ್ಲ. ಅವರ ಬೆಂಬಲವಿಲ್ಲದೇ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಜನರು ತಮ್ಮ ಮನಸ್ಥಿತಿಗಳನ್ನು ಬದಲಾಯಿಸಿಕೊಂಡು, ಹೆಣ್ಣುಮಕ್ಕಳನ್ನು ಆಳುಗಳೆಂದು ಭಾವಿಸುವ ಬದಲು ಅವರನ್ನು ದೇವತೆಗಳೆಂದು ಪೂಜಿಸಬೇಕು ಎಂದು ಹೇಳಿದ್ದಾರೆ.

Advertisement

ಮಹಿಳೆಯರು ಕೌಟುಂಬಿಕ ವ್ಯವಹಾರಗಳನ್ನು ನಿಭಾಯಿಸುವುದರ ಜೊತೆಗೆ, ಪ್ರಮುಖ ಕ್ಷೇತ್ರಗಳಲ್ಲೂ ನಾಯಕರಾಗಿ ಹೊರಹೊ ಮ್ಮುತ್ತಿ ದ್ದಾರೆ. ಇದೊಂದು ಧನಾತ್ಮಕ ಬೆಳವಣಿಗೆ ಎಂದೂ ಭಾಗವತ್‌ ಹೇಳಿದ್ದಾರೆ. ಜತೆಗೆ, ಮಹಿಳೆಯರ ಸುರಕ್ಷತೆಗಾಗಿ ಕಠಿಣ ಕಾನೂನು ತರುವ ಅಗತ್ಯವಿದೆ. ಆದರೆ, ಕಾನೂನಿಗೆ ಅದರದೇ ಆದ ಮಿತಿಗಳಿರುವ ಕಾರಣ, ಜನರೇ ಸಾಮಾಜಿಕ ಜಾಗೃತಿಯನ್ನು ಮೂಡಿಸಿ, ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಬೇಕು ಎಂದೂ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next