Advertisement

ಅಧಿಕಾರ ನಿರೀಕ್ಷೆಯಲ್ಲಿ  ರಾಜಪಕ್ಸೆ ;ಶ್ರೀಲಂಕಾದಲ್ಲಿ  ಚುರುಕುಗೊಂಡ ಮತ ಎಣಿಕೆ

04:49 PM Aug 06, 2020 | Nagendra Trasi |

ಕೊಲಂಬೊ: ಶ್ರೀಲಂಕಾದ ಸಂಸತ್‌ ಚುನಾವಣೆ ಮುಕ್ತಾಯವಾಗಿದ್ದು, ಜನಪ್ರಿಯ ರಾಜಪಕ್ಸೆ ಸಹೋದರರಿಗೆ ಅಧಿಕಾರ ಸಿಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

Advertisement

ಈಸ್ಟರ್‌ ಭಾನುವಾರದಂದು ಚರ್ಚ್‌  ಮತ್ತು ಹೋಟೆಲ್‌ಗ‌ಳ ಮೇಲಿನ ಬಾಂಬ್‌ ಸ್ಫೋಟದ ಬಳಿಕ ದೇಶವನ್ನು ಭದ್ರಪಡಿಸುವ ಏಕೈಕ ನಾಯಕ ಎಂದು ತಮ್ಮನ್ನು ತಾವು ನಿರೂಪಿಸಿಕೊಂಡ ಗೋಟಬಯಾ ರಾಜಪಕ್ಸೆ ಕಳೆದ ನವೆಂಬರ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ಅಣ್ಣ, ವರ್ಚಸ್ವಿ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಪ್ರಧಾನಮಂತ್ರಿಯಾಗಿ ಮರಳಲು ಸಂಸತ್ತಿನ ಬಹುಮತವನ್ನು ಕೋರಿದ್ದಾರೆ.

ಸಂಸತ್ತಿನ ಚುನಾವಣೆಯಲ್ಲಿ ಕುಟುಂಬದ ಕನಿಷ್ಠ ನಾಲ್ಕು ಸದಸ್ಯರು ಸ್ಪರ್ಧಿಸಿದಾ ಬುಧವಾರ ಸಂಜೆ 5 ಗಂಟೆಗೆ ಕೊನೆಗೊಂಡ ಮತದಾನವು ಬಹುಮಟ್ಟಿಗೆ ಶಾಂತಿಯುತವಾಗಿತ್ತು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 64 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಾರಂಭವಾಗಿದ್ದು, ಅಂತಿಮ ಫಲಿತಾಂಶಗಳನ್ನು ಶುಕ್ರವಾರ ನಿರೀಕ್ಷಿಸಲಾಗಿದೆ.196 ಶಾಸಕರನ್ನು ಆಯ್ಕೆ ಮಾಡಲು 1.60 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದರು, ಉಳಿದವರನ್ನು ಪ್ರತಿ ಪಕ್ಷಗಳು ಅಥವಾ ಸ್ವತಂತ್ರ ಗುಂಪುಗಳು ಪಡೆದ ಮತಗಳ ಸಂಖ್ಯೆಗೆ ಅನುಗುಣವಾಗಿ ರಾಷ್ಟ್ರೀಯ ಪಟ್ಟಿಯಿಂದ ಹೆಸರಿಸಲಾಗಿದೆ. ಲಂಕಾ ಸಂಸತ್‌ನ ಒಟ್ಟು ಬಲ 225 ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next