Advertisement

ಹಳೇ ನೋಟುಗಳ ಎಣಿಕೆ ಮುಗಿದಿಲ್ಲ: ಆರ್‌ಬಿಐ

10:05 AM Feb 12, 2018 | Team Udayavani |

ಹೊಸದಿಲ್ಲಿ: ನೋಟು ಅಪಮೌಲ್ಯಗೊಂಡು 15 ತಿಂಗಳು ಪೂರ್ತಿಯಾದರೂ, ಹಳೆಯ 500 ರೂ.,1 ಸಾವಿರ ರೂ.ಗಳ ಎಷ್ಟು ನೋಟುಗಳು ಬಂದಿವೆ ಎಂಬುದರ ಬಗ್ಗೆ ಆರ್‌ಬಿಐಗೆ ಖಚಿತ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದ ಸುದ್ದಿ ಸಂಸ್ಥೆ ಪಿಟಿಐಗೆ “ಅದನ್ನು ಎಣಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂಬ ಉತ್ತರವಷ್ಟೇ ಸಿಕ್ಕಿದೆ. 

Advertisement

“ಕೆಲವೊಂದು ಬ್ಯಾಂಕ್‌ ನೋಟುಗಳ ಸರಣಿ ಸಂಖ್ಯೆ ಮತ್ತು ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ. ಅದನ್ನು ಪೂರ್ತಿಗೊಳಿಸಿದ ಬಳಿಕ ಮಾಹಿತಿ ನೀಡಲಾಗುತ್ತದೆ’ ಎಂದು ಆರ್‌ಬಿಐ ಹೇಳಿದೆ. ಇನ್ನು ಅಮಾನ್ಯಗೊಂಡ ನೋಟುಗಳ ಸಂಖ್ಯೆ ಬಗ್ಗೆ ಕೇಳಲಾದ ಪ್ರಶ್ನೆಗೆ “2017 ಜೂ.30ಕ್ಕೆ ಕೊನೆಗೊಂಡಂತೆ 15.28 ಲಕ್ಷ ಕೋಟಿ ನೋಟುಗಳು ಬಂದಿವೆ. ಮುಂದಿನ ದಿನಗಳಲ್ಲಿ ಅದು ಬದಲಾಗಬಹುದು’ ಎಂದು ಮಾಹಿತಿ ನೀಡಿದೆ ಆರ್‌ಬಿಐ.

ಕಾನ್ಪುರ ಎಟಿಎಂನಲ್ಲಿ 500 ರೂ.ನಕಲಿ ನೋಟು: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆ್ಯಕ್ಸಿಸ್‌ ಬ್ಯಾಂಕ್‌ನ ಎಟಿಎಂನಲ್ಲಿ ಹಣ ವಿಥ್‌ಡ್ರಾ ಮಾಡಲು ಹೋಗಿದ್ದ ವ್ಯಕ್ತಿಗೆ 500 ರೂ.ಗಳ 2 ನಕಲಿ ನೋಟುಗಳು ಸಿಕ್ಕಿವೆ. ಅದರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಎನ್ನುವುದರ ಬದಲಿಗೆ “ಚಿಲ್ಡ್ರನ್ಸ್‌ ಬ್ಯಾಂಕ್‌ ಆಫ್ ಇಂಡಿಯಾ’ ಎಂದು ಮುದ್ರಿಸಲಾಗಿತ್ತು. ಕಾನ್ಪುರದ ಇತರ ಎಟಿಎಂಗಳಿಂದ 10 ಮತ್ತು 20 ಸಾವಿರ ರೂ.ಗಳನ್ನು ವಿಥ್‌ಡ್ರಾ ಮಾಡಿದವರಿಗೂ ನಕಲಿ ನೋಟುಗಳು ಸಿಕ್ಕಿವೆ. 

Advertisement

Udayavani is now on Telegram. Click here to join our channel and stay updated with the latest news.

Next