Advertisement

ಟಿ ಬಿ ಇದ್ದ ರಾಷ್ಟ್ರಗಳಲ್ಲಿ ಕೋವಿಡ್‌-19 ಅಪಾಯ ಹೆಚ್ಚು?

06:43 PM Apr 10, 2020 | mahesh |

ಮಣಿಪಾಲ: ಕೋವಿಡ್‌ 19 ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದ್ದು, ಸಾವಿರಾರು ಮಂದಿ ಬಲಿಯಾಗಿದ್ದಾರೆ. ಇತ್ತೀ ಚಿನ ಅಧ್ಯಯನದ ಪ್ರಕಾರ ಟಿಬಿ ಹೆಚ್ಚಿರುವ ರಾಷ್ಟ್ರಗಳಲ್ಲಿ ಕೋವಿಡ್‌-19 ಅಪಾಯ ತುಸು ಹೆಚ್ಚೇ ಇದೆ.

Advertisement

ಟಿಬಿ ರೋಗವನ್ನು- ದೀರ್ಘ‌ ಕಾಲದ ಉಸಿರಾಟದ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಉಸಿರಾಟದ ಶ್ವಾಸಕೋಶದ ಸಾಮರ್ಥಯವನ್ನು ಕಡಿಮೆ ಮಾಡುತ್ತದೆ. ಈ ಕಾರಣಕ್ಕೆ ರೋಗಿಯು ಕೋವಿಡ್‌-19 ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಬಹಳಷ್ಟು ರಾಷ್ಟ್ರಗಳಲ್ಲಿ ಇದೇ ಘಟನೆಗಳು ನಡೆಯುತ್ತಿವೆ. ಉಸಿರಾಟದ ಸಮಸ್ಯೆಗಳಿರುವವರ ಮೇಲೆ ಹಾಗೂ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.

ಹ್ಯೂಮನ್‌ ಇಮ್ಯುನೊ ಡಿಫಿಷಿಯನ್ಸಿ ವೈರಸ್‌ (ಸಾಮಾನ್ಯವಾಗಿ ಎಚ್‌ಐವಿ ಎಂದು ಕರೆಯಲಾಗುತ್ತದೆ) ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ರೋಗಿಗಳು ಹೆಚ್ಚಾಗಿ ಕಂಡುಬರುತ್ತಿದ್ದಾರೆ. ಎಚ್‌ಐವಿ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡುವ ಮತ್ತು ಸರಿಯಾದ ರೋಗ ನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸುವ ಬದಲು ದೇಹದ ಸಾಮರ್ಥಯವನ್ನು ಕುಂದಿಸುತ್ತದೆ.

ಟಿಬಿ ಯಂತೆ ಈ ಮೇಲಿನ ಕಾಯಿಲೆಗಳು ರೋಗಿಯ ದೇಹದಲ್ಲಿ ತೀವ್ರವಾದ ಸೋಂಕನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು. ಟಿಬಿ ಮತ್ತು ಏಡ್ಸ್‌ (ಎಚ್‌ಐವಿ) ಯಿಂದ ಉಂಟಾ ಗುವ ರೋಗಗಳು ರೋಗಿಗಳ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು ಇದಕ್ಕೆ ಕಾರಣ ಎಂಬುದು ತಜ್ಞರ ಅಭಿಪ್ರಾಯ. ಈ ದೇಶಗಳು ಕಡಿಮೆ ಸಂಪನ್ಮೂಲ ಹೊಂದಿರುವ ಆರೋಗ್ಯ ವ್ಯವಸ್ಥೆ ಗಳಿಂದಾಗಿ ಏಡ್ಸ್‌ ಮತ್ತು ಟಿಬಿ ರೋಗಿಗಳು ಹೆಚ್ಚು ಇದ್ದಾರೆ.

ಅಪಾಯ ಏನು?
ಸಾಮಾನ್ಯವಾಗಿ ಈ ಏಡ್ಸ್‌ ಮತ್ತು ಟಿಬಿ ರೋಗಗಳು ಹೆಚ್ಚಾಗಿ ಕಂಡು ಬರುವ ಸ್ಥಳಗಳಲ್ಲಿ ಜನರು ರೋಗವನ್ನು ಪರೀಕ್ಷಿಸಲು ಮುಂದಾಗುವುದಿಲ್ಲ. ಸ್ವಂತ ಆರೋಗ್ಯದ ಬಗ್ಗೆ ಈ ಜ್ಞಾನದ ಕೊರತೆಯು ರೋಗವನ್ನು ಹರಡಲು ಕಾರಣವಾಗುತ್ತದೆ. ಅವರು ಪರೀಕ್ಷಿಸಿದರೆ ತಮ್ಮ ತಪ್ಪುಗಳು ಅಥವ ಎಚ್‌ಐವಿ ಪಾಸಿಟಿವ್‌ ಎಂದು ಬಂದರೆ ಎಂಬ ಭಯವೂ ಇದಕ್ಕೆ ಕಾರಣ.

Advertisement

ಟಿಬಿ ಅಥವಾ ಎಚ್‌ಐವಿ ಪೀಡಿತ ಜನರು ಕೋವಿಡ್‌ -19 ಅನ್ನು ಹೊಂದಿದ್ದರೆ ಅವರೂ ಕೆಮ್ಮು, ಸೀನು ವಿಕೆ ಮತ್ತು ಜ್ವರದಂತಹ ರೋಗಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಇದೆ. ಹೆಚ್ಚಾಗಿ ಉಸಿರಾಟದ ತೊಂದರೆ ಕಾಣಿಸಿ ಕೊಳ್ಳುತ್ತದೆ.  ಟಿಬಿ ಅಥವಾ ಎಚ್‌ಐವಿ-ಪಾಸಿಟಿವ್‌ ರೋಗಿಯು ರೋಗಲಕ್ಷಣಗಳನ್ನು ಹೊಂದಿದ್ದರೆ ಅಥವಾ ಕೋವಿಡ್‌-19 ಧನಾತ್ಮಕ ಪರೀಕ್ಷೆ ಮಾಡಿದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದರೆ, ಅವರು ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು. ಇತರರಿಗೆ ಸೋಂಕು ತಗಲುವ ಸಾಧ್ಯತೆಯನ್ನು ಕಡಿಮೆ ಮಾಡಲು ಫೇಸ್‌ ಮಾಸ್ಕ್ ಬಳಸಬೇಕು ಎಂದು ವಿಶ್ವಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next