Advertisement
ಇನ್ನು “ವಿಕ್ರಾಂತ್ ರೋಣ’ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹೀಗೆ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ತೆರೆ ಕಾಣುತ್ತಿದೆ. ಹಾಗಾದ್ರೆ, “ವಿಕ್ರಾಂತ್ ರೋಣ’ ಎಷ್ಟು ಸ್ಕ್ರೀನ್‌ಗಳಲ್ಲಿ ತೆರೆ ಕಾಣುತ್ತಿದೆ, ಬಿಡುಗಡೆ ತಯಾರಿ ಹೇಗಿದೆ ಎಂಬ ಬಗ್ಗೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.
Related Articles
Advertisement
ಮಾಹಿತಿ. “ಈಗಾಗಲೇ ಸುಮಾರು 4 ಸಾವಿರ ಸ್ಕ್ರೀನ್ಸ್ ನಲ್ಲಿ “ವಿಕ್ರಾಂತ್ ರೋಣ’ ಬಿಡುಗಡೆ ಖಚಿತವಾಗಿದ್ದು, ಅನೇಕ ಕಡೆಗಳಿಂದ ವಿತರಕರು ಮತ್ತು ಪ್ರದರ್ಶಕರಿಂದ ಸಿನಿಮಾಕ್ಕೆ ಸಾಕಷ್ಟು ಬೇಡಿಕೆ ಬರುತ್ತಿದೆ. ಸಿನಿಮಾದ ರಿಲೀಸ್‌ಗೆ ಇನ್ನೂ ಎರಡು-ಮೂರು ದಿನಗಳು ಬಾಕಿಯಿರುವುದರಿಂದ, ಸ್ಕ್ರೀನ್ಸ್ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ’ ಎನ್ನುತ್ತಾರೆ ನಿರ್ಮಾಪಕ ಜಾಕ್ ಮಂಜುನಾಥ್.
ಇದನ್ನೂ ಓದಿ:ಬಾಲಿವುಡ್ ಜೋಡಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್‌ಗೆ ಜೀವ ಬೆದರಿಕೆ: ಪ್ರಕರಣ ದಾಖಲು
ಚಿತ್ರರಂಗದ ಮೂಲಗಳ ಪ್ರಕಾರ ಕರ್ನಾಟಕದಲ್ಲಿಯೇ “ವಿಕ್ರಾಂತ್ ರೋಣ’ ಬರೋಬ್ಬರಿ 450ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಯಾಗಲಿದೆ. ಉಳಿದಂತೆ ಆಂಧ್ರ-ತೆಲಂಗಾಣದಲ್ಲಿ 500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡರೆ, ತಮಿಳುನಾಡಿನಲ್ಲಿ 300ಕ್ಕೂ ಸ್ಕ್ರೀನ್ಸ್ ಮತ್ತು ಕೇರಳದಲ್ಲಿ ಸುಮಾರು 200ಕ್ಕೂ ಹೆಚ್ಚು ಸ್ಕ್ರೀನ್ಸ್ ನಲ್ಲಿ “ವಿಕ್ರಾಂತ್ ರೋಣ’ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇನ್ನು ಹಿಂದಿಯಲ್ಲಿ 1500ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ “ವಿಕ್ರಾಂತ್ ರೋಣ’ ಅಬ್ಬರಿಸುವ ಸಾಧ್ಯತೆಯಿದೆ. ಬಾಲಿವುಡ್‌ನಲ್ಲಿ ಇತ್ತೀಚೆಗೆ ತೆರೆಕಂಡ “ಶಂಶೇರಾ’ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡದ ಕಾರಣ, ಮತ್ತಷ್ಟು ಸ್ಕ್ರೀನ್‌ಗಳು “ವಿಕ್ರಾಂತ್ ರೋಣ’ನ ಪಾಲಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ