Advertisement

Hanuman Jayanti ಮೆರವಣಿಗೆಗೆ ಕ್ಷಣಗಣನೆ; ಕೇಸರಿಮಯವಾದ ಹುಣಸೂರು ನಗರ

08:15 PM Dec 25, 2023 | Team Udayavani |

ಹುಣಸೂರು: ಹನುಮಜಯಂತಿ ಅಂಗವಾಗಿ ಬೃಹತ್‌ ಆಂಜನೇಯಸ್ವಾಮಿಯ ಉತ್ಸವ ಮೂರ್ತಿ ಹಾಗೂ ಹನುಮ ಗಧೆಯನ್ನು ಮುನೇಶ್ವರಕಾವಲ್‌ ಮೈದಾನದಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿದರು.

Advertisement

ಅಂಜನಾದ್ರಿ ಟ್ರಸ್ಟ್‌ನ ಗೌರವಾಧ್ಯಕ್ಷ ಯೋಗಾನಂದಕುಮಾರ್‌, ಅಧ್ಯಕ್ಷ ವಿ.ಎನ್‌.ದಾಸ್‌, ಹಿಂದೂ ಜಾಗರಣ ವೇದಿಕೆಯ ಚಂದ್ರಮೌಳಿ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅನಿಲ್‌, ತಾಲೂಕು ಅಧ್ಯಕ್ಷ ಗಿರೀಶ್‌ ಸೇರಿದಂತೆ ನೂರಾರು ಭಕ್ತರು ಇದ್ದರು.

ಡಿ.26 ಹನುಮ ಜಯಂತಿ:
ಹನುಮ ಜಯಂತಿ ಅಂಗವಾಗಿ ಡಿ.26ರ ಮಂಗಳವಾರ ಬೆಳಗ್ಗೆ 11ಕ್ಕೆ ನಗರದ ರಂಗನಾಥ ಬಡಾವಣೆಯಿಂದ ವಿವಿಧ ಕಲಾ ತಂಡಗಳ ಕಲರವಗಳ ನಡುವೆ ಭವ್ಯ ಮೆರವಣಿಗೆಗೆ ಸಾಂಬ ಸದಾಶಿವ ಸ್ವಾಮೀಜಿ, ನಟರಾಜ ಸ್ವಾಮೀಜಿ ಹಾಗೂ ಶಾಸಕ ಜಿ.ಡಿ.ಹರೀಶ್‌ಗೌಡ, ಸಂಸದ ಪ್ರತಾಪಸಿಂಹ, ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಚಾಲನೆ ನೀಡುವರು.

ಮೆರವಣಿಗೆಯಲ್ಲಿ ಮೂರು ಬೃಹತ್‌ ಆಂಜನೇಯಸ್ವಾಮಿ ವಿಗ್ರಹ, ಓಂ, ದತ್ತಾತ್ರೇಯ, ಶ್ರೀರಾಮಲಕ್ಷ್ಮಣ ವಿಗ್ರಹ, ಆಂಜನೇಯ ಗದೆ ಸೇರಿದಂತೆ ಒಟ್ಟು 12 ವಾಹನಗಳಲ್ಲಿ ವಿವಿಧ ದೇವರ ವಿಗ್ರಹಗಳು ಸಾಗಿಬರಲಿದೆ.

ನಗರದ ಕಲ್ಕುಣಿಕೆ, ಸೇತುವೆ, ಸಂವಿದಾನ ಸರ್ಕಲ್‌, ಬಸ್‌ ನಿಲ್ದಾಣದ ಮುಖ್ಯ ರಸ್ತೆ, ಕಲ್ಪತರು ವೃತ್ತ, ಅಕ್ಷಯ ಭಂಡಾರ್‌, ಬಜಾರ್‌ ರಸ್ತೆ, ಜೆ.ಎಲ್‌.ಬಿ.ರಸ್ತೆ, ಎಸ್‌.ಜೆ ರಸ್ತೆಗಳ ಮೂಲಕ ಹಾಯ್ದು ಸಂವಿಧಾನ ಸರ್ಕಲ್‌ ಹೋಗಲಿದೆ. ಸಂಜೆ ಆರರ ವೇಳೆಗೆ ಅಂತ್ಯಗೊಳ್ಳಲಿದೆ ಎಂದು ವಿ.ಎನ್‌.ದಾಸ್‌ ತಿಳಿಸಿದರು.

Advertisement

ಬಂಟಿಂಗ್ಸ್‌-ಫ್ಲೆಕ್ಸ್‌ ಭರಾಟೆ:
ನಗರದ ವಿವಿಧ ಪ್ರಮುಖರಸ್ತೆಗಳಲ್ಲಿ ಹನುಮಂತನ ಫ್ಲೆಕ್ಸ್‌, ಕೇಸರಿ ಬಂಟಿಂ ಗ್ಸ್‌ಗಳು ರಾರಾಜಿಸುತ್ತಿವೆ. ಇತ್ತ ಕಲ್ಪತರು ವೃತ್ತ, ಜೆಎಲ್‌ಬಿ ರಸ್ತೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳಲ್ಲಿ ಹನುಮಂತನ ಜುಬ್ಬಾ, ಕೇಸರಿ ರುಮಾಲು, ಕೇಸರಿ ಶಾಲು ಮಾರಾಟ ಭರ್ಜರಿಯಾಗಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next