Advertisement

ತೋಟಗಾರಿಕೆ ಮೇಳಕ್ಕೆ ಕ್ಷಣಗಣನೆ

12:36 AM Feb 05, 2020 | Lakshmi GovindaRaj |

ಬೆಂಗಳೂರು: ದೇಶದ ಅತಿದೊಡ್ಡ ತೋಟಗಾರಿಕಾ ಮೇಳಕ್ಕೆ ಈಗ ಕ್ಷಣಗಣನೆ. ಇಲ್ಲಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಬುಧವಾರದಿಂದ ನಡೆಯಲಿರುವ ನಾಲ್ಕು ದಿನಗಳ ನಾಲ್ಕನೇ ರಾಷ್ಟ್ರೀಯ ತೋಟಗಾರಿಕೆ ಕೃಷಿ ಮೇಳಕ್ಕೆ ಸಕಲ ರೀತಿ ಸಜ್ಜಾಗಿದೆ.

Advertisement

ಸಿಪ್ಪೆ ಸಹಿತ ತಿನ್ನುವ ಬಟಾಣಿ, ಕೆಜಿಗಟ್ಟಲೆ ತೂಗುವ ಸೀತಾಫ‌ಲ-ಸೀಬೆ, ಹೂವಿನೊಂದಿಗೆ ಸಸಿಗಳನ್ನೂ ನೀಡುವ ಹೂವುಗಳು, ನೆರೆ ಮತ್ತು ಬರ ಎರಡನ್ನೂ ಸಹಿಸಿಕೊಳ್ಳುವ ಸಾಮರ್ಥ್ಯವುಳ್ಳ ತರಕಾರಿ ತಳಿಗಳು ಇಂತಹ ಹತ್ತುಹಲವು ಕೌತುಕಗಳ ಕೇಂದ್ರಬಿಂದು ತೋಟಗಾರಿಕೆ ಮೇಳ ಆಗಿದೆ.

ದೇಶದ ಮೂಲೆ ಮೂಲೆಗಳಿಂದ ಸಾವಿರಾರು ರೈತರು, ವಿಜ್ಞಾನಿಗಳು, ತಂತ್ರಜ್ಞರು ಈ ಮೇಳಕ್ಕೆ ಸಾಕ್ಷಿಯಾಗಲಿದ್ದಾರೆ. 80ಕ್ಕೂ ಅಧಿಕ ತರಕಾರಿಗಳು, 25 ಹಣ್ಣುಗಳು, 30 ಹೂವಿನ ಬೆಳೆಗಳು ಸೇರಿದಂತೆ 150ಕ್ಕೂ ಅಧಿಕ ಪ್ರಾತ್ಯಕ್ಷಿಕೆಗಳು, 250ಕ್ಕೂ ಅಧಿಕ ಮಳಿಗೆಗಳು, ವಿಶೇಷ ವಿನ್ಯಾಸದ ಕೆರೆ-ಹೊಂಡಗಳು, ಸಮಗ್ರ ಕೃಷಿ ಪದ್ಧತಿ, ತೋಟಗಾರಿಕೆ ತಂತ್ರಜ್ಞಾನಗಳು ಸೇರಿದಂತೆ ತೋಟ ಗಾರಿಕೆ ಲೋಕವೇ ಅನಾವರಣಗೊಳ್ಳಲಿದೆ.

ಕೇಂದ್ರದ ಮಹತ್ವಾಕಾಂಕ್ಷಿ ರೈತರ ಆದಾಯ ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ಅಗ್ಗದ ಬೆಲೆಯಲ್ಲಿ ಹೈಟೆಕ್‌ ಬೇಸಾಯ ತಂತ್ರಜ್ಞಾನಗಳನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐ ಎಚ್‌ಆರ್‌) ಈ ಮೇಳದಲ್ಲಿ ಪರಿಚಯಿಸಲಾಗುತ್ತಿದೆ. ಕಳೆದ ಬಾರಿ 55 ಬೆಳೆಗಳ 289 ತಳಿಗಳನ್ನು ಪ್ರದರ್ಶಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈ ಪಟ್ಟಿಗೆ ಇನ್ನೂ 15-20 ತಳಿಗಳು ಸೇರ್ಪಡೆಯಾಗಿವೆ.

ಈ ಬಾರಿಯ ಮೇಳದ ಶೀರ್ಷಿಕೆ “ಕೃಷಿಯನ್ನು ಉದ್ದಿಮೆಯ ನ್ನಾಗಿಸಲು ತೋಟಗಾರಿಕೆ’ ಆಗಿದೆ. ಇದಕ್ಕೆ ಪೂರಕವಾಗಿ ಕೃಷಿ ಯನ್ನು ಉದ್ಯಮವನ್ನಾಗಿ ಮಾಡಿ ಕೊಂಡ 425ಕ್ಕೂ ಅಧಿಕ ಕಂಪನಿಗಳು ಐಐಎಚ್‌ಆರ್‌ನಿಂದಲೇ 850ಕ್ಕೂ ಅಧಿಕ ತಂತ್ರಜ್ಞಾನ ಗಳಿಗೆ ಪರವಾನಗಿ ಪಡೆದಿವೆ. ಅವುಗಳ ಉತ್ಪನ್ನಗಳ ಪ್ರದರ್ಶನವೂ ಇಲ್ಲಿ ಇರಲಿದೆ.

Advertisement

ಕೇವಲ ಎಂಟು ತಂತ್ರಜ್ಞಾನಗಳು ಕೇಂದ್ರ ಸರ್ಕಾರಕ್ಕೆ ವಾರ್ಷಿಕ ಸುಮಾರು 13 ಸಾವಿರ ಕೋಟಿ ರೂ. ಆದಾಯ ತಂದುಕೊಡುತ್ತಿವೆ. ಒಂದಲ್ಲಾ ಎರಡಲ್ಲ ಕಳೆದ ಐದು ವರ್ಷಗಳಿಂದ ಈ ಆದಾಯ ಸತತವಾಗಿ ಹರಿದುಬರುತ್ತಿದೆ. ಸಂಸ್ಥೆ ಅಭಿವೃದ್ಧಿಪಡಿ ಸಿದ ಅವುಗಳ ಪ್ರದರ್ಶನವನ್ನೂ ಇಲ್ಲಿ ಕಾಣ ಬಹುದು. 25ಕ್ಕೂ ಹೆಚ್ಚು ರಾಜ್ಯಗಳಿಂದ 50 ಸಾವಿರಕ್ಕೂ ಅಧಿಕ ರೈತರು ಭೇಟಿ ನೀಡುವ ನಿರೀಕ್ಷೆ ಇದೆ.

ಪ್ರವೇಶ ಉಚಿತ: ಯಶವಂತಪುರ, 8ನೇ ಮೈಲಿ, ಜಾಲಹಳ್ಳಿ ಕ್ರಾಸ್‌ ಮತ್ತಿತರ ಕಡೆಯಿಂದ ಹೆಸರಘಟ್ಟಕ್ಕೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ ಸೇವೆ

ಮೇಳದ ಸಮಯ: ಬೆಳಗ್ಗೆ 10ರಿಂದ ಸಂಜೆ 6

ಪ್ರದರ್ಶನದ ಆಕರ್ಷಣೆ
-ಬಿತ್ತನೆ ಬೀಜಗಳು ಮತ್ತು ನರ್ಸರಿ ಗಿಡಗಳು
-ರಸಗೊಬ್ಬರ/ ಸಸ್ಯ ಔಷಧಿಗಳು
-ತೋಟಗಾರಿಕೆ ಉಪಕರಣಗಳು
-ಹಸಿರುಮನೆ, ನೆರಳು ಮನೆ ಒಳಗೊಂಡ ನಿಖರ ಕೃಷಿ ವಿಧಾನಗಳು
-ನಗರ ತೋಟಗಾರಿಕೆ ಕಾರ್ಯಾಗಾರ

Advertisement

Udayavani is now on Telegram. Click here to join our channel and stay updated with the latest news.

Next