Advertisement

ಪರಿಷತ್‌ ಚುನಾವಣೆ: 99% ಮತದಾನ 

06:50 AM Sep 07, 2018 | Team Udayavani |

ವಿಜಯಪುರ/ಬೆಂಗಳೂರು: ವಿಜಯಪುರ-ಬಾಗಲಕೋಟೆ ನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ತಿನ ದ್ವಿಸದಸ್ಯ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಶೇ.99.07ರಷ್ಟು ಮತದಾನವಾಗಿದೆ.

Advertisement

ಕ್ಷೇತ್ರದ ವ್ಯಾಪ್ತಿಗೆ ಬರುವ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 8,187 ಮತದಾರರ ಪೈಕಿ 8,111 ಮಂದಿ ಮತ
ಚಲಾಯಿಸಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆದಿತ್ತು. ಮತ ಎಣಿಕೆ ಕಾರ್ಯ ಸೆ.11ರಂದು ನಡೆಯಲಿದ್ದು, ಅದೇ ದಿನ ಫ‌ಲಿತಾಂಶ ಹೊರಬೀಳಲಿದೆ.

ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪಕ್ಷೇತರ ಅಭ್ಯರ್ಥಿ ಬಸನಗೌಡ ಪಾಟೀಲ್‌ ಯತ್ನಾಳ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ಈಗ ಉಪ ಚುನಾವಣೆ ನಡೆದಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ಸಹಮತದ ಅಭ್ಯರ್ಥಿಯಾಗಿ ಮಾಜಿ ಸಚಿವ ಎಂ.ಬಿ ಪಾಟೀಲ್‌ ಸಹೋದರ ಸುನೀಲ್‌ ಗೌಡ ಹಾಗೂ ಬಿಜೆಪಿಯಿಂದ ಗೂಳಪ್ಪ ಶಟಗಾರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಸೆ.11ರಂದು ಇವರ ಭವಿಷ್ಯ ನಿರ್ಧಾರವಾಗಲಿದೆ. ದ್ವಿಸದಸ್ಯತ್ವದ ಈ ಕ್ಷೇತ್ರದಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್‌ನ
ಎಸ್‌.ಆರ್‌. ಪಾಟೀಲ್‌ ಪ್ರತಿನಿಧಿಸುತ್ತಿದ್ದಾರೆ.ಉಪ ಚುನಾವಣೆಯಲ್ಲಿ ಗೆದ್ದವರ ಅಧಿಕಾರಾವಧಿ 2022ರ ಜನವರಿಗೆ ಕೊನೆಗೊಳ್ಳಲಿದೆ.

Advertisement

ಸಿದ್ದು, ಮನಗೂಳಿ, ಶಿವಾನಂದ ಮತದಾನಕ್ಕೆ ಗೈರು
ಬಾದಾಮಿ ಶಾಸಕ ಸಿದ್ದರಾಮಯ್ಯ,ವಿಜಯಪುರ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ಶಾಸಕ, ಆರೋಗ್ಯ ಸಚಿವ ಶಿವಾನಂದ ಪಾಟೀಲ, ಸಿಂದಗಿ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಸೇರಿ 59 ಪುರುಷ ಜನಪ್ರತಿನಿಧಿಗಳು ಹಾಗೂ 17 ಮಹಿಳಾ ಮತದಾರರು ಸೇರಿ 76 ಸದಸ್ಯರು ಮತದಾನ ಮಾಡಿಲ್ಲ. ಸಿದ್ದರಾಮಯ್ಯ ಯುರೋಪ್‌ ಪ್ರವಾಸಕ್ಕೆ ತೆರಳಿದ್ದರೆ, ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಇಸ್ರೇಲ್‌ ಪ್ರವಾಸಕ್ಕೆ ತೆರಳಿದ್ದಾರೆ. ಗುರುವಾರ ಸಚಿವ ಸಂಪುಟ ಸಭೆ ಇದ್ದ ಕಾರಣ ಶಿವಾನಂದ ಪಾಟೀಲ ಮತದಾನ ಮಾಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next