Advertisement

ಲಿಂಗನಮಕ್ಕಿ ಭರ್ತಿಗೆ ಕ್ಷಣಗಣನೆ

03:33 PM Sep 04, 2019 | Team Udayavani |

ಹೊನ್ನಾವರ: ತಾಲೂಕಿನ ಹಡಿನಬಾಳ, ಗುಂಡಬಾಳ ಹೊಳೆ ತುಂಬಿ ಹರಿಯುತ್ತಿದ್ದು ಮಳೆಗಾಲದ ಆರಂಭದಲ್ಲಿ ಕಾಣುತ್ತಿರುವ ಕೆಂಪು ನೀರು ಇನ್ನೂ ಭೀಕರವಾಗಿ ಕಾಣುತ್ತಿದ್ದು ಗುಡ್ಡದ ಮಣ್ಣನ್ನು ಕಿತ್ತು ತರುತ್ತಿದೆ. ಲಿಂಗನಮಕ್ಕಿ ಅಣೆಕಟ್ಟು ಭರ್ತಿಯ ಹಂತ ತಲುಪಿದ್ದು, ನೀರು ಬಿಡಲು ಕ್ಷಣಗಣನೆ ಆರಂಭವಾಗಿದೆ.

Advertisement

ಮುಂಜಾನೆ 8ಕ್ಕೆ ಲಿಂಗನಮಕ್ಕಿ ಜಲಮಟ್ಟ 1817.80ಕ್ಕೆ ತಲುಪಿದೆ. ಜಲಾನಯನ ಪ್ರದೇಶದಲ್ಲಿ ಹದವಾದ ಮಳೆ ಬೀಳುತ್ತಿರುವುದರಿಂದ 1818 ತಲುಪಿದ ಕೂಡಲೇ ಸ್ವಲ್ಪಸ್ವಲ್ಪ ನೀರು ಬಿಡುವ ಸಿದ್ಧತೆಯಲ್ಲಿ ಕೆಪಿಸಿ ಇದೆ. ಮಳೆ ಜೋರಾದರೆ ಹೆಚ್ಚು ನೀರು ಬಿಟ್ಟರೆ ಸಮಸ್ಯೆ ಆಗುವುದರಿಂದ ಗರಿಷ್ಠಮಟ್ಟಕ್ಕೆ ಒಂದು ಅಡಿ ಮೊದಲು ಸ್ವಲ್ಪ ನೀರು ಬಿಡುವ ಸಂಭವವಿದೆ. 10-20 ಸಾವಿರ ಕ್ಯೂಸೆಕ್ಸ್‌ ನೀರು ಬಿಟ್ಟರೆ ಅದು ಅರಿವಿಗೆ ಬರದೆ ಹರಿದು ಹೋಗಲಿದೆ. ಹೆಚ್ಚು ನೀರು ಬಿಟ್ಟು ಸಮಸ್ಯೆ ಮಾಡುವ ತೊಂದರೆಯನ್ನು ಕೆಪಿಸಿ ಖಂಡಿತ ತೆಗೆದುಕೊಳ್ಳಲಿಕ್ಕಿಲ್ಲ. ಹಿಂದಿನ ಅನುಭವದಿಂದ ಅದು ಪಾಠ ಕಲಿತಿದೆ. ಇಂದು ಮುಂಜಾನೆ ಒಳಹರಿವು 18,000 ಕ್ಯೂಸೆಕ್‌ ಇದೆ, ಹೊರಹರಿವು ಇಲ್ಲ. ಇತ್ತ ಗೇರುಸೊಪ್ಪ ಅಣೆಕಟ್ಟು ವಿದ್ಯುತ್‌ ಉತ್ಪಾದನೆ ಮುಂದುವರಿಸಿದ್ದು ಲಿಂಗನಮಕ್ಕಿ ನೀರನ್ನು ಸ್ವೀಕರಿಸಲು ಸಿದ್ಧವಾಗಿದ್ದು ಇದು ಸಮತೋಲನ ಅಣೆಕಟ್ಟು ಆಗಿರುವುದರಿಂದ 55 ಮೀಟರ್‌ ಎತ್ತರ ದಾಟುವ ಮೊದಲು ನೀರು ಬಿಡಬೇಕಾಗುತ್ತದೆ. ರವಿವಾರ, ಸೋಮವಾರ ಚೌತಿಯ ರಜೆ ಮರೆತು ಕೆಪಿಸಿ ಮತ್ತು ತಾಲೂಕು ಆಡಳಿತ ನೇಮಿಸಿದ ನೋಡಲ್ ಅಧಿಕಾರಿಗಳು ನೆರೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next