Advertisement

ಪರಿಷತ್‌ ಚುನಾವಣೆ: ಬಿಜೆಪಿ ಪಟ್ಟಿ ಬಿಡುಗಡೆ

11:35 PM Nov 19, 2021 | Team Udayavani |

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನಪರಿಷತ್‌ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ 20 ಅಭ್ಯ ರ್ಥಿಗಳ ಪಟ್ಟಿ ಪ್ರಕಟಗೊಂಡಿದ್ದು, ಹಾಲಿ ಆರು ಸದಸ್ಯರ ಪೈಕಿ ಐವರಿಗೆ ಟಿಕೆಟ್‌ ಲಭಿಸಿದೆ.

Advertisement

ಕೊಡಗು ಕ್ಷೇತ್ರದ ಹಾಲಿ ಸದಸ್ಯ ಸುನಿಲ್‌ ಸುಬ್ರಮಣಿ ಬದಲು ಸುಜಾ ಕುಶಾಲಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಶಿವಮೊಗ್ಗದಿಂದ ಮಾಜಿ ಸಭಾಪತಿ ಡಿ.ಎಚ್‌. ಶಂಕರ ಮೂರ್ತಿ ಅವರ ಪುತ್ರ ಡಿ.ಎಸ್‌. ಅರುಣ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸಹೋದರ ಪ್ರದೀಪ್‌ ಶೆಟ್ಟರ್‌ ಅವರಿಗೂ ಟಿಕೆಟ್‌ ನೀಡಲಾಗಿದೆ.

ಆದರೆ ಬೆಳಗಾವಿ ಕ್ಷೇತ್ರದಿಂದ ರಮೇಶ್‌ ಜಾರಕಿಹೊಳಿ ಸಹೋದರ ಲಖನ್‌ ಜಾರಕಿಹೊಳಿಗೆ ಟಿಕೆಟ್‌ ಸಿಕ್ಕಿಲ್ಲ. ಬೆಂಗ ಳೂರು ನಗರ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ನಂದೀಶ್‌ ರೆಡ್ಡಿಗೂ ಟಿಕೆಟ್‌ ಸಿಕ್ಕಿಲ್ಲ.

ಉಳಿದಂತೆ, ದಕ್ಷಿಣ ಕನ್ನಡ- ಕೋಟ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರು- ಎಂ.ಕೆ.ಪ್ರಾಣೇಶ್‌, ಶಿವಮೊಗ್ಗ- ಡಿ.ಎಸ್‌. ಅರುಣ್‌, ಧಾರವಾಡ- ಪ್ರದೀಪ್‌ ಶೆಟ್ಟರ್‌, ಬೆಳಗಾವಿ- ಮಹಾಂತೇಶ್‌ ಕವಟಗಿ ಮಠ, ಕಲಬುರಗಿ- ಬಿ.ಜಿ. ಪಾಟೀಲ್‌, ಚಿತ್ರದುರ್ಗ- ಕೆ.ಎಸ್‌. ನವೀನ್‌, ಮೈಸೂರು- ರಘು ಕೌಟಿಲ್ಯ, ಹಾಸನ- ವಿಶ್ವನಾಥ್‌, ಉತ್ತರ ಕನ್ನಡ- ಗಣಪತಿ ಉಳ್ವೆಕರ್‌, ಬೀದರ್‌- ಪ್ರಕಾಶ್‌ ಖಂಡ್ರೆ, ಬೆಂಗಳೂರು- ಎಚ್‌.ಎಸ್‌. ಗೋಪಿನಾಥ್‌ ರೆಡ್ಡಿ, ಮಂಡ್ಯ- ಮಂಜು ಕೆ.ಆರ್‌. ಪೇಟೆ, ಕೋಲಾರ- ಡಾ| ಕೆ.ಎನ್‌. ವೇಣುಗೋಪಾಲ್‌, ರಾಯಚೂರು- ವಿಶ್ವನಾಥ್‌ ಎ. ಬನಹಟ್ಟಿ, ಬೆಂಗಳೂರು ಗ್ರಾಮಾಂತರ – ಬಿ.ಎಂ.ನಾರಾಯಣಸ್ವಾಮಿ, ಬಳ್ಳಾರಿ- ವೈ.ಎನ್‌.ಸತೀಶ್‌, ತುಮಕೂರು- ಎನ್‌.ಲೋಕೇಶ್‌, ವಿಜಯಪುರ- ಪಿ.ಎಚ್‌.ಪೂಜಾರ.

ಇದನ್ನೂ ಓದಿ:ಸಮಾನ ನಾಗರಿಕ ಸಂಹಿತೆ ಜಾರಿ ಮಾಡಿ: ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

Advertisement

ಬೆಳಗಾವಿ, ವಿಜಯಪುರ, ಮೈಸೂರು, ಧಾರವಾಡ, ದಕ್ಷಿಣ ಕನ್ನಡದ ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಂದೇ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಲಾಗಿದೆ.

ಕಾಂಗ್ರೆಸ್‌ ಪಟ್ಟಿ ಇಂದು ಬಿಡುಗಡೆ?
ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಶನಿವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲು ದಿಲ್ಲಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಜ್ಯ ಉಸ್ತು ವಾರಿ ರಣದೀಪ್‌ ಸಿಂಗ್‌ ಸುಜೇì ವಾಲಾ ಸೇರಿ ವರಿಷ್ಠರ ಜತೆ ಸಮಾ ಲೋಚನೆ ಯಲ್ಲಿದ್ದು, ಅಭ್ಯರ್ಥಿಗಳ ಪಟ್ಟಿ ಶನಿವಾರ ಬಿಡುಗಡೆ ಯಾಗ ಲಿದೆ ಎಂದು ತಿಳಿಸಿದ್ದಾರೆ.

ಇದರ ನಡುವೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಸೋನಿಯಾ ಗಾಂಧಿ ಯವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಅಭ್ಯರ್ಥಿಗಳ ಆಯ್ಕೆ ವಿಚಾರವೂ ಪ್ರಸ್ತಾವವಾಗಿದೆ ಎನ್ನಲಾಗಿದೆ. ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಸೋಮವಾರ ಬಿಡುಗಡೆ ಮಾಡುವುದಾಗಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next