Advertisement

ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದ ಕರಾವಳಿಗರು: ಗಾಂಧೀಜಿ ಕರೆಗೆ ಓಗೊಟ್ಟ ಧೀರರು

01:04 AM Aug 15, 2020 | mahesh |

ಶತಮಾನಗಳ ಕಾಲ ಭಾರತೀಯರ ಮೇಲೆ ದಬ್ಟಾಳಿಕೆ ನಡೆಸುತ್ತ ದೇಶದ ಸಂಪತ್ತನ್ನು ಲೂಟಿಗೈಯ್ಯುತ್ತಿದ್ದ ಬ್ರಿಟಿಷರ ವಿರುದ್ಧ ಜನರು ಸಿಡಿದೆದ್ದು ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆದರು. ಪ್ರತಿಯೋರ್ವ ಸ್ವಾತಂತ್ರ್ಯ ಹೋರಾಟಗಾರರು ತಮ್ಮದೇ ಆದ ಕಾರ್ಯತಂತ್ರ, ನಡೆಗಳ ಮೂಲಕ ದೇಶವನ್ನು ದಾಸ್ಯದ ಸಂಕೋಲೆಯಿಂದ ಮುಕ್ತಗೊಳಿಸಿದರು. ಇಡೀ ವಿಶ್ವಕ್ಕೇ ಮಾದರಿಯಾಗುವಂತೆ ಭಾರತೀಯರು ನಡೆಸಿದ ಈ ಹೋರಾಟದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವರು ಸ್ವಯಂಪ್ರೇರಿತರಾಗಿ ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ನಮ್ಮ ಹಿರಿಯರು ವಹಿಸಿದ ಪಾತ್ರ, ಅವರು ಎದುರಿಸಿದ ಸಂಕಷ್ಟ, ಶಿಕ್ಷೆಯ ಕೆಲವೊಂದು ಘಟನಾವಳಿಗಳ ಸಂಕ್ಷಿಪ್ತ ಚಿತ್ರಣವನ್ನು ಅವರ ಸಂಬಂಧಿಕರು, ಸ್ನೇಹಿತರು ಇಲ್ಲಿ ಬಿಚ್ಚಿಟ್ಟಿದ್ದಾರೆ.

Advertisement

ಬ್ರಿಟಿಷರಿಗೆ “ಥೂ’ ಎಂದಿದ್ದ ಬಾಲಕ ಸ್ವಾತಂತ್ರ್ಯ ಹೋರಾಟಗಾರ!
1942ರ ಆಗಸ್ಟ್‌ 9ರಂದು ಕ್ವಿಟ್‌ ಇಂಡಿಯಾ ಚಳವಳಿ ನಡೆಯುವಾಗ ದೇಶಾದ್ಯಂತ ಚಳವಳಿ ನಡೆಸಲು ನಿರ್ಧರಿಸಲಾಗಿತ್ತು. ಮೂಲ್ಕಿ ವೃತ್ತದಲ್ಲಿ ಸಭೆ ಏರ್ಪಟ್ಟಿತ್ತು. ಭಾಷಣ ಮಾಡಿದ ಪ್ರಮುಖರನ್ನು ಪೊಲೀಸರು ಬಂಧಿಸುವುದಿತ್ತು. ಮಕ್ಕಳು ಭಾಷಣ ಮಾಡಿದರೆ ಬಂಧಿಸಲು ಕಾನೂನಿನ ತೊಡಕು ಆಗುತ್ತಿತ್ತು. ಆಗ ರಮೇಶ ಎಂಬ ಬಾಲಕ ಸ್ವಾತಂತ್ರ್ಯ ಹೋರಾಟಗಾರರ ಕಣ್ಣಿಗೆ ಬಿದ್ದ. ಹೀಗೆ ರಮೇಶನಿಗೆ ಭಾಷಣ ಮಾಡುವ ಪಟ್ಟವನ್ನು ಕಾಂಗ್ರೆಸ್‌ ನಾಯಕರು ಕಟ್ಟಿದರು. ಮೂಲ್ಕಿ ಕಡವಿನಬಾಗಿಲು ಶಾಂಭವಿ ಗಾರ್ಡನ್‌ನಿಂದ ಗಾಂಧಿ ಮೈದಾನದವರೆಗೆ 1.5 ಕಿ.ಮೀ. ಉದ್ದದ ಪ್ರತಿಭಟನ ಮೆರವಣಿಗೆ ನಡೆಯಿತು. ಇದೊಂದು ಅಭೂತಪೂರ್ವ ಮೆರವಣಿಗೆಯಾಗಿತ್ತು.

“ಭಾರತೀಯರನ್ನು ಶೋಷಣೆ ಮಾಡಿ, ರಾಜ್ಯಗಳ ವಾರಸುದಾರಿಕೆಗೆ ದತ್ತಕ್ಕೆ ಪಡೆದ ಮಕ್ಕಳು ಅರ್ಹರಲ್ಲ ಎಂಬ ಕಾನೂನು ತಂದು ನಮ್ಮೊಳಗೆ ಕಚ್ಚಾಟ ಏರ್ಪಡಿಸಿ ಅಧಿಕಾರವನ್ನು ಕಬಳಿಸಿದವರು ಬ್ರಿಟಿಷರು. ಭಾರತದ 30 ಕೋಟಿ ಜನರು (ಆಗಿನ ಜನಸಂಖ್ಯೆ) ಹಿಮಾಲಯದ ತುತ್ತತುದಿಗೇರಿ “ಥೂ’ ಎಂದು ಉಗುಳಿದರೆ ಕೊಚ್ಚಿ ಹೋಗುವಷ್ಟು ಇರುವ ಜನರು ನಮ್ಮನ್ನು ಆಳುತ್ತಿದ್ದಾರೆ’ ಎಂದು ರಮೇಶ ಘರ್ಜಿಸಿ ಭಾಷಣ ಮಾಡಿದಾಗ ಪ್ರಚಂಡ ಕರತಾಡನ ಕೇಳಿಬಂತು.

ಈ ಸ್ಮರಣೀಯ ಘಟನೆಯನ್ನು 2006ರ ಆಗಸ್ಟ್‌ 14ರ ಮಧ್ಯರಾತ್ರಿ ಉಡುಪಿ ರಥಬೀದಿಯಲ್ಲಿ ಆಯೋಜಿಸಿದ ಸ್ವಾತಂತ್ರೊéàತ್ಸವದಲ್ಲಿ ಬಿಚ್ಚಿಟ್ಟವರು ಘಟನೆಯ ಸಾಕ್ಷಿ, ಸ್ವಾತಂತ್ರ್ಯ ಹೋರಾಟಗಾರ ಬಿ. ಶಂಭು ಶೆಟ್ಟಿ ಅವರು. ಶೆಟ್ಟಿಯವರು ಆಗಾಗ ಈ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದರು. ರಮೇಶ ಯಾರೆಂದು ಬಲ್ಲಿರಾ? ಅದಮಾರು ಮಠದ 31ನೆಯ ಪೀಠಾಧಿಪತಿಯಾಗಿ ಸಾಂಪ್ರದಾಯಿಕ

ಚಿನ್ನಾಭರಣ, ವಿದೇಶಿ ಬಟ್ಟೆಗಳಿಂದ ದೂರ ಉಳಿದಿದ್ದ ವಿನತಾ

ಗಾಂಧೀಜಿ ಅವರು ಪುತ್ತೂರಿನ ಡಾ| ಸುಂದರ ರಾಯರ ಮನೆಗೆ ಬಂದು ತಂಗಿದಾಗ ಎಂದಿನಂತೆ ತಮ್ಮ ಯಾತ್ರೆಯ ಉದ್ದೇಶವನ್ನು ಹೇಳಿ ದೇಣಿಗೆ ಸಂಗ್ರಹಿಸುವ ಮಾತುಗಳನ್ನಾಡಿದ್ದರು. ಅಲ್ಲೇ ಇದ್ದ ಡಾ| ಸುಂದರ ರಾಯರ ಮಗಳು 14ರ ಹರೆಯದ ಬಾಲಕಿ ಗೌರಿದೇವಿ ಗಾಂಧೀಜಿ ಮಾತುಗಳಿಂದ ಪ್ರೇರಿತಳಾಗಿ ತನ್ನ ಕೈಗಳಿಂದ ಚಿನ್ನದ ಬಳೆಗಳನ್ನು ತೆಗೆದು ಗಾಂಧೀಜಿಗೆ ಅರ್ಪಿಸಿದ್ದಳು. ಈ ಕಾರಣದಿಂದ ಗೌರೀದೇವಿ “ಚಿನ್ನ ಗೌರಿ’ ಎಂಬ ಹೆಸರಿನಿಂದ ಪ್ರಸಿದ್ಧಳಾದಳು.

Advertisement

ಈ ಅನಿರೀಕ್ಷಿತ ಪ್ರಸಂಗದಿಂದ ಹಿರಿಯರೆಲ್ಲರೂ ದಂಗಾಗಿದ್ದರಂತೆ. ಆ ಘಟನೆ ವೇಳೆ ಸುಂದರ ರಾಯರ ತಮ್ಮ, ನ್ಯಾಯವಾದಿ ಸದಾಶಿವ ರಾವ್‌, ಅವರ ಬಾವ ಡಾ|ಕೋಟ ಶಿವರಾಮ ಕಾರಂತ, ಸಹಕಾರಿ ಧುರೀಣ ಮೊಳಹಳ್ಳಿ ಶಿವರಾವ್‌ ಉಪಸ್ಥಿತರಿದ್ದರು. ಡಾ| ಸುಂದರ ರಾವ್‌ ಅವರು ಆ ಕಾಲದ ದೊಡ್ಡ ಮೊತ್ತ 101 ರೂ. ದೇಣಿಗೆಯನ್ನು ದಲಿತೋದ್ಧಾರದ ನಿಧಿಗೆ ನೀಡಿದರು.

ಪುತ್ತೂರಿನಲ್ಲಿ ನಡೆದ ಸಭೆಯಲ್ಲಿ ಗೌರಿ ಉಂಗುರವನ್ನು ಕೊಟ್ಟರು ಎಂಬ ಮಾತೂ ಇದೆ. ಸಭೆಯಲ್ಲಿ ಗಾಂಧೀಜಿಯವರು 15ನೆಯ ಶತಮಾನದ ಗುಜರಾತಿನ ಸಂತ ನರ್ಸಿ ಮೆಹ್ತಾ ಅವರ ಪ್ರಸಿದ್ಧ “ವೈಷ್ಣವ ಜನತೋ’ ಭಜನೆಯನ್ನು ಹಾಡುವಿರಾ ಎಂದು ಕೇಳಿದಾಗ ಉಳಿದವರಾರೂ ಮುಂದೆ ಬರಲಿಲ್ಲ. ಕೂಡಲೆ ಗೌರೀದೇವಿ ಆ ಭಜನೆಯನ್ನು ಸುಶ್ರಾವ್ಯವಾಗಿ ಹಾಡಿ ಗಾಂಧೀಜಿಯ ಮೆಚ್ಚುಗೆಗೆ ಪಾತ್ರರಾದರು. ಗೌರಿಯವರಿಗೆ ಪಿಟೀಲು, ಹಾಡುಗಾರಿಕೆ ಕೂಡ ಬರುತ್ತಿತ್ತು.

ಗಾಂಧೀಜಿಯವರು ಮತ್ತು ಅವರ ಸಂಗಡಿಗರು ಬಂದಾಗ ಇಡೀ ಮನೆಯನ್ನು ಖಾಲಿ ಮಾಡಿಕೊಟ್ಟಿದ್ದರು. ಈಗ ಅದೇ ಮನೆಯಲ್ಲಿ ಮೂರನೆಯ ತಲೆಮಾರಿನ ವೈದ್ಯ, ಅದೇ ಹೆಸರು ಹೊತ್ತ ಡಾ| ಸತ್ಯ ಸುಂದರ ರಾವ್‌ ವಾಸವಿದ್ದಾರೆ. ಗಾಂಧೀಜಿಯವರ ಪ್ರಭಾವದಿಂದ 1942ರ ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭ ಡಾ| ಸುಂದರ ರಾವ್‌ ಸಹಿತ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದವರು ಮನೆಯಲ್ಲಿದ್ದ ವಿದೇಶೀ ಬಟ್ಟೆಗಳನ್ನು ಸುಟ್ಟು ಹಾಕಿ ಜೀವನದ ಕೊನೆಯವರೆಗೂ ಖದ್ದರ್‌ ಬಟ್ಟೆ ಧರಿಸುತ್ತಿದ್ದರು.

“ಗೌರಿಯವರ ಆದರ್ಶದ ಬಗ್ಗೆ ನಮಗೆ ಕೇಳಿ ಗೊತ್ತಿತ್ತೇ ವಿನಾ ಮಹತ್ವ ಗೊತ್ತಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಾನು ಹುಟ್ಟಿದ್ದು ಈ ಘಟನೆ ಅನಂತರ. 1946ರಲ್ಲಿ ನನ್ನ ತಾಯಿ ಮೃತಪಟ್ಟರು. ಚಿಕ್ಕಪ್ರಾಯದಲ್ಲಿ ಕೇಳಿದ ವಿಚಾರಗಳನ್ನು ಈಗ ನನ್ನ ಚಿಕ್ಕತಾಯಿ ಮಂಗಳೂರಿನಲ್ಲಿ ನೆಲೆಸಿರುವ ಲಕ್ಷ್ಮೀಯವರೂ ಸೇರಿದಂತೆ ಹಿರಿಯರಲ್ಲಿ ವಿಚಾರಿಸಿದಾಗ ಒಂದೊಂದೆ ವಿಚಾರ ಹೊರಬರುತ್ತಿದೆ’ ಎಂದು ಉಡುಪಿ ಅಂಬಲಪಾಡಿ ನಿವಾಸಿ, ಸೇನಾ ವೈದ್ಯರಾಗಿ, ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸರ್ಜನ್‌ ಆಗಿ ಸೇವೆ ಸಲ್ಲಿಸಿದ್ದ ಡಾ| ಹೇಮಚಂದ್ರ ಹೊಳ್ಳ ಹೇಳುತ್ತಾರೆ.

ಕೈಗಳಿಂದ ಬಳೆಗಳನ್ನೇ ತೆಗೆದು ಕೊಟ್ಟ ಪುತ್ತೂರಿನ “ಚಿನ್ನ ಗೌರಿ’

ಬಾಣಂತಿ ಆಗಿದ್ದರೂ ಚಳವಳಿಗೆ ಧುಮುಕಿದ್ದ ಲಕ್ಷ್ಮೀ ರೈ!

ಪುತ್ತೂರು ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ಪಾತ್ರ ವಹಿಸಿದವರಲ್ಲಿ ಲಕ್ಷ್ಮೀ ರೈ ಪ್ರಮುಖರು. ಇವರ ಮನೆ ಉಪ್ಪಿನಂಗಡಿಯ ನಟ್ಟಿಬೈಲು. ಸ್ವಾತಂತ್ರ್ಯ ಹೋರಾಟದ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ ಅವಿಭಜಿತ ದ.ಕ. ಜಿಲ್ಲೆಯ ಪ್ರಥಮ ಬಂಟ ಮಹಿಳೆ ಎಂಬ ಕೀರ್ತಿ ಇವರಿಗೆ ಇದೆ. ಇವರ ಪತಿ ಪುತ್ತೂರು ಸಮೀಪದ ಬೆಳ್ಳಿಪ್ಪಾಡಿ ಮನೆತನದ ವೆಂಕಪ್ಪ ರೈ. ವೆಂಕಪ್ಪ ರೈ ಆಗ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷರು. ಲಕ್ಷ್ಮೀ ರೈ ಕುಂಬ್ಳೆ ಸಮೀಪದ ಹೇರೂರು ಮನೆತನದ ಯಜಮಾನರಾಗಿದ್ದ ಮಂಜಣ್ಣ ಶೆಟ್ಟಿಯವರ ಪುತ್ರಿ. 1931ರಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ ಸಮಯ ಪತಿ, ಪತ್ನಿ ಜತೆ ಸೇರಿ ಚಳವಳಿಯಲ್ಲಿ ಮುಂದೆ ನಿಂತು ಜೈಲು ಸೇರಿದರು. 1931ರ ಎಪ್ರಿಲ್‌ 14ರಿಂದ ಆಗಸ್ಟ್‌ 13ರ ವರೆಗೆ ಕಾರಾಗೃಹವಾಸದಲ್ಲಿದ್ದರು. ಪ್ರಾಯಃ ಎರವಾಡ ಜೈಲು. ಜೈಲು ಸೇರುವಾಗ ಲಕ್ಷ್ಮೀ ರೈ ಬಾಣಂತಿ. ಆಗ ಹುಟ್ಟಿದ್ದ ಮಗು ಕುಶಲನಾಥ. ಮಗುವನ್ನು ಲಕ್ಷ್ಮೀ ರೈ ಮಗುವಿನ ಚಿಕ್ಕಪ್ಪ ತಿಮ್ಮಪ್ಪ ರೈ ಅವರ ಮಡಿಲಿಗೆ ಹಾಕಿ ಚಳವಳಿಗೆ ಮುನ್ನುಗ್ಗಿದರು.

ಗಾಂಧೀಜಿಯವರು 1934ರ ಫೆಬ್ರವರಿ 24ರಂದು ಪುತ್ತೂರಿಗೆ ಬಂದಾಗ ವೆಂಕಪ್ಪ ರೈ ನೇತೃತ್ವದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು. ಕುಶಲನಾಥ ತಾಯಿ ಲಕ್ಷ್ಮೀ ರೈಯವರೊಂದಿಗೆ ಬಂದಿದ್ದ. ಗಾಂಧೀಜಿಯವರ ಅಸ್ಪೃಶ್ಯತೆ ನಿವಾರಣೆಯ ಕಾರ್ಯಕ್ಕೆ ಲಕ್ಷ್ಮೀ ರೈಯವರು ಕುಶಲನಾಥನ ಕೈಯಲ್ಲಿದ್ದ ಚಿನ್ನದ ಬಳೆ, ಕುತ್ತಿಗೆಯಲ್ಲಿದ್ದ ಚಿನ್ನದ ಹಾರವನ್ನು ಗಾಂಧೀಜಿಯವರ ಕೈಗೆ ಇತ್ತರು. ಆಗ ಕುಶಲನಾಥನ ಕೈ ಮೇಲೆ ಬೊಕ್ಕೆಗಳೂ ಇದ್ದವು. ಬೊಕ್ಕೆ ಇದ್ದರೂ ಲೆಕ್ಕಿಸದೆ ಬಳೆಯನ್ನು ಕಳಚಿ ದಾನ ಮಾಡಿದರು. ಎಂಜಿನಿಯರಿಂಗ್‌ ಕಲಿತ ಕುಶಲನಾಥರು ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸಿ ಈಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಗಾಂಧೀಜಿ ಮಾನಪತ್ರ ಓದಿದ್ದ ಬಾಲಕಿ ನಿರುಪಮಾ ನಾಯಕ್‌
ಗಾಂಧೀಜಿಯವರು 1934ರ ಫೆಬ್ರವರಿ 25ರಂದು ಉಡುಪಿಗೆ ಬಂದಾಗ ನಗರಸಭೆಯಿಂದ ಮಾನಪತ್ರ ಅರ್ಪಿಸಲು ನಿರ್ಧರಿಸಲಾಗಿತ್ತು. ಗಾಂಧೀಜಿಯವರು ಸಾಮಾನ್ಯವಾಗಿ ಮಾನಪತ್ರ ಸಮರ್ಪಿಸುವುದನ್ನು ಒಪ್ಪುತ್ತಿರಲಿಲ್ಲ. ಹೀಗಾಗಿ ಸಂಘಟಕರು ಚಿಕ್ಕ ಹುಡುಗಿಯಾದ ನಿರುಪಮಾಳನ್ನು ಮಾನಪತ್ರ ಓದಲು ನಿಯುಕ್ತಿಗೊಳಿಸಿದರು. ಪತ್ರ ಹಿಂದಿಯಲ್ಲಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಂಗಾಳ ನಾಯಕ್‌ ಕುಟುಂಬದ ಪಾತ್ರ ಮಹತ್ವದ್ದು. ಪಾಂಗಾಳ ಮಂಜುನಾಥ ನಾಯಕ್‌ ಕಲ್ಲಿಕೋಟೆಯಲ್ಲಿಯೂ ಮತ್ತು ಮನೋರಮಾ ನಾಯಕ್‌ ವೆಲ್ಲೂರಿನಲ್ಲಿಯೂ ಜೈಲುವಾಸ ಅನುಭವಿಸಿದ್ದರು. ಅವರ ಮಗಳು ಬಾಲಕಿ ನಿರುಪಮಾ. ಆಗಲೇ ದೇಶಪ್ರೇಮದ ಸಂಕೇತವಾಗಿ ಹಿಂದಿ ಓದಿದ್ದಳು. ನಿರುಪಮಾಗೆ ಆಗ 11 ವರ್ಷ. ನಿರುಪಮಾ ಕುತ್ತಿಗೆಯಲ್ಲಿ ಚಿನ್ನದ ಹಾರ, ಕೈಯಲ್ಲಿ ಚಿನ್ನದ ಬಳೆ ಇತ್ತು. “ಇದೇಕೆ ನಿನಗೆ? ನನಗೆ ಕೊಡ್ತಿಯಾ?’ ಎಂದು ಗಾಂಧಿ ಕೇಳಿದರು. ನಿರುಪಮಾ ಕೊಟ್ಟಳು. ಕಿವಿಯ ಆಭರಣ ಕೊಡಲು ಮುಂದಾದಾಗ ಗಾಂಧಿಯವರೇ “ಇಷ್ಟು ಸಾಕು, ಇನ್ನು ಬೇಡ’ ಎಂದರು.

ಚಿನ್ನವನ್ನು ವಾಪಸು ಕೊಟ್ಟಾಗ ಗಾಂಧೀಜಿಯವರು “ನೀನು ಈಗ ಕೊಡುತ್ತೀ. ತಂದೆ ಬಳಿ ಹೋಗಿ ಬೇರೆ ಚಿನ್ನವನ್ನು ಮಾಡಿಸಿ ಹಾಕಿಕೊಳ್ಳುತ್ತೀ’ ಎಂದರು. “ಇಲ್ಲ ನಾನು ಹಾಗೇ ಮಾಡುವುದಿಲ್ಲ’ ಎಂದಳು ನಿರುಪಮಾ. “ಹೀಗೆಲ್ಲ ಸಿರಿವಂತಿಕೆಯನ್ನು ಪ್ರದರ್ಶನ ಮಾಡಬಾರದು. ನಮ್ಮದು ಬಡದೇಶ. ಇನ್ನು ಮುಂದೆ ಆಭರಣ ತೊಡಬಾರದು’ ಎಂದು ಗಾಂಧೀಜಿ ಪ್ರಮಾಣ ಮಾಡಿಸಿಕೊಂಡರು. ಅಂದಿನಿಂದ ಕೊನೆಯವರೆಗೂ ಕಿವಿಯ ಆಭರಣ ಹೊರತುಪಡಿಸಿದರೆ ಬೇರಾವುದೇ ಆಭರಣವನ್ನು ನಿರುಪಮಾ ತೊಟ್ಟಿರಲಿಲ್ಲ. ಹಿಂದೆ “ಉದಯವಾಣಿ’ಯೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡಿದ್ದ ನಿರುಪಮಾ “ನನಗೆ ಆಗಲೂ ಆಭರಣದ ವ್ಯಾಮೋಹ ಇದ್ದಿರಲಿಲ್ಲ, ಈಗಲೂ ಇಲ್ಲ’ ಎಂದು ಹೇಳಿದ್ದರು.

ನಿರುಪಮಾ ಸ್ತ್ರೀರೋಗ ಮತ್ತು ಪ್ರಸೂತಿತಜ್ಞೆಯಾದರು. ಇಂಗ್ಲೆಂಡ್‌ನ‌ಲ್ಲಿ ಎಂಆರ್‌ಸಿಒಜಿ ಉನ್ನತ ವ್ಯಾಸಂಗ ಮಾಡಿದರು. ಬರೋಡಾದ ರಾಸ್‌ ಎಂಬ ಹಳ್ಳಿಯಲ್ಲಿ ಕಸ್ತೂರ್ಬಾ ಗಾಂಧಿ ಸ್ಮಾರಕ ಟ್ರಸ್ಟ್‌ನವರು ನಡೆಸುತ್ತಿದ್ದ ಆಸ್ಪತ್ರೆ ಮತ್ತು ದಾದಿಯರು-ಕೆಲಸಗಾರರ ತರಬೇತಿ ಕೇಂದ್ರದಲ್ಲಿ, ಕೇಂದ್ರ ಸರಕಾರದ ಆರೋಗ್ಯ ಸೇವಾ ವಿಭಾಗಕ್ಕೆ ಸೇರಿದರು, ಪಾಂಡಿಚೇರಿಯ ಜಿಪೆರ್‌ನಲ್ಲಿ ಪ್ರಾಧ್ಯಾಪಕರಾಗಿ, ಅನಂತರ ವೈದ್ಯಕೀಯ ಅಧೀಕ್ಷಕರಾಗಿ ಸೇವೆ ಸಲ್ಲಿಸಿ 1981ರಲ್ಲಿ ನಿವೃತ್ತಿಯಾದರು. ನಿರುಪಮಾ ಅವರು ಚಿನ್ನ ಸಮರ್ಪಿಸಿದ ಘಟನೆಯನ್ನು ಕಂಡಿದ್ದ ಹಿರಿಯ ಪತ್ರಕರ್ತ ಡಾ|ಎಂ.ವಿ.ಕಾಮತ್‌ ತಮ್ಮ ಭಾಷಣದಲ್ಲಿ ಆಗಾಗ ನೆನಪಿಸಿಕೊಳ್ಳುತ್ತಿದ್ದರು.

ಪೊಲಿಸರ ಲಾಠಿ ಏಟಿಗೆ ಜಗ್ಗದ ಎಂ.ಲೋಕಯ್ಯ ಶೆಟ್ಟಿ
ನನ್ನ ತಂದೆ ದಿ| ಎಂ.ಲೋಕಯ್ಯ ಶೆಟ್ಟಿಯವರು ಭಗತ್‌ ಸಿಂಗ್‌ರಂಥ ಕ್ರಾಂತಿಕಾರಿಗಳಿಂದ ಸ್ಫೂರ್ತಿ ಪಡೆದವರು. ಸ್ವಾತಂತ್ರ್ಯ ಚಳವಳಿಗಾಗಿ ನಡೆದ ವಿವಿಧ ಹೋರಾಟದಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದವರು.

18ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದ ಅವರು ಸ್ವಾತಂತ್ರ್ಯ ಸಂಗ್ರಾಮದ ಜತೆಗೆ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ|ಅಮ್ಮೆಂಬಳ ಬಾಳಪ್ಪ ಅವರ ಮಾರ್ಗದರ್ಶನವೂ ಇವರಿಗೆ ಇತ್ತು. 1942ರಲ್ಲಿ ದೇಶಾದ್ಯಂತ ಆಯೋಜನೆಗೊಂಡಿದ್ದ “ಕ್ವಿಟ್‌ ಇಂಡಿಯಾ ಚಳವಳಿ’ಯ ಅಂಗವಾಗಿ ಮಂಗಳೂರಿನಲ್ಲಿ ಯು.ಪಿ. ಮಲ್ಯ ಮತ್ತು ಸೈಡೇಲ್‌ ತಿಮ್ಮಪ್ಪ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಮಂಗಳೂರಿನಲ್ಲಿ ಬ್ರಿಟಿಷರು ಸ್ಥಾಪಿಸಿದ್ದ ಸಂಪರ್ಕ ಸಾಧನಗಳನ್ನು ನಾಶಪಡಿಸಿ ಅವರನ್ನು ದುರ್ಬಲಗೊಳಿಸುವ ಕಾರ್ಯಕ್ಕೆ ಪ್ರಯತ್ನ ನಡೆಸಿದ್ದರು.

ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ದಿ| ಎಂ.ಡಿ. ಅಧಿಕಾರಿಯವರ ನೇತೃತ್ವದಲ್ಲಿ ಸಾರ್ವಜನಿಕ ಸಭೆ ಜರಗಿತ್ತು. ಆಗ ಪೊಲೀಸರು ಭಾಗವಹಿಸಿದ್ದ ಜನರ ಮೇಲೆ ಲಾಠಿ ಚಾರ್ಚ್‌ ಮಾಡಿದ್ದರು. ಪೊಲೀಸರ ಲಾಠಿಯನ್ನು ಧೈರ್ಯದಿಂದ ಎದುರಿಸಿದ್ದ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬ್ರಿಟಿಷರ ವಿರುದ್ಧ ಬೆಳ್ಳೂರು ನಾರಾಯಣ ಶೆಟ್ಟಿ ಅವರ ನೇತೃತ್ವದಲ್ಲಿ ಸಂಘಟಿಸಿದ್ದ ಮೆರವಣಿಗೆಯಲ್ಲಿ ಸುಮಾರು 150 ಯುವಕರನ್ನು ಸಂಘಟಿಸಿದ್ದರು. ಪೊಲೀಸರು ಲೋಕಯ್ಯ ಶೆಟ್ಟಿಯವರನ್ನು ಬಂಧಿಸಿ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಒಂದು ತಿಂಗಳು ಬಂಧನದಲ್ಲಿರಿಸಿದ್ದರು. ಮುಂದಕ್ಕೆ ಅವರನ್ನು ಎರಡು ವರ್ಷಗಳ ಕಾಲ ವೆಲ್ಲೂರು ಹಾಗೂ ತಂಜಾವೂರು ಜೈಲಿನಲ್ಲಿರಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಸುಭಾಶ್ಚಂದ್ರ ಬೋಸ್‌ ಅವರ ಹೆಸರಿನಲ್ಲಿ ಜೈಹಿಂದ್‌ ಯುವಕ ಮಂಡಳಿ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದರು.
-ಸುರೇಶ್ಚಂದ್ರ ಶೆಟ್ಟಿ , ಮಂಗಳೂರು(ಎಂ.ಲೋಕಯ್ಯ ಶೆಟ್ಟಿ ಅವರ ಪುತ್ರ)

ಜೈಲು ಶಿಕ್ಷೆ ಅನುಭವಿಸಿದ್ದ ಬಿ.ವಿ. ಕಕ್ಕಿಲ್ಲಾಯ

ಬೇವಿಂಜೆ ವಿಷ್ಣು ಕಕ್ಕಿಲ್ಲಾಯರು (ಬಿ.ವಿ. ಕಕ್ಕಿಲ್ಲಾಯ) ಅವರು ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ, ಜೈಲುವಾಸ ಅನುಭವಿಸಿದ್ದರು. 1937-1942ರಲ್ಲಿ ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ದೇಶದ ಸ್ವಾತಂತ್ರ್ಯ ಚಳವಳಿಯತ್ತ ಆಕರ್ಷಿತರಾಗಿ, ಆಗಲೇ ಮಂಗಳೂರಿನಲ್ಲಿ ಸಕ್ರಿಯವಾಗಿದ್ದ ವಿದ್ಯಾರ್ಥಿ ಸಂಘಟನೆ ಎಐಎಸ್‌ಎಫ್‌ ಸೇರಿದ್ದರು. ಬಳಿಕ 1941ರಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷವನ್ನು ಸೇರಿ, 1942ರ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿ 9 ತಿಂಗಳು ಮಂಗಳೂರಿನ ಸಬ್‌ ಜೈಲ್‌ನಲ್ಲಿ ಶಿಕ್ಷೆಯನ್ನು ಅನುಭವಿಸಿದ್ದರು. ಬಿಡುಗಡೆಯಾದ ಬಳಿಕ ಮತ್ತೆ ಸ್ವಾತಂತ್ರ್ಯ ಹೋರಾಟದಲ್ಲೂ, ರೈತ-ಕಾರ್ಮಿಕರ ಸಂಘಟನೆಯಲ್ಲೂ ತೊಡಗಿಕೊಂಡು, 1946ರ ಕೊನೆಯಲ್ಲಿ ಮತ್ತೆ ಬಂಧಿಸಲ್ಪಟ್ಟರು. 1947ರ ಅಗಸ್ಟ್‌ 14-15ರ ನಡುರಾತ್ರಿಯಲ್ಲಿ ಕಣ್ಣೂರು ಜೈಲಿನಿಂದ ಬಿಡುಗಡೆಗೊಂಡರು.

ಸ್ವಾತಂತ್ರ್ಯದ ಮೊದಲ ದಿನ ಬೆಳಗ್ಗೆ ಮಂಗಳೂರು ತಲುಪಿದಾಗ ಅವರಿಗೆ ಭವ್ಯ ಸ್ವಾಗತ ದೊರೆತಿತ್ತು. ಆ ಬಳಿಕವೂ ಹಲವು ಜನಪರ ಚಳವಳಿಗಳ ನೇತೃತ್ವ ವಹಿಸಿದ್ದ ಕಕ್ಕಿಲ್ಲಾಯರು 1952-54ರಲ್ಲಿ ಮೊದಲ ರಾಜ್ಯಸಭೆಯ ಸದಸ್ಯರಾಗಿ ರಾಜ್ಯದ ಏಕೀಕರಣ, ಬರಗಾಲ ಇತ್ಯಾದಿ ಸಮಸ್ಯೆಗಳ ಬಗ್ಗೆ ದನಿಯೆತ್ತಿದರು. ಬಳಿಕ 1955ರ ಆಗಸ್ಟ್‌ 15ರಂದು ಕಕ್ಕಿಲ್ಲಾಯರ ನೇತೃತ್ವದ ತಂಡವು ಗೋವಾ ವಿಮೋಚನ ಹೋರಾಟದಲ್ಲಿ ಭಾಗವಹಿಸಿ ಇದ್ದುಸ್‌ ಎಂಬ ಹಳ್ಳಿಯೊಳಗೆ ನುಸುಳಿ ಭಾರತದ ಧ್ವಜಾರೋಹಣ ಮಾಡುವಲ್ಲಿ ಯಶಸ್ವಿಯಾಗಿತ್ತು. ಆಗ ಪೊಲೀಸರಿಂದ ಏಟು ಬಿದ್ದು ಹಲವರಿಗೆ ಗಾಯಗಳಾಗಿದ್ದವು.

1950-1956ರ ನಡುವೆ ಬಿ .ವಿ. ಕಕ್ಕಿಲ್ಲಾಯರು ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯರಾಗಿ ದುಡಿದಿದ್ದರು. ಎಪ್ಪತ್ತರ ದಶಕದಲ್ಲಿ ಭೂ ಸುಧಾರಣೆಗಾಗಿ ನಡೆದ ಹೋರಾಟಗಳ ಮುಂಚೂಣಿಯಲ್ಲಿದ್ದು, 1972-1983ರ ನಡುವೆ ಕರ್ನಾಟಕ ವಿಧಾನಸಭೆಯ ಶಾಸಕರಾಗಿ ಭೂಸುಧಾರಣ ಕಾಯಿದೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಅವರ ಪುತ್ರಸ ಪ್ರಸ್ತುತ ಮಂಗಳೂರಿನಲ್ಲಿರುವ ಡಾ| ಶ್ರೀನಿವಾಸ ಕಕ್ಕಿಲ್ಲಾಯ ನೆನಪಿಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next