ಗದಗ: ಭಾರತ ಬಹುತ್ವದ ರಾಷ್ಟ್ರ. ನಮ್ಮ ದೇಶದವು ಕೇವಲ ಹಿಂದೂಗಳ ರಾಷ್ಟ್ರ ಅಲ್ಲ, ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧರು, ಜೈನರು ಇದ್ದಾರೆ. ನಮ್ಮ ದೇಶ ಬಹುತ್ವದ ದೇಶ. ದೇಶವನ್ನು ಬರೀ ಹಿಂದೂ ರಾಷ್ಟ್ರ ಮಾಡಲು ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶ್ರೀರಾಮ ಮಂದಿರ ಉಳಿಬೇಕೆಂದರೆ ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕು ಎಂಬ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಬಿಜೆಪಿನವರ ಘೋಷಣೆ ಮತ್ತು ಸಿದ್ದಾಂತವಾಗಿದೆ ಎಂದರು.
ಶಕ್ತಿ ಯೋಜನೆಯಿಂದ ಬಸ್ ರೆಶ್ ಆಗುತ್ತಿದ್ದು, ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ತೊಂದರೆ ವಿಚಾರಕ್ಕೆ ಮಾತನಾಡಿ, ಬಿಜೆಪಿಗೆ ಸುಳ್ಳು ಹೇಳುವುದೇ ಕೆಲಸ. ಬಿಜೆಪಿ ಸಂಘ ಪರಿವಾರ ಎಬಿವಿಪಿ, ಆರ್.ಎಸ್.ಎಸ್ ಇವೆಲ್ಲಾ ಸುಳ್ಳಿನ ಕಾರ್ಖಾನೆ ಎಂದು ಟೀಕಿಸಿದರು.
ದೇಶದಲ್ಲಿ ಕೊರೋನಾ ಹೊಸ ತಳಿ ಆರಂಭವಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಭೆ ನಡೆಸಲು ಸೂಚಿಸಿದ್ದೆನೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದೆನೆ ಎಂದರು.
ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣದ ಯಾವುದೇ ತನಿಖೆ ವಹಿಸಲು ಸಿದ್ದನಿದ್ದೇನೆ. ನಮ್ಮ ರಾಜ್ಯದ ಪೊಲೀಸರು ಶಕ್ತರಿದ್ದಾರೆ. ತನಿಖೆ ಮಾಡಿ ಸಾಕ್ಷಾಧಾರಗಳ ಮಾಹಿತಿ ಸಂಗ್ರಹಿಸಿ ಶಿಕ್ಷೆ ಕೊಡಿಸುವಲ್ಲಿ ನಮ್ಮ ರಾಜ್ಯದ ಪೊಲೀಸರು ಸಶಕ್ತರಿದ್ದಾರೆ ಎಂದರು.
ರಾಜ್ಯದ ಅತಿಥಿ ಉಪನ್ಯಾಸಕರ ಬೇಡಿಕೆಗಳ ವಿಚಾರಕ್ಕೆ ಮಾತನಾಡಿದ ಅವರು, ಒಂದು ಸೂತ್ರ ಕಂಡು ಹಿಡಿಯುತ್ತಿದ್ದಾರೆ. ಸಭೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ತ್ವರಿತವಾಗಿ ವರದಿ ಸಲ್ಲಿಸಲು ಸೂಚಿಸಿದ್ದೆನೆ. ಭ್ರಷ್ಟಾಚಾರ ಸಹಿಸಲ್ಲ ಎಂದಿದ್ದೆವು. ಬಿಜೆಪಿ 40% ಬಗ್ಗೆ ತನಿಖೆಗೆ ಒಳಪಡಿಸಲಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೆವೆ. ಯಾವುದೇ ಭ್ರಷ್ಟಾಚಾರ ಪ್ರಕರಣಗಳೀದ್ದರೂ ನಾವು ಅದನ್ನು ನೋಡುತ್ತಾ ಕುಳಿತುಕೊಳ್ಳುವದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.