Advertisement
2021-22ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಷ್ಟೇ ಆರಂಭವಾಗುತ್ತಿವೆ. ಕೋವಿಡ್ ಕಾರಣದಿಂದ ಕಳೆದ ಸಾಲಿನಲ್ಲಿ ಭೌತಿಕ ತರಗತಿ ಸರಿಯಾಗಿ ನಡೆದಿಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ನಾನಾ ರೀತಿಯ ಸಮಸ್ಯೆ ಒಳಗಾಗಿದ್ದಾರೆ. ಆದ್ದರಿಂದ ಕಾಲೇಜುಗಳಲ್ಲೇ ಕೌನ್ಸೆಲಿಂಗ್ ಮೂಲಕ ನೋವಿಗೆ ಪರಿಹಾರ ಕಂಡುಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆಯಿಂದಲೇ ವ್ಯವಸ್ಥೆ ಮಾಡಲಾಗುತ್ತಿದೆ.
ನಿರಂತರ ಆನ್‌ಲೈನ್ ತರಗತಿ, ಕೌಟುಂಬಿಕ ಸಮಸ್ಯೆ, ಸ್ನೇಹಿತರೊಂದಿಗೆ ಬೆರೆಯಲು ಸಾಧ್ಯ ವಾಗದೇ ಇರುವುದು ಸೇರಿದಂತೆ ಅನೇಕ ಕಾರಣದಿಂದ ಕಾಲೇಜು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿರುವ ಸಾಧ್ಯತೆಯಿದೆ.
Related Articles
Advertisement
ಅದರಲ್ಲೂ ಕೋವಿಡ್ ಭಯ ಹಾಗೂ ಮನೆಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿರುವ ವಿದ್ಯಾರ್ಥಿಗಳು ಅನೇಕರಿದ್ದಾರೆ. ಅಂಥವರನ್ನು ಗುರುತಿಸಿ, ಸೂಕ್ತ ರೀತಿಯ ಕೌನ್ಸೆಲಿಂಗ್ ನೀಡುವ ಅಗತ್ಯವಿದೆ.
ಎನ್‌ಇಪಿ ಸಲಹೆಯೂ ಸಿಗಲಿದೆಕೌನ್ಸೆಲಿಂಗ್ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶೈಕ್ಷಣಿಕವಾಗಿ ಆಗುವ ಅನುಕೂಲತೆಗಳ ಬಗ್ಗೆಯೂ ಸಮಗ್ರ ಮಾಹಿತಿ ನೀಡಲಿದ್ದಾರೆ. ಪದವಿ ಮುಗಿದ ಅನಂತರ ಏನು ಮಾಡಬಹುದು, ಸಂಶೋಧನೆ, ಉದ್ಯೋಗ ಇತ್ಯಾದಿ ಎಲ್ಲರ ವಿವರವೂ ಕೌನ್ಸೆಲಿಂಗ್ ವೇಳೆ ಸಿಗಲಿದೆ.